ನಾನೂ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿರುವೆ ಎಂದ ಆಪಲ್‌ ಸಿಇಒ ಟಿಮ್‌ ಕುಕ್‌!

ಆಪಲ್‌ ಸಿಇಒ ಟಿಮ್‌ ಕುಕ್‌ ವೈಯಕ್ತಿಕವಾಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಆಪಲ್‌ ಸಂಸ್ಥೆಯ ಹಣವನ್ನು ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವ ಯೋವುದೇ ಯೋಜನೆ ಹೊಂದಿಲ್ಲ ಎಂದೂ ತಿಳಿಸಿದ್ದಾರೆ.

ನಾನೂ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿರುವೆ ಎಂದ ಆಪಲ್‌ ಸಿಇಒ ಟಿಮ್‌ ಕುಕ್‌!
Linkup
ಹೊಸದಿಲ್ಲಿ: ಆಪಲ್ ಸಂಸ್ಥೆಯು ಕುರಿತಂತೆ ಗಮನಹರಿಸುತ್ತಿದೆ ಎಂದು ಸಿಇಒ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಆದರೆ, ಈ ಕುರಿತು ಆಪಲ್‌ ಸಂಸ್ಥೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಬಗ್ಗೆ ಹೆಚ್ಚನ ವಿವರ ತಿಳಿಸಿರಲಿಲ್ಲ. ಆದರೆ, ಇದೀಗ ಟಿಮ್‌ ಕುಕ್‌ ಅವರೇ ವೈಯಕ್ತಿಕವಾಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ನ್ಯೂಯಾರ್ಕ್‌ ಟೈಮ್ಸ್‌ ಆಯೋಜಿಸಿದ್ದ ಡೀಲ್‌ಬುಕ್‌ ಕಾನ್ಫರೆನ್ಸ್‌ನಲ್ಲಿ, ಕ್ರಿಪ್ಟೋಕರೆನ್ಸಿಯನ್ನು ಪಾವತಿ ರೂಪದಲ್ಲಿ ಸ್ವೀಕರಿಸಲು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಟಿಮ್‌ ಕುಕ್‌ ಉತ್ತರಿಸಿ, ನಾನೂ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಹೇಳಿದರು. ನಾನು (ಟಿಮ್‌ ಕುಕ್‌) ವೈಯಕ್ತಿಕ ಹಣವನ್ನು ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಿದ್ದೇನೆ. ಆದರೆ, ಆಪಲ್‌ ಸಂಸ್ಥೆಯ ಹಣವನ್ನು ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವ ಯೋವುದೇ ಯೋಜನೆ ಹೊಂದಿಲ್ಲ ಎಂದು ಹೇಳಿದರು. ಅಲ್ಲದೆ ಆಪಲ್‌ ನ ಉತ್ಪನ್ನಗಳಿಗೆ ಕ್ರಿಪ್ಟೋಕರೆನ್ಸಿ ರೂಪದಲ್ಲಿ ಪಾವತಿ ಮಾಡಲು ಅವಕಾಶ ನೀಡಿಲ್ಲ ಎಂದು ತಿಳಿಸಿದರು. ಕ್ರಿಪ್ಟೋಕ್ರೆನ್ಸಿ ಪಾವತಿ ಕುರಿತಂತೆ ಆಪಲ್‌ ಪರಿಶೀಲಿಸುತ್ತಿದೆ ಎಂದು ಹೇಳಿದ ಟಿಮ್‌ ಕುಕ್‌, ಈ ಕುರಿತು ಹೆಚ್ಚಿನ ವಿವರಣೆ ನೀಡಲಿಲ್ಲ. ಆದರೆ, ಪ್ರಸ್ತುತ ಕ್ರಿಪ್ಟೋ ಪೇಮೆಂಟ್‌ನಂತಹ ಯಾವುದೇ ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಕಾನ್ಫರೆನ್ಸ್‌ನಲ್ಲಿ, ವಿವಾದಕ್ಕೆ ಕಾರಣವಾಗಿ ಆಪಲ್‌ ಆಪ್‌ ಸ್ಟೋರ್‌ ಕಮಿಷನ್‌ ಕುರಿತೂ ಮಾತನಾಡಿದರು. ಈ ವಿಚಾರವಾಗಿ ಕಂಪನಿಯ ನಿಲುವನ್ನು ಸಮರ್ಥಿಸಿಕೊಂಡರು. ಬಹುತೇಕ ಡೆವಲಪರ್‌ಗಳು ಶೇ.30 ಕಮಿಷನ್‌ ಬದಲಿಗೆ ಶೇ.15ರಷ್ಟು ಕಮಿಷನ್ ಪಡೆಯುತ್ತಿವೆ. ಸೈಡ್‌- ಲೋಡೆಡ್‌ ಆಪ್‌ಗಳನ್ನು ಬಳಸಬಯಸುವ ಗ್ರಾಹಕರು ಐಫೋನ್‌ ಬದಲಿಗೆ ಆಂಡ್ರಾಯ್ಡ್‌ ಡಿವೈಸ್‌ ಕೊಳ್ಳಬಹುದು ಎಂದು ಹೇಳಿದರು.