ಕೃಷಿ ಕಾಯಿದೆ ವಿರೋಧಿಸಿ ಸೆ.25ರಂದು ಭಾರತ್‌ ಬಂದ್‌ಗೆ ಕರೆ ನೀಡಿದ ರೈತರು

ಕೃಷಿ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು, ಸೆ. 25ರಂದು 'ಭಾರತ ಬಂದ್‌' ನಡೆಸುವ ಘೋಷಣೆ ಮಾಡಿದ್ದಾರೆ. ದಿಲ್ಲಿ ಗಡಿಗಳಲ್ಲಿ ಟೆಂಟ್‌ ನಿರ್ಮಿಸಿಕೊಂಡಿರುವ ರೈತರು ಈಗಲೂ ಪ್ರತಿಭಟನೆ ಮುಂದುವರಿಸಿದ್ದಾರೆ.

ಕೃಷಿ ಕಾಯಿದೆ ವಿರೋಧಿಸಿ ಸೆ.25ರಂದು ಭಾರತ್‌ ಬಂದ್‌ಗೆ ಕರೆ ನೀಡಿದ ರೈತರು
Linkup
ಹೊಸದಿಲ್ಲಿ: ಕೃಷಿ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ , ಸೆಪ್ಟೆಂಬರ್‌ 25ರಂದು 'ಭಾರತ ಬಂದ್‌' ನಡೆಸುವ ಘೋಷಣೆ ಮಾಡಿದ್ದಾರೆ. ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರು ಕೃಷಿ ಸುಧಾರಣಾ ಕಾಯಿದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನೇತೃತ್ವದಲ್ಲಿ ರೈತ ಸಂಘಟನೆಗಳು ಕಳೆದ ವರ್ಷದ ನವೆಂಬರ್‌ನಿಂದ ಪ್ರತಿಭಟನೆ ನಡೆಸುತ್ತಿವೆ. ದಿಲ್ಲಿ ಗಡಿಗಳಲ್ಲಿ ಟೆಂಟ್‌ ನಿರ್ಮಿಸಿಕೊಂಡಿರುವ ರೈತರು ಈಗಲೂ ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನೆ ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. "ಕಳೆದ ವರ್ಷ ಸೆಪ್ಟೆಂಬರ್‌ 25ರಂದು ಭಾರತ್‌ ಬಂದ್‌ ಆಚರಿಸಲಾಗಿತ್ತು. ಇನ್ನೂ ನಮ್ಮ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ ಈ ವರ್ಷವೂ ಅದೇ ದಿನ ಮತ್ತೊಮ್ಮೆ ಭಾರತ್‌ ಬಂದ್‌ ನಡೆಸಲಾಗುವುದು. ಕಳೆದ ಬಾರಿಗಿಂತ ಈ ಸಾರಿ ಬಂದ್‌ ಹೆಚ್ಚು ಯಶಸ್ವಿಯಾಗುವ ವಿಶ್ವಾಸ ಇದೆ," ಎಂದು ಕಿಸಾನ್‌ ಮೋರ್ಚಾ ಮುಖಂಡ ಆಶಿಶ್‌ ಮಿತ್ತಲ್‌ ಶುಕ್ರವಾರ ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರೈತರು ಮತ್ತು ಕೃಷಿ ಕಾರ್ಮಿಕರ ಹಿತಾಸಕ್ತಿ ರಕ್ಷಣೆಯ ವಿಷಯ ಇಟ್ಟುಕೊಂಡು ದಿಲ್ಲಿಯಲ್ಲಿ ಎರಡು ದಿನಗಳ ಸಮಾವೇಶ ನಡೆಸಿದ ಸಂಯುಕ್ತ ಕಿಸಾನ್‌ ಮೋರ್ಚಾ, ಮುಂದಿನ ಹೋರಾಟದ ರೂಪುರೇಷಗಳನ್ನು ಆಖೈರುಗೊಳಿಸಿದೆ. "ಎರಡು ದಿನದ ಸಮಾವೇಶದಲ್ಲಿ 22 ರಾಜ್ಯಗಳ 300ಕ್ಕೂ ಹೆಚ್ಚಿನ ಕೃಷಿ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಮಹಿಳೆಯರು, ಆದಿವಾಸಿಗರು, ಯುವಕರು ಮತ್ತು ವಿದ್ಯಾರ್ಥಿಗ ಪರ ಕೆಲಸ ಮಾಡುವ ಸಂಘಟನೆಗಳು ಪ್ರತಿನಿಧಿಗಳು ಕೂಡ ಇದರಲ್ಲಿ ಪಾಲ್ಗೊಂಡಿದ್ದರು. ಸಮಾವೇಶ ಯಶಸ್ವಿಯಾಗಿದೆ,'' ಎಂದು ರೈತ ಮುಖಂಡರು ತಿಳಿಸಿದ್ದಾರೆ. ಕೃಷಿ ಕಾಯಿದೆಗಳ ವಿಷಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟು 10 ಸುತ್ತುಗಳ ಮಾತುಕತೆ ಮುಗಿದರೂ ಇತ್ಯರ್ಥಗೊಂಡಿಲ್ಲ. ಸಂಪೂರ್ಣ ರದ್ದತಿಗೆ ರೈತರು ಆಗ್ರಹಿಸಿದರೆ, ತಿದ್ದುಪಡಿ ಮೂಲಕ ಇನ್ನಷ್ಟು ಸುಧಾರಣೆ ಸೂಚಿಸಿದರೆ ಅದನ್ನು ಜಾರಿಗೊಳಿಸಲು ಸಿದ್ಧ ಎಂದು ಸರಕಾರ ಹೇಳಿದೆ. ಸದ್ಯ ಸುಪ್ರೀಂ ಕೋರ್ಟ್‌ ಆ ಮೂರೂ ಕಾಯಿದೆಗಳ ಅನುಷ್ಠಾನವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆ.