ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್ ಈಗ ಜಗತ್ತಿನ ಅತಿ ಸಿರಿವಂತ ವ್ಯಕ್ತಿ!

ಎಲ್‌ವಿಎಂಎಚ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರು ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರು ಜೆಫ್ ಬೆಜೋಸ್ ಅವರಿಗಿಂತ ಒಟ್ಟಾರೆ ಸಂಪತ್ತಿನಲ್ಲಿ ಕೊಂಚ ಮುಂದಿದ್ದಾರೆ.

ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್ ಈಗ ಜಗತ್ತಿನ ಅತಿ ಸಿರಿವಂತ ವ್ಯಕ್ತಿ!
Linkup
ಹೊಸದಿಲ್ಲಿ: ಫ್ರಾನ್ಸ್‌ನ ಐಷಾರಾಮಿ ಸಮೂಹ ಎಲ್‌ವಿಎಂಎಚ್‌ನ ಸಿಇಒ ಅವರು ಅವರನ್ನು ಹಿಂದಿಕ್ಕಿ ಜಗತ್ತಿನ ಅತ್ಯಂತ ಎನಿಸಿಕೊಂಡಿದ್ದಾರೆ. ಫೋರ್ಬ್ಸ್ ಪಟ್ಟಿ ಪ್ರಕಾರ ಅರ್ನಾಲ್ಟ್ ಅವರ ಒಟ್ಟು 186.4 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. 186 ಬಿಲಿಯನ್ ಡಾಲರ್ ಸಂಪತ್ತು ಹಿಂದಿರುವ ಬೆಜೋಸ್ ಅವರಿಗಿಂತ ಅರ್ನಾಲ್ಟ್ ಕೊಂಚವೇ ಮುಂದಿದ್ದಾರೆ. 2021ರಲ್ಲಿ ಈವರೆಗೂ ಫ್ರಾನ್ಸ್ ಮೂಲದ ಉದ್ಯಮಿ ಅರ್ನಾಲ್ಟ್ ತಮ್ಮ ಸಂಪತ್ತನ್ನು 47 ಬಿಲಿಯನ್ ಡಾಲರ್‌ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಎಲ್‌ವಿಎಂಎಚ್ ಸಂಸ್ಥೆಯು ಫೆಂಡಿ, ಕ್ರಿಸ್ಟಿಯನ್ ಡಿಯೊರ್ ಮತ್ತು ಗಿವೆಂಚಿಯಂತಹ ಇತರೆ ಪ್ರಮುಖ ಫ್ಯಾಷನ್ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ. ಲುಯಿಸ್ ವುಯಿಟ್ಟಾನ್ ಮತ್ತು ಸೆಫೋರಾ ಸೇರಿದಂತೆ 70 ಬ್ರ್ಯಾಂಡ್‌ಗಳು ಅರ್ನಾಲ್ಟ್ ಅಡಿಯಲ್ಲಿದೆ. ಕ್ರಿಸ್ಟಿಯನ್ ಡಿಯೊರ್‌ನ ಶೇ 96.5ರಷ್ಟು ಷೇರನ್ನು ಅರ್ನಾಲ್ಟ್ ಹೊಂದಿದ್ದು, ಈ ಬ್ರ್ಯಾಂಡ್, ಎಲ್‌ವಿಎಂಎಚ್‌ನ ಶೇ 41ರಷ್ಟು ಪಾಲು ಹೊಂದಿದೆ. ಈ ವರ್ಷದ ಜನವರಿಯ ಆರಂಭದಲ್ಲಿ ಎಲ್‌ವಿಎಂಎಚ್ ಅಮೆರಿಕನ್ ಆಭರಣ ಸಂಸ್ಥೆ ಟಿಫನಿ ಆಂಡ್ ಕೊ ಜತೆ 15.8 ಬಿಲಿಯನ್ ಒಪ್ಪಂದವನ್ನು ಮಾಡಿಕೊಂಡಿತ್ತು. ಇದನ್ನು ಈವರೆಗಿನ ಅತಿ ದೊಡ್ಡ ಐಷಾರಾಮಿ ಬ್ರ್ಯಾಂಡ್ ಸ್ವಾಧೀನ ಎಂದು ಹೇಳಲಾಗಿದೆ.