ಹಾಕಿ ಏಷ್ಯನ್ ಚಾಂಪಿಯನ್ಸ್: ಮಲೇಷಿಯಾವನ್ನು 4-3 ಗೋಲುಗಳಿಂದ ಸೋಲಿಸಿ 4ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಭಾರತ 

ಇಲ್ಲಿನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 4-3 ಗೋಲುಗಳ ಮೂಲಕ ಗೆಲುವು ಸಾಧಿಸಿದ ಭಾರತ ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಚೆನ್ನೈ: ಇಲ್ಲಿನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮಲೇಷಿಯಾ ವಿರುದ್ಧ 4-3 ಗೋಲುಗಳ ಮೂಲಕ ಗೆಲುವು ಸಾಧಿಸಿದ ಭಾರತ ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಮೊದಲಾರ್ಧದಲ್ಲಿ ಮಲೇಷಿಯಾ ಆಕ್ರಮಣಕಾರಿ ಆಟವಾಡಿದ್ದರಿಂದ ಭಾರತೀಯರು ಎದುರಾಳಿಯನ್ನು ನಿರ್ಬಂಧಿಸಲು ಕಷ್ಟಪಟ್ಟರು. ಭಾರತ ಒಂಬತ್ತನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಜುಗ್ರಾಜ್ ಸಿಂಗ್  ನೆರವಿನೊಂದಿಗೆ ಮೊದಲ ಗೋಲು ಗಳಿಸಿತು. ಪಂದ್ಯ ಮುಂದುವರೆದಂತೆ ನಿಧಾನರಾದಂತೆ ಕಂಡುಬಂದ ಭಾರತೀಯ ಆಟಗಾರರು ತದನಂತರ ಆದ್ಬುತವಾಗಿ ಕಂಬ್ಯಾಕ್ ಮಾಡಿದರು. ಹರ್ಮನ್ ಪ್ರೀತ್ ಸಿಂಗ್ (45ನೇ ನಿಮಿಷ) ಗುರುಜಂತ್ ಸಿಂಗ್ (45ನೇ ನಿಮಿಷ) ಮತ್ತು ಆಕಾಶ್ ದೀಪ್ ಸಿಂಗ್ (56ನೇ ನಿಮಿಷ)ದಲ್ಲಿ ಗೋಲು ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.  ಇದನ್ನೂ ಓದಿ: ಹಾಕಿ ಏಷ್ಯನ್ ಚಾಂಪಿಯನ್ಸ್: ಜಪಾನ್ ಗೆ ಮೂರನೇ ಸ್ಥಾನ ಒಂದು ಹಂತದಲ್ಲಿ 3-3 ಗೋಲುಗಳಿಂದ ಎರಡು ತಂಡಗಳು ಸಮಾನ ಗೋಲುಗಳಿಸಿದಾಗ  ಮನ್‌ದೀಪ್ ಸಿಂಗ್ ಅವರಿಂದ ಪಾಸ್ ಪಡೆದ ಆಕಾಶದೀಪ್ ಸಿಂಗ್ ಮತ್ತೊಂದು ಗೋಲು ಗಳಿಸುವ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. ಇದೇ ಕ್ರೀಡಾಂಗಣದಲ್ಲಿ ಭಾರತಕ್ಕೆ ದೊರೆತ ನಾಲ್ಕನೇ ಗೆಲುವು ಇದಾಗಿದೆ. ಭಾರತ ಗೆಲುವು ಸಾಧಿಸುತ್ತಿದ್ದಂತೆಯೇ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. #WATCH | "Feels good to be a champion...," says Indian Men's Hockey Team Chief Coach Craig Fulton after India beat Malaysia (4-3) to clinch the Asian Champions Trophy, in Chennai https://t.co/OdgYS0YRBS pic.twitter.com/tojldsRtca — ANI (@ANI) August 12, 2023 #WATCH | Fans cheer for Team India after India beat Malaysia (4-3) to clinch the Asian Champions Trophy, in Chennai#AsianChampionsTrophy pic.twitter.com/ctAnzX9cXO— ANI (@ANI) August 12, 2023

ಹಾಕಿ ಏಷ್ಯನ್ ಚಾಂಪಿಯನ್ಸ್: ಮಲೇಷಿಯಾವನ್ನು 4-3 ಗೋಲುಗಳಿಂದ ಸೋಲಿಸಿ 4ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಭಾರತ 
Linkup
ಇಲ್ಲಿನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 4-3 ಗೋಲುಗಳ ಮೂಲಕ ಗೆಲುವು ಸಾಧಿಸಿದ ಭಾರತ ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಚೆನ್ನೈ: ಇಲ್ಲಿನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮಲೇಷಿಯಾ ವಿರುದ್ಧ 4-3 ಗೋಲುಗಳ ಮೂಲಕ ಗೆಲುವು ಸಾಧಿಸಿದ ಭಾರತ ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಮೊದಲಾರ್ಧದಲ್ಲಿ ಮಲೇಷಿಯಾ ಆಕ್ರಮಣಕಾರಿ ಆಟವಾಡಿದ್ದರಿಂದ ಭಾರತೀಯರು ಎದುರಾಳಿಯನ್ನು ನಿರ್ಬಂಧಿಸಲು ಕಷ್ಟಪಟ್ಟರು. ಭಾರತ ಒಂಬತ್ತನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಜುಗ್ರಾಜ್ ಸಿಂಗ್  ನೆರವಿನೊಂದಿಗೆ ಮೊದಲ ಗೋಲು ಗಳಿಸಿತು. ಪಂದ್ಯ ಮುಂದುವರೆದಂತೆ ನಿಧಾನರಾದಂತೆ ಕಂಡುಬಂದ ಭಾರತೀಯ ಆಟಗಾರರು ತದನಂತರ ಆದ್ಬುತವಾಗಿ ಕಂಬ್ಯಾಕ್ ಮಾಡಿದರು. ಹರ್ಮನ್ ಪ್ರೀತ್ ಸಿಂಗ್ (45ನೇ ನಿಮಿಷ) ಗುರುಜಂತ್ ಸಿಂಗ್ (45ನೇ ನಿಮಿಷ) ಮತ್ತು ಆಕಾಶ್ ದೀಪ್ ಸಿಂಗ್ (56ನೇ ನಿಮಿಷ)ದಲ್ಲಿ ಗೋಲು ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.  ಇದನ್ನೂ ಓದಿ: ಹಾಕಿ ಏಷ್ಯನ್ ಚಾಂಪಿಯನ್ಸ್: ಜಪಾನ್ ಗೆ ಮೂರನೇ ಸ್ಥಾನ ಒಂದು ಹಂತದಲ್ಲಿ 3-3 ಗೋಲುಗಳಿಂದ ಎರಡು ತಂಡಗಳು ಸಮಾನ ಗೋಲುಗಳಿಸಿದಾಗ  ಮನ್‌ದೀಪ್ ಸಿಂಗ್ ಅವರಿಂದ ಪಾಸ್ ಪಡೆದ ಆಕಾಶದೀಪ್ ಸಿಂಗ್ ಮತ್ತೊಂದು ಗೋಲು ಗಳಿಸುವ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. ಇದೇ ಕ್ರೀಡಾಂಗಣದಲ್ಲಿ ಭಾರತಕ್ಕೆ ದೊರೆತ ನಾಲ್ಕನೇ ಗೆಲುವು ಇದಾಗಿದೆ. ಭಾರತ ಗೆಲುವು ಸಾಧಿಸುತ್ತಿದ್ದಂತೆಯೇ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಹಾಕಿ ಏಷ್ಯನ್ ಚಾಂಪಿಯನ್ಸ್: ಮಲೇಷಿಯಾವನ್ನು 4-3 ಗೋಲುಗಳಿಂದ ಸೋಲಿಸಿ 4ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಭಾರತ