ವಕೀಲರಿಗೆ ಉಪಯುಕ್ತವಾಗುವ ಇ-ಅಟಾರ್ನಿ ಆ್ಯಪ್‌ ಅಭಿವೃದ್ಧಿಪಡಿಸಿದ 10 ವರ್ಷದ ಬಾಲಕ!

ಪ್ರತಿಯೊಂದಕ್ಕೂ ಆ್ಯಪ್‌ ಇರುವ ಈ ಕಾಲದಲ್ಲಿ 10 ವರ್ಷದ ಬಾಲಕನೊಬ್ಬ ವಕೀಲರು ತಮ್ಮ ಪ್ರಕರಣಗಳನ್ನು ಒಂದೆಡೆ ಸಂಗ್ರಹಿಸಿಕೊಳ್ಳಲು ಸಹಾಯಕವಾಗುವ “ಇ-ಅಟಾರ್ನಿ” ಎಂಬ ವಿಶೇಷ ಆ್ಯಪ್‌ ಅಭಿವೃದ್ಧಿ ಪಡಿಸಿದ್ದಾನೆ.

ವಕೀಲರಿಗೆ ಉಪಯುಕ್ತವಾಗುವ ಇ-ಅಟಾರ್ನಿ ಆ್ಯಪ್‌ ಅಭಿವೃದ್ಧಿಪಡಿಸಿದ 10 ವರ್ಷದ ಬಾಲಕ!
Linkup
ಬೆಂಗಳೂರು: ಪ್ರತಿಯೊಂದಕ್ಕೂ ಆ್ಯಪ್‌ ಇರುವ ಈ ಕಾಲದಲ್ಲಿ 10 ವರ್ಷದ ಬಾಲಕನೊಬ್ಬ ವಕೀಲರು ತಮ್ಮ ಪ್ರಕರಣಗಳನ್ನು ಒಂದೆಡೆ ಸಂಗ್ರಹಿಸಿಕೊಳ್ಳಲು ಸಹಾಯಕವಾಗುವ “ಇ-ಅಟಾರ್ನಿ” ಎಂಬ ವಿಶೇಷ ಆ್ಯಪ್‌ ಅಭಿವೃದ್ಧಿ ಪಡಿಸಿದ್ದಾನೆ. ಹೌದು, ಆರ್. ಕಾನಿಷ್ಕರ್ ಎಂಬ ಕೇವಲ 10 ವರ್ಷದ ಯುವಕ ಈ ಆ್ಯಪ್‌ ಸಿದ್ಧಪಡಿಸಿ ಇಡೀ ವಿಶ್ವದ ಗಮನ ಸೆಳೆದಿದ್ದಾನೆ. ತನ್ನ ತಂದೆ ವಕೀಲ ವೃತ್ತಿ ಮಾಡುತ್ತಿದ್ದು, ಕೇಸ್ ವಾದಿಸಲು ಅವರ ತಂದೆ ದಾಖಲೆಗಳನ್ನು ಸಂಗ್ರಹಿಸುವಲ್ಲಿ ಪಡುತ್ತಿದ್ದ ಕಷ್ಟವನ್ನು ಅರಿತ ಈ ಬಾಲಕ, ತಂದೆಗೆ ಅನುಕೂಲ ಮಾಡಿಕೊಡಲು ಈ ಆ್ಯಪ್‌ ಸಿದ್ಧ ಪಡಿಸಿದ್ದಾನೆ. ಇದೀಗ ಈ ಆ್ಯಪ್‌ ವಿಶ್ವಾದ್ಯಂತ ಎಲ್ಲ ವಕೀಲರಿಗೂ ಹೆಚ್ಚು ಉಪಯುಕ್ತವಾಗಲಿದೆ. ವೈಟ್‌ಹ್ಯಾಟ್ ಜೂನಿಯರ್ ವಿದ್ಯಾರ್ಥಿಯಾದ ಕಾನಿಷ್ಕರ್, ಈಗಾಗಲೇ ಕೋಡಿಂಗ್ ಕಲಿಯುವಲ್ಲಿ ನಿರತನಾಗಿದ್ದಾನೆ. ವೈಟ್‌ಹ್ಯಾಟ್ ಜೂನಿಯರ್ ಪಠ್ಯಕ್ರಮದಲ್ಲಿ ಕೋಡಿಂಗ್ ಪ್ರಾಜೆಕ್ಟ್ಗಾಗಿ ಈ ಆ್ಯಪ್‌ ನಿರ್ಮಾಣ ಮಾಡುವ ಆಸಕ್ತಿ ತೋರಿದ್ದ. ಅದರಂತೆ ಈ ಆ್ಯಪ್‌ ನಿರ್ಮಾಣ ಮಾಡಿದ್ದಾನೆ. ಮೊದ ಮೊದಲು ಇದು ಸಣ್ಣ ಆಪ್ ಆಗಿತ್ತು. ಆದರೆ, ಇದರ ಪ್ರಾಮುಖ್ಯತೆ ಅರಿತ ವೈಟ್‌ಹ್ಯಾಟ್ ಜೂನಿಯರ್ ದೊಡ್ಡ ಮಟ್ಟದಲ್ಲಿ ಆ್ಯಪ್‌ ಅಭಿವೃದ್ಧಿ ಪಡಿಸಲು ಬೆಂಬಲ ನೀಡಿದರು. ಈ ಆ್ಯಪ್‌ನಲ್ಲಿ ವಕೀಲರು ತಮ್ಮ ಕಕ್ಷೀದಾರರಿಗೆ ಸಂಬಂಧಿಸಿದ ಎಲ್ಲಾ ಬಗೆಯ ದಾಖಲೆಗಳು, ಮತ್ತಿತರ ಪ್ರಕರಣಗಳ ಮಾಹಿತಿ ಎಲ್ಲವನ್ನೂ ಈ ಆ್ಯಪ್‌ನಲ್ಲಿ ಸಂಗ್ರಹಿಸಲು ಅವಕಾಶವಿದೆ. ಇದರಿಂದ ಹಿಂದೆಂದೋ ನಡೆದ ಪ್ರಕರಣಗಳ ಮಾಹಿತಿಯನ್ನು ಈ ಆಪ್‌ನಲ್ಲಿಯೇ ಸುಲಭವಾಗಿ ಅಧ್ಯಯನ ಮಾಡಬಹುದು. ಅಷ್ಟೇ ಅಲ್ಲದೆ, ಕಕ್ಷೀದಾರರು ಸಹ ತಮಗೆ ಸಂಬಂಧಿಸಿದ ಅಥವಾ ಕೋರ್ಟ್‌ನಲ್ಲಿರುವ ಇತರೆ ಪ್ರಕರಣಗಳ ಮಾಹಿತಿಯನ್ನೂ ಸಂಬಂಧಿಸಿದ ವಕೀಲರ ಅನುಮತಿ ಮೇರೆಗೆ ಪಡೆಯಬಹುದು. ಜೊತೆಗೆ ಕಕ್ಷೀದಾರರು ಹಾಗೂ ವಕೀಲರ ಪ್ರೈವೇಟ್ ಚಾಟ್‌ಗೂ ಇದರಲ್ಲಿ ಅವಕಾಶವಿದೆ. ಈ ಕುರಿತು ಮಾತನಾಡಿದ ಕಾನಿಷ್ಕರ್, ನನ್ನ ತಂದೆ ವಕೀಲರಾಗಿದ್ದು, ಪ್ರತಿ ದಿನ ಕೆಲಸದ ಒತ್ತಡದಿಂದ ಮನೆಗೆ ತಡವಾಗಿ ಬರುತ್ತಿದ್ದರು. ಅಲ್ಲದೆ, ಅವರು ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಎಲ್ಲೆಡೆ ಅಧ್ಯಯನ ನಡೆಸಲು, ಮಾಹಿತಿ ಸಂಗ್ರಹಿಸಿ ಅದನ್ನು ಫೈಲ್ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ನಾನು ಎಲ್ಲಾ ವಕೀಲರಿಗೆ ಅನುಕೂಲವಾಗುವಂತೆ ಈ ಆ್ಯಪ್‌ ಅಭಿವೃದ್ಧಿ ಪಡಿಸಿದ್ದೇನೆ ಎಂದಿದ್ದಾರೆ. ಈ ಆಪ್ ಗೌಪ್ಯತೆಯಿಂದ ಕೂಡಿದೆ. ಅನವಶ್ಯಕವಾಗಿ ಮತ್ತೊಬ್ಬರ ಮಾಹಿತಿಯನ್ನು ಸೋರಿಗೆ ಮಾಡಲು ಸಾಧ್ಯವೇ ಇಲ್ಲ. ಶಾಲೆಯಲ್ಲಿ ನಿರ್ಮಿಸಿದ ಈ ಆಪ್‌ನನ್ನು ದೊಡ್ಡಮಟ್ಟದಲ್ಲಿ ನಿರ್ಮಿಸಲು ನನಗೆ ಶಿಷ್ಯ ವೇತನ ದೊರೆಯಿತು. ಆನ್‌ಲೈನ್ ಸೆಲ್ಯೂಷನ್ ಎಂಬ ಕಂಪನಿಯ ಸಹಾಯದೊಂದಿಗೆ ಇನ್ನಷ್ಟು ತಂತ್ರಜ್ಞಾನವನ್ನು ಅಳವಡಿಸಲಾಗಿದೆ.