ವೇಗದ ರೈಲಿಗೆ ಸಿಲುಕಿದ ಆನೆಗಳು: ಮೂರು ಹೆಣ್ಣಾನೆಗಳ ದಾರುಣ ಸಾವು
ವೇಗದ ರೈಲಿಗೆ ಸಿಲುಕಿದ ಆನೆಗಳು: ಮೂರು ಹೆಣ್ಣಾನೆಗಳ ದಾರುಣ ಸಾವು
ತಮಿಳುನಾಡಿನ ಕೊಯಮತ್ತೂರು ಸಮೀಪದ ಅರಣ್ಯ ಪ್ರದೇಶದಲ್ಲಿ ಮಂಗಳೂರು-ಚೆನ್ನೈ ರೈಲಿಗೆ ಸಿಲುಕಿ ಮೂರು ಹೆಣ್ಣಾನೆಗಳು ಮೃತಪಟ್ಟ ಹೃದಯ ಕಲಕುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಹಳಿ ದಾಟುತ್ತಿದ್ದ ಆನೆಗಳಿಗೆ ವೇಗವಾಗಿ ಬಂದ ರೈಲು ಡಿಕ್ಕಿಯಾಗಿದೆ.
ಕೊಯಮತ್ತೂರು: ವೇಗವಾಗಿ ಸಾಗುವ ರೈಲಿಗೆ ಡಿಕ್ಕಿಯಾಗಿ ಮೂರು ಹೆಣ್ಣಾನೆಗಳು ಮೃತಪಟ್ಟ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪ್ರದೇಶದಲ್ಲಿ ಸಾಗುವ ಪಶ್ಚಿಮ ಬಂಗಾಳದಲ್ಲಿ ಇಂತಹ ಘಟನೆಗಳು ಸರ್ವೇ ಸಾಮಾನ್ಯವಾಗಿವೆ. ಕೂಡ ಇಂತಹ ದುರಂತಗಳಿಗೆ ಸಾಕ್ಷಿಯಾಗುತ್ತಿದೆ. ಮೃತ ಆನೆಗಳಲ್ಲಿ ಎರಡು ಮರಿ ಆನೆಗಳು ಕೂಡ ಸೇರಿವೆ.
ಕೊಯಮತ್ತೂರಿನ ನವಕ್ಕರೈ ಸಮೀಪದ ಮಾವುತಂಪತ್ತಿಯಲ್ಲಿ ಮಡುಕ್ಕರೈ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಒಂದು ದೊಡ್ಡ ಹೆಣ್ಣಾನೆ ಹಾಗೂ ಎರಡು ಮರಿ ಹೆಣ್ಣಾನೆಗಳು ರಾತ್ರಿ 9 ಗಂಟೆ ಸುಮಾರಿಗೆ ರೈಲ್ವೆ ಹಳಿ ದಾಟುತ್ತಿದ್ದವು. ಆಗ ಮಂಗಳೂರಿನಿಂದ ಚೆನ್ನೈ ಕಡೆಗೆ ವೇಗವಾಗಿ ಬರುತ್ತಿದ್ದ ಚೆನ್ನೈ ಮೇಲ್ ರೈಲು ವಲಯಾರ್-ಎಟ್ಟಿಮಡೈ ಎ ಮಾರ್ಗದ ಬಳಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಅದು ಹಲವು ಮೀಟರ್‌ಗಳಷ್ಟು ದೂರ ಆನೆಗಳ ದೇಹಗಳನ್ನು ಎಳೆದೊಯ್ದಿದೆ. ಮೂರೂ ಆನೆಗಳು ಅಲ್ಲಿಯೇ ಜೀವ ಕಳೆದುಕೊಂಡಿವೆ.
ತಮಿಳುನಾಡು - ಕೇರಳ ಗಡಿಯಲ್ಲಿನ ವಲಯಾರು ನದಿಯಲ್ಲಿ ನೀರು ಕುಡಿಯುವ ಸಲುವಾಗಿ ಈ ಆನೆಗಳು ಹಳಿ ದಾಟುತ್ತಿದ್ದವು ಎಂದು ನಂಬಲಾಗಿದೆ. ಆನೆಗಳನ್ನು ಕಂಡ ಲೋಕೋ ಪೈಲಟ್ ಅವುಗಳನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸಿದ್ದರು. ರೈಲು ನಿಲ್ಲಿಸಲು ಬ್ರೇಕ್ ಹಾಕಿದ್ದರು. ಆದರೆ ತಕ್ಷಣಕ್ಕೆ ರೈಲನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅದು ಆನೆಗಳಿಗೆ ಅಪ್ಪಳಿಸಿದೆ.
ಕೂಡಲೇ ಅರಣ್ಯಾಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿತ್ತು. ಕಗ್ಗತ್ತಲು ಆವರಿಸಿದ್ದರಿಂದ ಆನೆಗಳ ಮೃತದೇಹಗಳನ್ನು ಹಳಿಗಳಿಂದ ಸರಿಸಿ ರೈಲು ಮುಂದೆ ಸಾಗುವಂತೆ ಮಾಡಲು ಸಾಕಷ್ಟು ಸಮಯ ಬೇಕಾಯಿತು. ರೈಲಿನ ಎಂಜಿನ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೇರೆ ಎಂಜಿನ್ ಅಳವಡಿಸುವ ರೈಲನ್ನು ವಲಯಾರ್‌ಗೆ ಸಾಗಿಸಲಾಗಿದೆ.
ತನಿಖೆ ಆರಂಭಿಸಿರುವುದಾಗಿ ಅರಣ್ಯ ಇಲಾಖೆ ತಿಳಿಸಿದೆ. ನಿಯಮಾವಳಿ ಮತ್ತು ನಿರ್ಬಂಧಗಳನ್ನು ಮೀರಿ ರೈಲು ಚಾಲನೆ ಮಾಡುತ್ತಿರುವುದು ಮತ್ತು ಅತ್ಯಧಿಕ ವೇಗದಲ್ಲಿ ಚಾಲನೆ ಮಾಡಿದ್ದು ಕಂಡುಬಂದರೆ ವನ್ಯಜೀವಿ ರಕ್ಷಣಾ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಚಾಲಕ ಹಾಗೂ ಆತನ ಸಹಾಯಕನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪ್ರಾದೇಶಿಕ ಅರಣ್ಯ ಸಂರಕ್ಷಕ ರಾಮಸುಬ್ರಮಣ್ಯಂ ತಿಳಿಸಿದ್ದಾರೆ. ರಾತ್ರಿ ವೇಳೆ ಅರಣ್ಯ ಪ್ರದೇಶದಲ್ಲಿ ರೈಲುಗಳ ಸಂಚಾರ ನಡೆಸದಂತೆ ತಡೆಯಬೇಕೆಂದು ಪ್ರಾಣಿಪ್ರಿಯರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ.
ಮಾರ್ಚ್ ತಿಂಗಳಲ್ಲಿ ಪಾಲಕ್ಕಾಡ್ - ಕೊಯಮತ್ತೂರು ನಡುವಿನ ಪಡುಪತ್ತಿಯ ರೈಲ್ವೆ ಮಾರ್ಗದಲ್ಲಿ ಇದೇ ರೀತಿ ರೈಲಿಗೆ ಸಿಲುಕಿ 20 ವರ್ಷದ ಮೃತಪಟ್ಟಿತ್ತು. ಗಾಯಗೊಂಡಿದ್ದ ಆನೆಯ ಜೀವ ಉಳಿಸುವ ಪ್ರಯತ್ನ ನಡೆದರೂ ಅದು ನರಳಿ ಜೀವ ಬಿಟ್ಟಿತ್ತು.
2016 ರಿಂದ 2021ರ ಅವಧಿಯಲ್ಲಿ ಕಂಜಿಕೋಡ್ ಮತ್ತು ಮಡುಕ್ಕರೈ ನಡುವಿನ ಎರಡು ರೈಲ್ವೆ ಹಳಿಗಳಾದ ಎ ಮತ್ತು ಬಿಗಳಲ್ಲಿ ರೈಲು ಡಿಕ್ಕಿಯಾಗಿ ಎಂಟು ಆನೆಗಳು ಸಾವನ್ನಪ್ಪಿವೆ ಎಂದು ಪಾಲಕ್ಕಾಡ್ ವಿಭಾಗದ ದಕ್ಷಿಣ ರೈಲ್ವೇಯಿಂದ ಪಡೆದ ಆರ್‌ಟಿಐ ವರದಿಯೊಂದು ಇತ್ತೀಚೆಗೆ ತಿಳಿಸಿತ್ತು.