ವಿದ್ಯುನ್ಮಾನ ಮತ ಯಂತ್ರ ಶೇ. 100ರಷ್ಟು ವಿಶ್ವಾಸಾರ್ಹ..! ಇವಿಎಂ ವಿರೋಧಿಗಳಿಗೆ ಭಾರೀ ಮುಖಭಂಗ..!

ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಮಂಗಾಳ ಚುನಾವಣೆಯಲ್ಲಿ 1,492, ತಮಿಳುನಮಾಡಿನಲ್ಲಿ 1,183, ಕೇರಳದಲ್ಲಿ 728, ಅಸ್ಸಾಂನಲ್ಲಿ 647 ಹಾಗೂ ಪುದುಚೆರಿಯಲ್ಲಿ 156 ವಿವಿ ಪ್ಯಾಟ್ ಯಂತ್ರಗಳನ್ನು ಬಳಸಲಾಗಿತ್ತು.

ವಿದ್ಯುನ್ಮಾನ ಮತ ಯಂತ್ರ ಶೇ. 100ರಷ್ಟು ವಿಶ್ವಾಸಾರ್ಹ..! ಇವಿಎಂ ವಿರೋಧಿಗಳಿಗೆ ಭಾರೀ ಮುಖಭಂಗ..!
Linkup
: ದೇಶದಲ್ಲಿ ಯಾವುದೇ ರಾಜಕೀಯ ಪಕ್ಷ ಸೋತರೂ ಕೂಡಾ ಮೊದಲಿಗೆ ಯಂತ್ರದ ಮೇಲೆ ಆರೋಪ ಹೊರಿಸೋದು ಮಾಮೂಲು. ಅದರಲ್ಲೂ ಆಡಳಿತಾರೂಢ ಬಿಜೆಪಿ ಗೆದ್ದರೆ, ಪ್ರತಿಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಮುಗಿಬೀಳುತ್ತವೆ. ವಿದ್ಯುನ್ಮಾನ ಮತಯಂತ್ರಗಳ ವಿರುದ್ಧ ದನಿ ಎತ್ತುತ್ತವೆ. ಆದರೆ, ಇದೀಗ ಇವಿಎಂಗಳ ಪರವಾದ ಸುದ್ದಿಯೊಂದು ಹೊರಬಿದ್ದಿದೆ. ಇವಿಎಂಗಳಲ್ಲಿ ದಾಖಲಾದ ಮತಗಳು ಹಾಗೂ ವಿವಿ ಪ್ಯಾಟ್‌ನಲ್ಲಿ ಸಿಕ್ಕ ದಾಖಲೆಗಳು ಶೇ. 100ರಷ್ಟು ಹೊಂದಾಣಿಕೆಯಾಗಿವೆ. ಯಾವುದೇ ಒಬ್ಬ ಮತದಾರ ಇವಿಎಂನಲ್ಲಿ ತನ್ನ ಇಷ್ಟ ಪಕ್ಷಕ್ಕೆ ಮತ ಹಾಕಿದ ಬಳಿಕ, ಆತನಿಗೆ ವಿವಿ ಪ್ಯಾಟ್ ಯಂತ್ರದ ಮೂಲಕ ಚೀಟಿ ಲಭ್ಯವಾಗುತ್ತದೆ. ಈ ಚೀಟಿಯಲ್ಲಿ ಆತ ಯಾರಿಗೆ ಮತ ಹಾಕಿದ ಅನ್ನೋದ್ರ ಮಾಹಿತಿ ಇರುತ್ತದೆ. ಇದನ್ನು ಮತದಾರನಿಗೆ ತೋರಿಸಿದ ಬಳಿಕ ಮತಗಟ್ಟೆ ಸಿಬ್ಬಂದಿ ತಮ್ಮ ಬಳಿಯಲ್ಲೇ ಇರಿಸಿಕೊಳ್ಳುತ್ತಾರೆ. ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲೂ ಇವಿಎಂಗಳ ಜೊತೆಗೆ ವಿವಿ ಪ್ಯಾಟ್ ಬಳಸಲಾಗಿತ್ತು. ಬಳಿಕ ಎರಡೂ ಯಂತ್ರಗಳ ಅಂಕಿ ಸಂಖ್ಯೆಯನ್ನು ತಾಳೆ ನೋಡಲಾಯ್ತು. ಈ ವೇಳೆ, ವಿವಿ ಪ್ಯಾಟ್‌ನ ದಾಖಲೆ ಹಾಗೂ ಇವಿಎಂನಲ್ಲಿ ಅಂಕಿ ಸಂಖ್ಯೆ ಎರಡೂ ಶೇ. 100ರಷ್ಟು ಹೊಂದಾಣಿಕೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಅಸ್ಸಾಂ ವಿಧಾನಸಭೆ ಹಾಗೂ ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ಇತ್ತೀಚೆಗಷ್ಟೇ ನಡೆದ ಚುನಾವಣೆ ವೇಳೆ ಇವಿಎಂ ಯಂತ್ರಗಳ ಜೊತೆಯಲ್ಲಿ ವಿವಿ ಪ್ಯಾಟ್ ಯಂತ್ರವನ್ನೂ ಬಳಸಲಾಗಿತ್ತು. ಈ ಎರಡೂ ಯಂತ್ರಗಳ ಅಂಕಿಅಂಶ ತಾಳೆಯಾಗಿರೋದು, ಇವಿಎಂ ಯಂತ್ರದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ. ಭಾರತದಲ್ಲಿ 1989ರಿಂದಲೇ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಆರಂಭವಾಯಿತಾದ್ರೂ, ವಿವಿ ಪ್ಯಾಟ್ ಯಂತ್ರ ಬಳಕೆಗೆ ಬಂದಿದ್ದು, 2014ರಲ್ಲಿ. ಕೇವಲ 8 ಕ್ಷೇತ್ರಗಳಲ್ಲಿ ಆಗ ವಿವಿ ಪ್ಯಾಟ್ ಬಳಸಲಾಗಿತ್ತು. 2019ರ ಚುನಾವಣೆಯಲ್ಲಿ ದೇಶದ ಎಲ್ಲಾ ಕ್ಷೇತ್ರಗಳಲ್ಲೂ ವಿವಿ ಪ್ಯಟ್ ಬಳಕೆಯಾಗಿತ್ತು. ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಮಂಗಾಳ ಚುನಾವಣೆಯಲ್ಲಿ 1,492, ತಮಿಳುನಮಾಡಿನಲ್ಲಿ 1,183, ಕೇರಳದಲ್ಲಿ 728, ಅಸ್ಸಾಂನಲ್ಲಿ 647 ಹಾಗೂ ಪುದುಚೆರಿಯಲ್ಲಿ 156 ವಿವಿ ಪ್ಯಾಟ್ ಯಂತ್ರಗಳನ್ನು ಬಳಸಲಾಗಿತ್ತು.