ಚೆನ್ನೈ: ಪಾನಿಪೂರಿ ಪ್ರಿಯ ಮದುಮಗಳಿಗೆ ಗೋಲ್‌ಗಪ್ಪ ಸರವೇ ಆಭರಣ..!

ಆಕೆಗೆ ಮೇಕಪ್‌ ಮಾಡಿದ ಆರತಿ ಬಾಲಾಜಿ ಎಂಬುವರು ಇನ್‌ಸ್ಟಾಗ್ರಾಂನಲ್ಲಿ ಈ ಪೋಸ್ಟ್‌ ಮಾಡಿದ್ದು, ಇದನ್ನು ಸುಮಾರು 45 ಲಕ್ಷ ಜನ ವೀಕ್ಷಿಸಿದ್ದಾರೆ. 1.27 ಲಕ್ಷಕ್ಕಿಂತ ಹೆಚ್ಚು ಮಂದಿ ಲೈಕ್‌ ಮಾಡಿದ್ದಾರೆ.

ಚೆನ್ನೈ: ಪಾನಿಪೂರಿ ಪ್ರಿಯ ಮದುಮಗಳಿಗೆ ಗೋಲ್‌ಗಪ್ಪ ಸರವೇ ಆಭರಣ..!
Linkup
(ತಮಿಳು ನಾಡು): ಹೆಣ್ಣುಮಕ್ಕಳಿಗೆ ಗೋಲ್‌ಗಪ್ಪ ಎಂದರೆ ಪಂಚಪ್ರಾಣ. ಸೇರಿ ಯಾವುದೇ ಸಮಾರಂಭಗಳಲ್ಲಿ ಗೋಲ್‌ಗಪ್ಪ/ಪಾನಿಪೂರಿ ಇರಲೇಬೇಕು ಎಂಬ ಹಕ್ಕೊತ್ತಾಯ ಸಹ ಅವರದ್ದೇ. ಆದರೆ, ತಮಿಳುನಾಡಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಮದುಮಗಳೊಬ್ಬಳು, ಗೋಲ್‌ಗಪ್ಪ ಆಭರಣವನ್ನೇ ಧರಿಸಿ ಅಚ್ಚರಿ ಮೂಡಿಸಿದ್ದು, ಈ ವಿಡಿಯೋ ಈಗ ವೈರಲ್‌ ಆಗಿದೆ..! ಅಕ್ಷಯಾ ಎಂಬ ಯುವತಿಯು ಇತ್ತೀಚೆಗೆ ಮದುವೆಯಾಗಿದ್ದು, ಈ ವೇಳೆ ಗೋಲ್‌ಗಪ್ಪ ಪುರಿಗಳಿಂದ ಮಾಡಿದ ಸರ ಹಾಗೂ ಕಿರೀಟ ಧರಿಸಿದ್ದಾಳೆ. ಈ ವಿಡಿಯೋವನ್ನು ಆಕೆಗೆ ಮೇಕಪ್‌ ಮಾಡಿದ ಆರತಿ ಬಾಲಾಜಿ ಎಂಬುವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು, ಇದನ್ನು ಸುಮಾರು 45 ಲಕ್ಷ ಜನ ವೀಕ್ಷಿಸಿದ್ದಾರೆ. 1.27 ಲಕ್ಷಕ್ಕಿಂತ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್‌ ಮಾಡಿದ್ದಾರೆ. ಸಾವಿರಾರು ಮಂದಿಯು ಇವಳೇ ನಿಜವಾದ ಗೋಲ್‌ಗಪ್ಪ ಪ್ರಿಯೆ ಎಂದು ಹಾಡಿ ಹೊಗಳಿದ್ದಾರೆ. ಅಕ್ಷಯಾಗೆ ಗೋಲ್‌ಗಪ್ಪ ಎಂದರೆ ತುಂಬ ಇಷ್ಟವಾದ ಕಾರಣ ಆಕೆಯ ಸಂಬಂಧಿಯೊಬ್ಬರು ಗೋಲ್‌ಗಪ್ಪ ಸರ, ಕಿರೀಟ ಮಾಡಿಸಿದ್ದಲ್ಲದೆ, ರಾಶಿ ರಾಶಿ ಗೋಲ್‌ಗಪ್ಪ ತಂದು ಎದುರು ಇರಿಸಿದ್ದರು. ಅಲ್ಲದೆ, ಹಪ್ಪಳವನ್ನು ಆಕೆಯ ತಲೆ ಮೇಲೆ ಇಟ್ಟು, ಮುರಿದ ಇನ್ನೊಂದು ವಿಡಿಯೋ ಸಹ ವೈರಲ್‌ ಆಗಿದೆ.