ವಿಕ ವೆಬ್ ಸಿನಿಮಾ ಅವಾರ್ಡ್ಸ್: ‘ಅತ್ಯುತ್ತಮ ಗಾಯಕಿ’ ವಿಭಾಗದಲ್ಲಿ ಲೀಡಿಂಗ್‌ನಲ್ಲಿರೋರು ‘ಇವರೇ’

#ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ರ ‘ಅತ್ಯುತ್ತಮ ಗಾಯಕಿ’ ವಿಭಾಗದಲ್ಲಿ ಇಲ್ಲಿಯವರೆಗೂ ನಡೆದಿರುವ ವೋಟಿಂಗ್ ಪ್ರಕಾರ ‘ರಾಬರ್ಟ್’ ಚಿತ್ರದ ‘ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ’ ಹಾಡಿನ ಗಾಯನಕ್ಕೆ ಐಶ್ವರ್ಯ ರಂಗರಾಜನ್ ಲೀಡಿಂಗ್‌ನಲ್ಲಿದ್ದಾರೆ. ನಿಮ್ಮ ನೆಚ್ಚಿನ ಗಾಯಕಿಗೆ ವೋಟ್ ಮಾಡಿ

ವಿಕ ವೆಬ್ ಸಿನಿಮಾ ಅವಾರ್ಡ್ಸ್: ‘ಅತ್ಯುತ್ತಮ ಗಾಯಕಿ’ ವಿಭಾಗದಲ್ಲಿ ಲೀಡಿಂಗ್‌ನಲ್ಲಿರೋರು ‘ಇವರೇ’
Linkup
ಒಂದು ಸಿನಿಮಾ ಹಿಟ್ ಆಗಲು ಹಾಡುಗಳು ಕೂಡ ತುಂಬಾ ಮುಖ್ಯ. ಸಿನಿಮಾಗಳ ಯಶಸ್ಸಿಗೆ ಕಾರಣವಾಗುವ ಹಾಡುಗಳಿಗೆ ದನಿಯಾಗುವ ಅತ್ಯುತ್ತಮ ಗಾಯಕಿಯನ್ನು ಗುರುತಿಸುವ ಸಮಯವಿದು… ‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌’ಅನ್ನು ನಿಮ್ಮ ‘ವಿಜಯ ಕರ್ನಾಟಕ ವೆಬ್’ ಆರಂಭಿಸಿದೆ. 2021ರ ಜನವರಿಯಿಂದ ನವೆಂಬರ್ 30ರವರೆಗೆ ಬಿಡುಗಡೆಯಾದ ಸಿನಿಮಾಗಳನ್ನು ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌ಗೆ ನಾಮನಿರ್ದೇಶನ ಮಾಡಲಾಗಿದೆ. 2021ರ ಜನವರಿಯಿಂದ ನವೆಂಬರ್ 30ರವರೆಗೆ ತೆರೆಕಂಡ ಚಿತ್ರಗಳಲ್ಲಿ ‘ಅತ್ಯುತ್ತಮ ಗಾಯಕಿ’ಯನ್ನು #ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ಕ್ಕೆ ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮದು… 2021ರ ಬೆಸ್ಟ್ ಗಾಯಕಿ ಯಾರು ಎಂಬುದನ್ನು ನೀವೇ ನಿರ್ಧರಿಸಿ ‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌’ನಲ್ಲಿ ವೋಟ್ ಮಾಡಿ… ನೀವು ನೀಡಿದ ಮತಗಳ ಆಧಾರದ ಮೇಲೆ 2021ರ #ವಿಕ ವೆಬ್ ಸಿನಿಮಾ ಅವಾರ್ಡ್ಸ್ ಘೋಷಿಸಲಾಗುವುದು. ಲೀಡಿಂಗ್‌ನಲ್ಲಿದ್ದಾರೆ ಐಶ್ವರ್ಯ ರಂಗರಾಜನ್ 2021ರಲ್ಲಿ ದರ್ಶನ್, ವಿನೋದ್ ಪ್ರಭಾಕರ್, ಆಶಾ ಭಟ್, ರವಿಶಂಕರ್ ನಟನೆಯ ‘ರಾಬರ್ಟ್’ ಚಿತ್ರ ಬಿಡುಗಡೆಯಾಗಿತ್ತು. ‘ರಾಬರ್ಟ್’ ಚಿತ್ರದ ‘ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ..’ ಹಾಡು ಟ್ರೆಂಡಿಂಗ್ ಆಗಿತ್ತು. ‘ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ’ ಹಾಡಿಗೆ ದನಿಯಾಗಿದ್ದವರು ಗಾಯಕಿ ಐಶ್ವರ್ಯ ರಂಗರಾಜನ್. ‘ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ’ ಹಾಡಿನ ಗಾಯನಕ್ಕಾಗಿ ಐಶ್ವರ್ಯ ರಂಗರಾಜನ್ ಅವರನ್ನು #ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ಕ್ಕೆ ಆಯ್ಕೆ ಮಾಡಲಾಗಿತ್ತು. ಅತ್ಯುತ್ತಮ ಗಾಯಕಿ ವಿಭಾಗದಲ್ಲಿ ಐಶ್ವರ್ಯ ರಂಗರಾಜನ್ ಜೊತೆಗೆ ಚೈತ್ರಾ ಆಚಾರ್ (ಚಿತ್ರ: ಗರುಡ ಗಮನ ವೃಷಭ ವಾಹನ), ಅನುರಾಧ ಭಟ್ (ಚಿತ್ರ: ಶ್ರೀಕೃಷ್ಣ@ಜಿಮೇಲ್.ಕಾಮ್), ಶ್ರೇಯಾ ಅಯ್ಯರ್ (ಚಿತ್ರ: ಸಖತ್), ರಕ್ಷಿತಾ ಸುರೇಶ್ (ಚಿತ್ರ: ನಿನ್ನ ಸನಿಹಕೆ) ನಾಮನಿರ್ದೇಶನಗೊಂಡಿದ್ದರು. ಇಲ್ಲಿಯವರೆಗೂ ನಡೆದಿರುವ ವೋಟಿಂಗ್ ಪ್ರಕಾರ, ಐಶ್ವರ್ಯ ರಂಗರಾಜನ್‌ಗೆ 66% ವೋಟ್ಸ್ ಬಿದ್ದಿವೆ. ಚೈತ್ರಾ ಆಚಾರ್‌ಗೆ 21%, ಅನುರಾಧಾ ಭಟ್‌ಗೆ 7%, ಶ್ರೇಯಾ ಅಯ್ಯರ್‌ಗೆ 3% ಹಾಗೂ ರಕ್ಷಿತಾ ಸುರೇಶ್‌ಗೆ 3% ಮತಗಳು ಲಭಿಸಿವೆ. #ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ರಲ್ಲಿ ನಿಮ್ಮ ನೆಚ್ಚಿನ ಗಾಯಕಿಯನ್ನು ಗೆಲ್ಲಿಸಲು ಈ ಕೂಡಲೆ ವೋಟ್ ಮಾಡಿ.. ವೋಟ್ ಮಾಡುವುದು ಹೇಗೆ? , ವಿವಿಧ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿರುವ ಪ್ರತಿಭಾವಂತರಿಗೆ ವೋಟ್ ಮಾಡಿ.. ಅತ್ಯುತ್ತಮ ಗಾಯಕಿ ಯಾರು? ಐಶ್ವರ್ಯಾ ರಂಗರಾಜನ್ (ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ- ರಾಬರ್ಟ್) ರಕ್ಷಿತಾ ಸುರೇಶ್‌ (ನೀ ಪರಿಚಯ- ನಿನ್ನ ಸನಿಹಕೆ) ಚೈತ್ರಾ ಆಚಾರ್ (ಸೋಜುಗದ ಸೂಜಿಮಲ್ಲಿಗೆ-ಗರುಡ ಗಮನ ವೃಷಭ ವಾಹನ) ಅನುರಾಧ ಭಟ್ - (ನೀ ಜೀವಕೂ- SriKrishna@gmail.com) ಶ್ರೇಯಾ ಅಯ್ಯರ್ (ಪ್ರೇಮಕ್ಕೆ ಕಣ್ಣಿಲ್ಲ- ಸಖತ್)