ವಾಟ್ಸಾಪ್‌ ಮೂಲಕವೇ ಉಬರ್‌ ರೈಡ್ ಬುಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ!

ಅಮೆರಿಕ ಮೂಲದ ಸಂಸ್ಥೆಯಾದ ಉಬರ್‌ ಇದೀಗ ಭಾರತದಲ್ಲಿ ಹೊಸ ಸೇವೆಯನ್ನು ಪರಿಚಯಿಸುತ್ತಿದೆ. ತನ್ನ ಗ್ರಾಹಕರಿಗೆ ವಾಟ್ಸಾಬ್‌ ಚಾಟ್‌ಬಾಟ್‌ ಮೂಲಕ ಉಬರ್ ರೈಡ್ ಬುಕ್ ಮಾಡುವ ಅವಕಾಶ ನೀಡುತ್ತಿದೆ.

ವಾಟ್ಸಾಪ್‌ ಮೂಲಕವೇ ಉಬರ್‌ ರೈಡ್ ಬುಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ!
Linkup
ಹೊಸದಿಲ್ಲಿ: ಅಮೆರಿಕ ಮೂಲದ ಸಂಸ್ಥೆಯಾದ (Uber) ಇದೀಗ ಭಾರತದಲ್ಲಿ ಹೊಸ ಸೇವೆಯನ್ನು ಪರಿಚಯಿಸುತ್ತಿದೆ. ತನ್ನ ಗ್ರಾಹಕರಿಗೆ ಅಧಿಕೃತ ಉಬರ್‌ ವಾಟ್ಸಾಬ್‌ ಚಾಟ್‌ಬಾಟ್‌ (Uber Chatbot) ಮೂಲಕ ಉಬರ್ ರೈಡ್ ಅನ್ನು ಬುಕ್ ಮಾಡುವ ಅವಕಾಶ ನೀಡುತ್ತಿದೆ. ಇದೇ ಮೊದಲ ಬಾರಿಗೆ ಉಬರ್‌ ಕಂಪನಿಯು ಈ ಅವಕಾಶ ನೀಡುತ್ತಿದ್ದು, ಸೇವೆನ್ನು ಮತ್ತಷ್ಟು ವಿಸ್ತೃತವಾಗಿ ಬಳಸಿಕೊಳ್ಳಲಾಗುತ್ತಿದೆ. ಉಬರ್ ಟೆಕ್ನಾಲಜೀಸ್ ಲಿಮಿಟೆಡ್ ( Technologies Ltd) ಭಾರತದಲ್ಲಿಯ ಬಳಕೆದಾರರಿಗೆ WhatsApp ಮೂಲಕ ರೈಡ್‌ಗಳನ್ನು ಬುಕ್ ಮಾಡಲು ಅನುಮತಿಸುವ ವೈಶಿಷ್ಟ್ಯವನ್ನು ಹೊರತರಲಿದೆ ಎಂದು ಹೇಳಿದೆ. ಈ ಕ್ರಮವು ಭಾರತದಲ್ಲಿ ಮೆಟಾ ಪ್ಲಾಟ್‌ಫಾರ್ಮ್‌ಗಳ ಮಾಲೀಕತ್ವದ WhatsApp ನ 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಪಡೆಯಲು ಉಬರ್‌ಗೆ ಸಹಾಯವಾಗಲಿದೆ ಎಂದು ಉಬರ್‌ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. "ಗ್ರಾಹಕರು ಇನ್ನು ಮುಂದೆ ಬುಕ್‌ ಮಾಡಲು ಉಬರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅಥವಾ ಬಳಸುವ ಅಗತ್ಯವಿಲ್ಲ. ಬಳಕೆದಾರರ ನೋಂದಣಿ, ರೈಡ್ ಬುಕ್ ಮಾಡುವಿಕೆ ಮತ್ತು ಟ್ರಿಪ್ ರಶೀದಿಯನ್ನು ಪಡೆಯುವುದರಿಂದ ಹಿಡಿದು ಎಲ್ಲವನ್ನೂ WhatsApp ಚಾಟ್ ಇಂಟರ್‌ಫೇಸ್‌ನಲ್ಲಿ ನಿರ್ವಹಿಸಲಾಗುತ್ತದೆ" ಎಂದು ಉಬರ್ ಹೇಳಿದೆ. ಉಬರ್ ಕಳೆದ ಎಂಟು ವರ್ಷಗಳಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈಗ 70 ನಗರಗಳಲ್ಲಿ ಉಬರ್‌ ಸೇವೆ ಲಭ್ಯವಿದೆ. ವಾಟ್ಸಾಪ್‌ ಬಳಕೆದಾರರು ಉಬರ್‌ನ ವ್ಯಾಪಾರ ಖಾತೆ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ, ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಥವಾ Uber WhatsApp ಚಾಟ್ ತೆರೆಯಲು ನೇರವಾಗಿ ಲಿಂಕ್ ಕ್ಲಿಕ್ ಮಾಡುವ ಮೂಲಕ ರೈಡ್ ಅನ್ನು ಬುಕ್ ಮಾಡಬಹುದು. ಗ್ರಾಹಕರು ಉಬರ್ ಅಪ್ಲಿಕೇಶನ್ ಮೂಲಕ ನೇರವಾಗಿ ಟ್ರಿಪ್‌ಗಳನ್ನು ಬುಕ್ ಮಾಡುವವರಿಗೆ ಅದೇ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ವಿಮಾ ರಕ್ಷಣೆಗಳನ್ನು ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ. ತುರ್ತು ಸಂದರ್ಭಗಳಲ್ಲಿ ಉಬರ್ ಅನ್ನು ಹೇಗೆ ಸಂಪರ್ಕಿಸುವುದು ಸೇರಿದಂತೆ ಸುರಕ್ಷತಾ ಮಾರ್ಗಸೂಚಿಗಳ ಕುರಿತು ವಾಟ್ಸಾಪ್‌ ಚಾಟ್ ಮೂಲಕವೇ ಬಳಕೆದಾರರಿಗೆ ತಿಳಿಸುತ್ತದೆ. ಆರಂಭದಲ್ಲಿ ಈ ವೈಶಿಷ್ಟ್ಯವನ್ನು ಲಖನೌದಲ್ಲಿ ಪ್ರಾರಂಭಿಸಲಾಗುವುದು ಮತ್ತು ಮುಂದಿನ ವರ್ಷದ ವೇಳೆಗೆ ಇತರ ಸ್ಥಳಗಳಿಗೆ ವಿಸ್ತರಿಸಲಾಗುವುದು. ಈ ಸೇವೆಯು ಇಂಗ್ಲಿಷ್‌ನಲ್ಲಿ ಲಭ್ಯವಿರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಭಾರತೀಯ ಭಾಷೆಗಳನ್ನು ಸಹ ಸೇರಿಸಲಾಗುವುದು ಎಂದು ಉಬರ್ ಹೇಳಿದೆ.