ವೈದ್ಯರು ಔಷಧ ಬ್ರ್ಯಾಂಡ್ ಉತ್ತೇಜನಕ್ಕೆ ಗಿಫ್ಟ್ ಸ್ವೀಕರಿಸುವಂತಿಲ್ಲ: ಎನ್‌ಎಂಸಿಯಿಂದ ಹೊಸ ನಿಯಮ

ವೈದ್ಯರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ಹೊಸ ನಿಯಮಗಳನ್ನು ರೂಪಿಸಿದೆ. ವೈದ್ಯರ ಮೇಲಿನ ಹಲ್ಲೆ ತಡೆಯುವಿಕೆ, ನೈತಿಕ ನಡವಳಿಕೆ, ರೋಗಿಗಳ ಆರೈಕೆಯಲ್ಲಿ ಪಾರದರ್ಶಕತೆ ಸೇರಿದಂತೆ ವೈದ್ಯ ವೃತ್ತಿಯಲ್ಲಿನ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ಆಯೋಗ ಈ ನಿಯಮಗಳನ್ನು ರೂಪಿಸಿದ್ದು, ಈ ಸಂಬಂಧ ಗೆಜೆಟ್ ಅಧಿಸೂಚನೆಯನ್ನೂ ಹೊರಡಿಸಿದೆ. ನೋಂದಾಯಿತ ವೈದ್ಯರು ಮತ್ತು ಅವರ ಕುಟುಂಬ ಸದಸ್ಯರು ಔಷಧಗಳ ಬ್ರ್ಯಾಂಡ್ ಪ್ರೋತ್ಸಾಹಕ್ಕೆ ನಗದು ಅಥವಾ ಇನ್ಯಾವುದೇ ರೂಪದಲ್ಲಿ ಉಡುಗೊರೆ ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ.