ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿಗೆ ಸೇರಿದ 9,371 ಕೋಟಿ ರೂ. ಆಸ್ತಿ ಬ್ಯಾಂಕ್‌ಗಳಿಗೆ ಹಸ್ತಾಂತರ

ಉದ್ಯಮಿಗಳಾದ ವಿಜಯ್ ಮಲ್ಯ ಹಾಗೂ ನೀರವ್ ಮೋದಿ, ಭಾರತದ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ದೇಶ ಬಿಟ್ಟು ಪರಾರಿಯಾಗಿ ಇದೀಗ ಲಂಡನ್‌ನಲ್ಲಿ ನೆಲೆಸಿದ್ದಾರೆ. ಇಬ್ಬರೂ ಉದ್ಯಮಿಗಳನ್ನು ವಾಪಸ್ ಭಾರತಕ್ಕೆ ಕರೆತರಲು ಸರ್ಕಾರ ಕಾನೂನು ಸಮರ ಆರಂಭಿಸಿದೆ.

ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿಗೆ ಸೇರಿದ 9,371 ಕೋಟಿ ರೂ. ಆಸ್ತಿ ಬ್ಯಾಂಕ್‌ಗಳಿಗೆ ಹಸ್ತಾಂತರ
Linkup
: ಉದ್ಯಮಿಗಳಾದ , ಹಾಗೂ ಅವರಿಗೆ ಸೇರಿದ 9,371 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬ್ಯಾಂಕ್‌ಗಳಿಗೆ ಹಸ್ತಾಂತರ ಮಾಡಲಾಗಿದೆ. ಬ್ಯಾಂಕ್‌ಗಳಿಂದ ಹಣ ಪಡೆದು ಉದ್ಯಮಿಗಳು ಪರಾರಿಯಾಗಿದ್ದ ಪರಿಣಾಮ, ಬ್ಯಾಂಕ್‌ಗಳು ಭಾರೀ ನಷ್ಟ ಅನುಭವಿಸಿದ್ದವು. ಜಾರಿ ನಿರ್ದೇಶನಾಲಯವು ಈವರೆಗೆ ಮೂವರೂ ಉದ್ಯಮಿಗಳಿಗೆ ಸೇರಿದ 18,170.02 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ವಶಕ್ಕೆ ಪಡೆದಿದೆ. ಬ್ಯಾಂಕ್‌ಗಳಿಗೆ ಆಗಿರುವ ನಷ್ಟದ ಪೈಕಿ ಶೇ. 80ರಷ್ಟನ್ನು ಈವರೆಗೂ ಜಪ್ತಿ ಮಾಡಲಾಗಿದೆ ಎಂದು ಇಡಿ ಮಾಹಿತಿ ನೀಡಿದೆ. ಈವರೆಗೆ ಜಪ್ತಿ ಮಾಡಿರುವ 18,170.02 ಕೋಟಿ ರೂ. ಮೌಲ್ಯದ ಆಸ್ತಿಯ ಪೈಕಿ 9,371.17 ಕೋಟಿ ರೂ. ಮೌಲ್ಯದ ಸ್ವತ್ತನ್ನು ಈಗಾಗಲೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹಸ್ತಾಂತರ ಮಾಡಿರೋದಾಗಿ ಜಾರಿ ನಿರ್ದೇಶನಾಲಯ ಹೇಳಿದೆ. ದೇಶದ ಹಲವು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೇಹುಲ್ ಚೋಕ್ಸಿ ಪಡೆದಿದ್ದ ಆಸ್ತಿಯ ಪೈಕಿ ಈವರೆಗೆ ಶೇ. 80.45ರಷ್ಟು ಸ್ವತ್ತನ್ನು ಇಡಿ ಮರಳಿ ಪಡೆದಿದೆ. ಈ ಪೈಕಿ ಸರಿಸುಮಾರು ಅರ್ಧದಷ್ಟು ಸ್ವತ್ತು ಬ್ಯಾಂಕ್‌ಗಳಿಗೆ ವಾಪಸಾತಿ ಆಗಿದೆ. ಇನ್ನಷ್ಟು ಸ್ವತ್ತು ಬ್ಯಾಂಕ್‌ಗಳಿಗೆ ವಾಪಸ್ ಆಗಬೇಕಿದೆ. ಉದ್ಯಮಿಗಳಾದ ವಿಜಯ್ ಮಲ್ಯ ಹಾಗೂ ನೀರವ್ ಮೋದಿ, ಭಾರತದ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ದೇಶ ಬಿಟ್ಟು ಪರಾರಿಯಾಗಿ ಇದೀಗ ಲಂಡನ್‌ನಲ್ಲಿ ನೆಲೆಸಿದ್ದಾರೆ. ಇಬ್ಬರೂ ಉದ್ಯಮಿಗಳನ್ನು ವಾಪಸ್ ಭಾರತಕ್ಕೆ ಕರೆತರಲು ಸರ್ಕಾರ ಕಾನೂನು ಸಮರ ಆರಂಭಿಸಿದೆ. ಇನ್ನೊಂದೆಡೆ ಕೆರಿಬಿಯನ್ ದ್ವೀಪಗಳಲ್ಲಿ ಸಿಕ್ಕಿಬಿದ್ದಿದ್ದ ಮತ್ತೊಬ್ಬ ಉದ್ಯಮಿ ಮೇಹುಲ್ ಚೋಕ್ಸಿ, ಭಾರತ ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಲೇ ಇದ್ದಾನೆ.