ವಿಕ್ಟೋರಿಯಾ ಆವರಣದಲ್ಲಿ ಸ್ಮಾರ್ಟ್‌ಸಿಟಿ ರಂಪಾಟ; ವಾರದೊಳಗೆ ಪೂರ್ಣಗೊಳಿಸಲು ಗಡುವು!

ಡಿ.11ರಂದು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಯನ್ನು ವೀಕ್ಷಿಸಿದ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಮುಂದಿನ ಒಂದು ವಾರದೊಳಗೆ ಕಾಮಗಾರಿಯನ್ನು ಮುಕ್ತಾಯಗೊಳಿಸುವಂತೆ ಸ್ಮಾರ್ಟ್‌ ಸಿಟಿ ಲಿಮಿಟೆಡ್‌‍ನ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ವಿಕ್ಟೋರಿಯಾ ಆವರಣದಲ್ಲಿ ಸ್ಮಾರ್ಟ್‌ಸಿಟಿ ರಂಪಾಟ; ವಾರದೊಳಗೆ ಪೂರ್ಣಗೊಳಿಸಲು ಗಡುವು!
Linkup
ಬೆಂಗಳೂರು: ನಗರದ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದು, ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಸ್ವಚ್ಛವಾಗಿರಬೇಕಿದ್ದ ಆಸ್ಪತ್ರೆ ಆವರಣದಲ್ಲಿ ಎಲ್ಲೆಂದರಲ್ಲಿ ಜಲ್ಲಿ, ಮರಳು, ಇಟ್ಟಿಗೆ ರಾಶಿ ಬಿದ್ದಿದೆ. ಅರೆಬರೆ ಕೆಲಸದಿಂದ ಇಡೀ ಆಸ್ಪತ್ರೆಯ ವಾತಾವರಣವೇ ರೋಗಗ್ರಸ್ಥವಾಗಿದೆ. ಆಸ್ಪತ್ರೆಗೆ ಪ್ರತಿದಿನ ಬಾಣಂತಿಯರು, ಗರ್ಭಿಣಿಯರು ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿರುವ ಸಾವಿರಾರು ರೋಗಿಗಳು ಭೇಟಿ ನೀಡುತ್ತಾರೆ. ಸ್ಮಾರ್ಟ್‌ಸಿಟಿ ಕಾಮಗಾರಿಯಿಂದ ರೋಗಿಗಳ ಜತೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆಂಬ್ಯುಲೆನ್ಸ್‌ಗಳ ಓಡಾಟಕ್ಕೂ, ಸ್ಟ್ರೆಚರ್ ಗಳ ಸಾಗಾಟಕ್ಕೂ ಸಮಸ್ಯೆಯಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಸುಸಜ್ಜಿತ ರಸ್ತೆಗಳನ್ನು ಅಭಿವೃದ್ಧಿಪಡಿಸಲು, ಪಾರ್ಕಿಂಗ್‌ ವ್ಯವಸ್ಥೆ, ಫುಟ್‌ಪಾತ್‌ ಅಭಿವೃದ್ಧಿ, ಪ್ರವೇಶ ದ್ವಾರ ಮತ್ತು ಟ್ರಸ್ಟ್‌ ನಿರ್ಮಾಣ, ಬೀದಿದೀಪ ಅಳವಡಿಸಲು ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ 10.65 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಫೆ.10 ರಂದು ಆರೋಗ್ಯ ಸಚಿವ ಸುಧಾಕರ್‌ ಕಾಮಗಾರಿಗೆ ಚಾಲನೆ ನೀಡಿದ್ದರು. ಎರಡರಿಂದ ಮೂರು ತಿಂಗಳೊಳಗೆ ಈ ಕಾಮಗಾರಿ ಮುಕ್ತಾಯವಾಗಬೇಕಿತ್ತು. ಆದರೆ ಹೆಚ್ಚುವರಿ ಆರು ತಿಂಗಳು ತೆಗೆದುಕೊಂಡರೂ ಕಾಮಗಾರಿ ಪೂರ್ಣಗೊಂಡಿಲ್ಲ. ಯಾವೆಲ್ಲಾ ಕಾಮಗಾರಿ ಬಾಕಿ? ಪ್ರಸ್ತುತ ಫುಟ್‌ಪಾತ್‌ ಕಾಬೂಲ್‌ ಸ್ಟೋನ್‌ ಹಾಕುವ ಕೆಲಸ ನಡೆಯುತ್ತಿದೆ, ವಾಣಿವಿಲಾಸ ಆಸ್ಪತ್ರೆ ಎದುರಿನ ರಸ್ತೆ ಕಾಮಗಾರಿ ಕೆಲಸವೇ ಆರಂಭವಾಗಿಲ್ಲ. ವಾಹನ ನಿಲುಗಡೆ ಸ್ಥಳದಲ್ಲೂ ಕಾಬೂಲ್‌ ಸ್ಟೋನ್‌ ಹಾಕುವುದು ಬಾಕಿ ಇದೆ. ವಿಕ್ಟೋರಿಯಾ ದಂತ ಆಸ್ಪತ್ರೆಯ ಎದುರಿನ ರಸ್ತೆ ಕಾಮಗಾರಿ ಕೂಡ ಹಾಗೆಯೇ ಉಳಿದಿದೆ. ವಿದ್ಯುತ್‌ ದೀಪವನ್ನು ಎಲ್ಲೂ ಅಳವಡಿಸಿಲ್ಲ. ವಾರದೊಳಗೆ ಮುಗಿಸಲು ಸೂಚನೆ ಡಿ.11ರಂದು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಯನ್ನು ವೀಕ್ಷಿಸಿದ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಮುಂದಿನ ಒಂದು ವಾರದೊಳಗೆ ಕಾಮಗಾರಿಯನ್ನು ಮುಕ್ತಾಯಗೊಳಿಸುವಂತೆ ಸ್ಮಾರ್ಟ್‌ ಸಿಟಿ ಲಿಮಿಟೆಡ್‌‍ನ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಲಾಕ್‌ಡೌನ್‌ ನಂತರ ಹೆಚ್ಚಿದ ರೋಗಿಗಳು ಲಾಕ್‌ಡೌನ್‌ ವೇಳೆ ಆಸ್ಪತ್ರೆಗೆ ಕೇವಲ ಕೋವಿಡ್‌ ರೋಗಿಗಳು ಮಾತ್ರವೇ ದಾಖಲಾಗುತ್ತಿದ್ದರಿಂದ ಆ ಸಮಯದಲ್ಲಿ ಕಾಮಗಾರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಕೋವಿಡ್‌ ರಹಿತ ಚಿಕಿತ್ಸೆಗಳು ಪ್ರಾರಂಭವಾದ ನಂತರ ರೋಗಿಗಳ ಸಂಖ್ಯೆ ಅಧಿಕವಾಗಿದೆ. ಇದರಿಂದ ಕಾಮಗಾರಿ ಮುಂದುವರಿಸಲು ತೊಂದರೆಯಾಗುತ್ತಿದೆ. ಜತೆಗೆ ರೋಗಿಗಳಿಗೂ ಕಷ್ಟವಾಗುತ್ತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕಾರ್ಮಿಕರ ಕೊರತೆ ಜತೆಗೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿತು. ನಂತರ ಅಕಾಲಿಕ ಮಳೆ ಕೂಡ ಕಾಮಗಾರಿಯ ವೇಗಕ್ಕೆ ಕಡಿವಾಣ ಹಾಕಿತು. ನಡೆದುಕೊಂಡೇ ಬರಬೇಕು ಕಾಮಗಾರಿಯಿಂದಾಗಿ ಆಸ್ಪತ್ರೆ ಆವರಣದ ಒಳಗೆ ಧೂಳು ತುಂಬಿಕೊಂಡಿದೆ. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ವಾಹನ ನಿಲ್ಲಿಸಲು ಸ್ಥಳವೇ ಇಲ್ಲ. ಆಂಬ್ಯುಲೆನ್ಸ್‌ಗೆ ಮಾತ್ರ ಪ್ರವೇಶ ಅವಕಾಶವಿದ್ದು, ಉಳಿದವರು ನಡೆದುಕೊಂಡೇ ಬರಬೇಕಾಗಿದೆ.