ಸ್ವಾತಂತ್ರ್ಯ ದಿನದಂದು SBI ಗ್ರಾಹಕರಿಗೆ ಸಿಹಿ ಸುದ್ದಿ: ಗೃಹ ಸಾಲದ ಮೇಲೆ ಭರ್ಜರಿ ಆಫರ್!

ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 75ನೇ ಸ್ವಾತಂತ್ರ್ಯ ದಿನದಂದು ತನ್ನ ಗ್ರಾಹಕರಿಗೆ ಸುವರ್ಣಾವಕಾಶ ನೀಡಿದೆ. SBI ಗೃಹ ಸಾಲದ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕ ಘೋಷಿಸಿದೆ.

ಸ್ವಾತಂತ್ರ್ಯ ದಿನದಂದು SBI ಗ್ರಾಹಕರಿಗೆ ಸಿಹಿ ಸುದ್ದಿ: ಗೃಹ ಸಾಲದ ಮೇಲೆ ಭರ್ಜರಿ ಆಫರ್!
Linkup
ಹೊಸದಿಲ್ಲಿ: ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಎನಿಸಿರುವ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 75ನೇ ಸ್ವಾತಂತ್ರ್ಯ ದಿನದಂದು ತನ್ನ ಗ್ರಾಹಕರಿಗೆ ಸುವರ್ಣಾವಕಾಶ ನೀಡಿದೆ. ಗೃಹ ಸಾಲದ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕ ಘೋಷಿಸಿದೆ. ಅಂದರೆ, ಗೃಹ ಸಾಲಗಳ ಮೇಲಿನ ಪ್ರೊಸೆಸಿಂಗ್‌ ಶುಲ್ಕವನ್ನು ಶೇ.100ರಷ್ಟು ಮನ್ನಾ ಮಾಡಿದೆ. ಪ್ರಸ್ತುತ ಗೃಹ ಸಾಲಗಳ ಮೇಲೆ ಶೇ.0.4ರಷ್ಟು ಪ್ರೊಸೆಸಿಂಗ್‌ ಶುಲ್ಕ ವಿಧಿಸಲಾಗುತ್ತಿತ್ತು. ಆಜಾದಿ ಕಾ ಅಮೃತ್ ಮಹೋತ್ಸವ ಅಭಿಯಾನದ ಅಡಿಯಲ್ಲಿ, ಎಸ್‌ಬಿಐನ ಈ ಆಕರ್ಷಕ ಗೃಹ ಸಾಲ(Home Lone) ಸೌಲಭ್ಯವನ್ನು ಆಗಸ್ಟ್ 15 ರಂದು ಪಡೆಯಬಹುದು. ಎಸ್‌ಬಿಐನ ಡಿಜಿಟಲ್ ಸೇವೆ ಯೋನೊ ಮೂಲಕ ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದಲ್ಲದೇ ಎಸ್‌ಬಿಐ 7208933140 ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಗೃಹ ಸಾಲಕ್ಕಾಗಿ ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು. ಎಸ್‌ಬಿಐ ಗೃಹ ಸಾಲದ ಬಡ್ಡಿ ದರ ಶೇ.6.70 ರಷ್ಟಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ 30 ಲಕ್ಷದವರೆಗಿನ ಗೃಹ ಸಾಲವನ್ನು ಶೇ. 6.70 ರ ಬಡ್ಡಿದರದಲ್ಲಿ ನೀಡುತ್ತಿದೆ. 30 ಲಕ್ಷದಿಂದ 75 ಲಕ್ಷದವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರವು ಶೇ.6.95 ರಷ್ಟಾಗುತ್ತದೆ. ಮತ್ತೆ 75 ಲಕ್ಷಕ್ಕಿಂತ ಹೆಚ್ಚಿನ ಪಡೆದರೆ ದಕ್ಕೆ ಬಡ್ಡಿದರವು ಶೇ.7.05 ರಷ್ಟಾಗುತ್ತದೆ. ಇಷ್ಟೇ ಅಲ್ಲದೆ ಯೂನೋ ಆಪ್‌ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಬಡ್ಡಿ ದರದಲ್ಲಿ 5 ಮೂಲಾಂಶಗಳಷ್ಟು (ಶೇ.0.05) ರಿಯಾಯಿತಿ ಘೋಷಿಸಿದೆ. ಇದಲ್ಲದೆ ಗೃಹ ಸಾಲ ಪಡೆಯುವ ಮಹಿಳೆಯರಿಗೆ ಕೂಡ ಬಡ್ಡಿದರದಲ್ಲಿ 5 ಮೂಲಾಂಶಗಳಷ್ಟು ರಿಯಾಯಿತಿ ಘೋಷಿಸಿದೆ. ಇತ್ತೀಚೆಗಷ್ಟೇ ಎಸ್‌ಬಿಐ ಗೃಹ ಸಾಲ ಪಡೆಯುವ ಗ್ರಾಹಕರಿಗೆ ಮಾನ್ಸೂನ್‌ ಧಮಾಕ ಆಫರ್ ಘೋಷಿಸಿತ್ತು. ಸಾಲ ಪಡೆಯುವ ಪ್ರೊಸೆಸಿಂಗ್ ಶುಲ್ಕವನ್ನು ಪೂರ್ಣವಾಗಿ ಮನ್ನಾ ಮಾಡಿತ್ತು. ಈ ಆಫರ್‌ನಿಂದ ತಮ್ಮ ಸ್ವಂತ ಮನೆ ಖರೀದಿಸುವವರಿಗೆ ಉತ್ತೇಜನ ಸಿಕ್ಕಂತಾಗಿದೆ. ಅಲ್ಲದೆ, ಬಡ್ಡಿ ದರ ಕೂಡ ಐತಿಹಾಸಿಕವಾಗಿ ಕಡಿಮೆಯಾಗಿದೆ ಎಂದು ಎಸ್‌ಬಿಐ ಎಂಡಿ (ಆರ್‌&ಡಿಬಿ) ಸಿ.ಎಸ್‌. ಶೆಟ್ಟಿ ತಿಳಿಸಿದ್ದರು. ಈ ಆಫರ್‌ ಆಗಸ್ಟ್‌ 31ರವರಗೆ ಲಭ್ಯವಿದೆ.