'ಗಂಟುಮೂಟೆ' ನಟನ ಜೊತೆ ‘ಟಾಮ್‌ ಆ್ಯಂಡ್‌ ಜೆರ್ರಿ’ ಆಟದಲ್ಲಿ 'ಜೋಡಿ ಹಕ್ಕಿ' ಧಾರಾವಾಹಿ ನಟಿ ಚೈತ್ರಾ ರಾವ್

ರಾಘವ್‌ ವಿನಯ್‌ ಶಿವಗಂಗೆ ನಿರ್ದೇಶನ ಮಾಡಿರುವ ‘ಟಾಮ್‌ ಆ್ಯಂಡ್‌ ಜೆರ್ರಿ’ ಸಿನಿಮಾದಲ್ಲಿನಾಯಕರಾಗಿ ನಟಿಸಿರುವ ನಿಶ್ಚಿತ್‌ ಕೊರೋಡಿ ಮತ್ತು ಚೈತ್ರಾ ರಾವ್‌ ಸಿನಿಮಾ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

'ಗಂಟುಮೂಟೆ' ನಟನ ಜೊತೆ ‘ಟಾಮ್‌ ಆ್ಯಂಡ್‌ ಜೆರ್ರಿ’ ಆಟದಲ್ಲಿ 'ಜೋಡಿ ಹಕ್ಕಿ' ಧಾರಾವಾಹಿ ನಟಿ ಚೈತ್ರಾ ರಾವ್
Linkup
(ಹರೀಶ್‌ ಬಸವರಾಜ್‌) ಮಕ್ಕಳ ಪಾಲಿಗೆ ಎವರ್‌ಗ್ರೀನ್‌ ಕಾರ್ಟೂನ್‌ ‘ಟಾಮ್‌ ಆ್ಯಂಡ್‌ ಜೆರ್ರಿ’ ಹಲವು ಪಾತ್ರ ಮತ್ತು ಕಥೆಗಳಿಗೆ ಸ್ಫೂರ್ತಿಯಾಗಿದೆ. ಇದೀಗ ಈ ಕಾರ್ಟೂನ್‌ ಧಾರಾವಾಹಿಯ ಹೆಸರನ್ನು ಕನ್ನಡದ ಸಿನಿಮಾವೊಂದಕ್ಕೆ ಇಡಲಾಗಿದೆ. ಈ ವಾರ ಬಿಡುಗಡೆಯಾಗುತ್ತಿರುವ ‘ಟಾಮ್‌ ಆ್ಯಂಡ್‌ ಜೆರ್ರಿ’ ಚಿತ್ರದಲ್ಲಿನಾಯಕ ಮತ್ತು ನಾಯಕಿಯರಿಬ್ಬರೂ ಕಾರ್ಟೂನ್‌ ಪಾತ್ರಧಾರಿಗಳಂತೆ ಜಗಳವಾಡುತ್ತಲೇ ಇರುತ್ತಾರಂತೆ. ‘ಟಾಮ್‌ ಆ್ಯಂಡ್‌ ಜೆರ್ರಿ’ ಚಿತ್ರದಲ್ಲಿ ನಾಯಕನಾಗಿ ‘ಗಂಟು ಮೂಟೆ’ ಸಿನಿಮಾ ಖ್ಯಾತಿಯ ನಟ ನಟಿಸಿದ್ದಾರೆ. ಮೂಲತಃ ತೀರ್ಥಹಳ್ಳಿಯವರಾದ ನಿಶ್ಚಿತ್‌ ಚಿಕ್ಕ ವಯಸ್ಸಿನಿಂದಲೂ ನಟನೆಯಲ್ಲಿಆಸಕ್ತಿ ಇದ್ದವರು. ಶಾಲಾ ಕಾಲೇಜಿನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಸದಾ ಮುಂದಿದ್ದ ನಿಶ್ಚಿತ್‌ ‘ಗಂಟು ಮೂಟೆ’ ಸಿನಿಮಾದಲ್ಲಿ ಹೈಸ್ಕೂಲ್‌ ಹುಡುಗನಾಗಿ ಕಾಣಿಸಿಕೊಂಡಿದ್ದರು. ಈಗ ‘ಟಾಮ್‌ ಆ್ಯಂಡ್‌ ಜೆರ್ರಿ’ಯಲ್ಲಿಅವರು ಮಧ್ಯಮ ವರ್ಗದ ಯುವಕನಾಗಿ ನಟಿಸಿದ್ದಾರೆ. ‘ಗಂಟುಮೂಟೆ ಸಿನಿಮಾದಲ್ಲಿ ನಾನು ಹೈಸ್ಕೂಲ್‌ ಹುಡುಗನಾಗಿದ್ದೆ, ಈಗ ಕಾಲೇಜು ಯುವಕನಾಗಿದ್ದೇನೆ. ಆ ಸಿನಿಮಾಗಾಗಿ ನನ್ನ ಲುಕ್‌ ಬದಲಾಯಿಸಿಕೊಂಡಿದ್ದೆ. ಈಗಿರುವ ಈ ಲುಕ್‌ನಲ್ಲೇ ಮೊದಲಿನಿಂದಲೂ ಇದ್ದವನು ನಾನು. ‘ಟಾಮ್‌ ಆ್ಯಂಡ್‌ ಜೆರ್ರಿ’ ಸಿನಿಮಾದಲ್ಲಿ ಧರ್ಮ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಧರ್ಮ ಮಧ್ಯಮವರ್ಗದ ಎಲ್ಲಾ ಹುಡುಗರನ್ನು ಪ್ರತಿನಿಧಿಸುತ್ತಾನೆ. ಅವನಿಗೆ ಏನನ್ನಾದರೂ ಸಾಧಿಸಿಯೇ ತೀರುತ್ತೇನೆ ಎಂಬ ಛಲ ಮತ್ತು ತನ್ನ ಮೇಲಿರುವ ಕಾನ್ಫಿಡೆನ್ಸೇ ಶಕ್ತಿಯಾಗಿರುತ್ತದೆ. ಇದೇ ಸಮಯದಲ್ಲಿ ಹುಡುಗಿಯೊಬ್ಬಳು ಅವನಿಗೆ ಪರಿಚಯವಾಗಿ ತನ್ನ ಯೋಚನಾ ಲಹರಿಗಳ ಮೂಲಕ ಧರ್ಮನನ್ನು ಬದಲಾಯಿಸುತ್ತಾಳೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ ನಿಶ್ಚಿತ್‌. ಡಿಪ್ಲೊಮೋದಲ್ಲಿ ಡಿಸ್ಟಿಂಕ್ಷನ್‌ ಪಡೆದಿದ್ದ ನಿಶ್ಚಿತ್‌ ಕಲಾ ಬದುಕಿನಲ್ಲಿ ಏನಾದರೂ ಸಾಧಿಸಲೇಬೇಕು ಎಂದು ಈ ಕ್ಷೇತ್ರಕ್ಕೆ ಬಂದವರು. ನಾಗತಿಹಳ್ಳಿ ಚಂದ್ರಶೇಖರ್‌ ಅವರ ಟೆಂಟ್‌ ಸಿನಿಮಾದಲ್ಲಿನ ಟನಾ ತರಬೇತಿ ಪಡೆದುಕೊಂಡಿದ್ದಾರೆ. ‘ಜೋಡಿ ಹಕ್ಕಿ’ ಸೀರಿಯಲ್‌ ಮೂಲಕ ಮನೆ ಮಾತಾದ ಚೈತ್ರಾ ರಾವ್‌ ಈ ಸಿನಿಮಾದಲ್ಲಿ, ಇದುವರೆಗೂ ನಿರ್ವಹಿಸಿಲ್ಲದ ಮತ್ತು ವಿಭಿನ್ನವಾದ ಪಾತ್ರವನ್ನು ಪೋಷಿಸುತ್ತಿದ್ದಾರೆ. ‘ಟಾಮ್‌ ಆ್ಯಂಡ್‌ ಜೆರ್ರಿ ಸಿನಿಮಾದಲ್ಲಿ ಸತ್ಯ ಎನ್ನುವ ಯುವತಿಯ ಪಾತ್ರ ನನ್ನದು. ಸತ್ಯ ಯಾವಾಗಲೂ ಸ್ವತಂತ್ರವಾಗಿರಲು ಬಯಸುತ್ತಾಳೆ. ತುಂಬಾ ಯೋಚನೆ ಮಾಡುವುದಿಲ್ಲ. ಇಂದಿನ ಬದುಕು ಇಂದಿಗೆ ಎಂದುಕೊಂಡಿರುವವಳು. ನಿಜ ಜೀವನದಲ್ಲಿನಾನು ಆ ರೀತಿ ಯೋಚಿಸಿದವಳಲ್ಲ. ಎಷ್ಟೋ ಸಲ ಈ ಪಾತ್ರ ನನಗೆ ಸೂಟ್‌ ಆಗುತ್ತದಾ ಎಂದು ಯೋಚಿಸಿದ್ದಿದೆ. ನಿರ್ದೇಶಕರು ನನಗೆ ಧೈರ್ಯ ತುಂಬಿ ಮತ್ತು ನನ್ನ ಕೈಲಿ ಇದು ಆಗುತ್ತದೆ ಎಂದು ಹೇಳಿ ಮಾಡಿಸಿದ್ದಾರೆ. ವಿಶಿಷ್ಟವಾಗಿರುವ ಪಾತ್ರ ಎನ್ನಬಹುದು’ ಎನ್ನುತ್ತಾರೆ ಚೈತ್ರಾ. ನನ್ನ ಕ್ಯಾರೆಕ್ಟರ್‌ನ ಕಾಸ್ಟ್ಯೂಮ್‌, ಹೇರ್‌ಸ್ಟೈಲ್‌ ಎಲ್ಲವೂ ನೋಡಿದರೆ ಇದೊಂದು ವಿಭಿನ್ನವಾದ ಪಾತ್ರ. ನಿರ್ದೇಶಕರ ಬಳಿ ಕಥೆ ಕೇಳಿ ಪಾತ್ರವೇ ನಾನಾಗಲು ಪ್ರಯತ್ನಪಟ್ಟು ನಟಿಸಿದ್ದೇನೆ ಎಂದಿದ್ದಾರೆ ಚೈತ್ರಾ ರಾವ್ "ಧರ್ಮ ಎನ್ನುವ ಪಾತ್ರ ಹಲವು ಮಧ್ಯಮ ವರ್ಗದ ಹುಡುಗರ ಪ್ರತಿನಿಧಿ ಎನ್ನಬಹುದು. ಸಿನಿಮಾದಲ್ಲಿ 20 ನಿಮಿಷಕ್ಕೊಮ್ಮೆ ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ಸಿಗುತ್ತದೆ. ಪ್ರತಿಯೊಬ್ಬರಿಗೂ ಇಷ್ಟವಾಗುವ ಸಿನಿಮಾ ಇದು" ಎಂದಿದ್ದಾರೆ ನಿಶ್ಚಿತ್‌ ಕೊರೋಡಿ