ವಿಕ ವೆಬ್ ಸಿನಿಮಾ ಅವಾರ್ಡ್ಸ್: ‘ಅತ್ಯುತ್ತಮ ಗಾಯಕ’ ವಿಭಾಗದಲ್ಲಿ ಅಧಿಕ ಮತಗಳನ್ನು ಪಡೆದಿರುವವರು..

#ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ರ ‘ಅತ್ಯುತ್ತಮ ಗಾಯಕ’ ವಿಭಾಗದಲ್ಲಿ ಇಲ್ಲಿಯವರೆಗೂ ನಡೆದಿರುವ ವೋಟಿಂಗ್ ಪ್ರಕಾರ ‘ಯುವರತ್ನ’ ಚಿತ್ರದ ‘ಪಾಠಶಾಲಾ’ ಹಾಡಿನ ಗಾಯನಕ್ಕೆ ವಿಜಯ್ ಪ್ರಕಾಶ್ ಲೀಡಿಂಗ್‌ನಲ್ಲಿದ್ದಾರೆ. ನಿಮ್ಮ ನೆಚ್ಚಿನ ಗಾಯಕನಿಗೆ ವೋಟ್ ಮಾಡಿ

ವಿಕ ವೆಬ್ ಸಿನಿಮಾ ಅವಾರ್ಡ್ಸ್: ‘ಅತ್ಯುತ್ತಮ ಗಾಯಕ’ ವಿಭಾಗದಲ್ಲಿ ಅಧಿಕ ಮತಗಳನ್ನು ಪಡೆದಿರುವವರು..
Linkup
ಹಾಡುಗಳ ಮೂಲಕವೇ ಸೆನ್ಸೇಷನ್ ಹುಟ್ಟುಹಾಕಿದ ಅನೇಕ ಗಾಯಕರು ಕನ್ನಡ ಚಿತ್ರರಂಗದಲ್ಲಿದ್ದಾರೆ. 2021ರಲ್ಲೂ ಹಲವು ಹಾಡುಗಳು ಹಿಟ್ ಆಗಿವೆ. ಅಂತಹ ಹಾಡುಗಳಿಗೆ ದನಿಯಾಗಿರುವ ಅತ್ಯುತ್ತಮ ಗಾಯಕರನ್ನು ಆಯ್ಕೆ ಮಾಡುವ ಸಮಯ ಇದು… ‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌’ಅನ್ನು ನಿಮ್ಮ ‘ವಿಜಯ ಕರ್ನಾಟಕ ವೆಬ್’ ಆರಂಭಿಸಿದೆ. 2021ರ ಜನವರಿಯಿಂದ ನವೆಂಬರ್ 30ರವರೆಗೆ ಬಿಡುಗಡೆಯಾದ ಸಿನಿಮಾಗಳನ್ನು ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌ಗೆ ನಾಮನಿರ್ದೇಶನ ಮಾಡಲಾಗಿದೆ. 2021ರ ಜನವರಿಯಿಂದ ನವೆಂಬರ್ 30ರವರೆಗೆ ತೆರೆಕಂಡ ಚಿತ್ರಗಳಲ್ಲಿ ‘ಅತ್ಯುತ್ತಮ ಗಾಯಕ’ನನ್ನು #ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ಕ್ಕೆ ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮದು… 2021ರ ಬೆಸ್ಟ್ ಗಾಯಕ ಯಾರು ಎಂಬುದನ್ನು ನೀವೇ ನಿರ್ಧರಿಸಿ ‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌’ನಲ್ಲಿ ವೋಟ್ ಮಾಡಿ… ನೀವು ನೀಡಿದ ಮತಗಳ ಆಧಾರದ ಮೇಲೆ 2021ರ #ವಿಕ ವೆಬ್ ಸಿನಿಮಾ ಅವಾರ್ಡ್ಸ್ ಘೋಷಿಸಲಾಗುವುದು. ವಿಜಯ್ ಪ್ರಕಾಶ್ ಮುನ್ನಡೆ 2021ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಸಂತೋಷ್ ಆನಂದ್‌ರಾಮ್ ನಿರ್ದೇಶನದ ‘ಯುವರತ್ನ’ ಚಿತ್ರ ಬಿಡುಗಡೆಯಾಗಿತ್ತು. ‘ಯುವರತ್ನ’ ಚಿತ್ರದ ‘ಪಾಠಶಾಲಾ.’ ಹಾಡು ಟ್ರೆಂಡಿಂಗ್ ಆಗಿತ್ತು. ‘ಪಾಠಶಾಲಾ’ ಹಾಡಿಗೆ ದನಿಯಾಗಿದ್ದವರು ಗಾಯಕ ವಿಜಯ್ ಪ್ರಕಾಶ್. ‘ಪಾಠಶಾಲಾ’ ಹಾಡಿನ ಗಾಯನಕ್ಕಾಗಿ ವಿಜಯ್ ಪ್ರಕಾಶ್ ಅವರನ್ನು #ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ಕ್ಕೆ ಆಯ್ಕೆ ಮಾಡಲಾಗಿತ್ತು. ಅತ್ಯುತ್ತಮ ಗಾಯಕ ವಿಭಾಗದಲ್ಲಿ ವಿಜಯ್ ಪ್ರಕಾಶ್ ಜೊತೆಗೆ ಸಂಚಿತ್ ಹೆಗಡೆ (ಚಿತ್ರ: ಸಲಗ), ಚಂದನ್ ಶೆಟ್ಟಿ (ಚಿತ್ರ: ಪೊಗರು), ಸಿದ್ಧಾರ್ಥ್ ಬೆಳಮಣ್ಣು (ಚಿತ್ರ: ನಿನ್ನ ಸನಿಹಕೆ), ಪಂಚಂ ಜೀವ (ಚಿತ್ರ: ಸಖತ್) ನಾಮನಿರ್ದೇಶನಗೊಂಡಿದ್ದರು. ಇಲ್ಲಿಯವರೆಗೂ ನಡೆದಿರುವ ವೋಟಿಂಗ್ ಪ್ರಕಾರ, ವಿಜಯ್ ಪ್ರಕಾಶ್‌ಗೆ 74% ವೋಟ್ಸ್ ಬಿದ್ದಿವೆ. ಸಂಚಿತ್ ಹೆಗಡೆಗೆ 12%, ಚಂದನ್ ಶೆಟ್ಟಿಗೆ 6%, ಸಿದ್ಧಾರ್ಥ್ ಬೆಳಮಣ್ಣುಗೆ 5% ಹಾಗೂ ಪಂಚಂ ಜೀವಗೆ 3% ಮತಗಳು ಲಭಿಸಿವೆ. #ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ರಲ್ಲಿ ನಿಮ್ಮ ನೆಚ್ಚಿನ ಗಾಯಕನನ್ನು ಗೆಲ್ಲಿಸಲು ಈ ಕೂಡಲೆ ವೋಟ್ ಮಾಡಿ.. ವೋಟ್ ಮಾಡುವುದು ಹೇಗೆ? , ವಿವಿಧ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿರುವ ಪ್ರತಿಭಾವಂತರಿಗೆ ವೋಟ್ ಮಾಡಿ.. ಅತ್ಯುತ್ತಮ ಗಾಯಕ ಯಾರು? ವಿಜಯ್ ಪ್ರಕಾಶ್ (ಪಾಠಶಾಲಾ- ಯುವರತ್ನ) ಸಂಚಿತ್ ಹೆಗಡೆ (ಮಳೆಯೇ ಮಳೆಯೇ- ಸಲಗ) ಪಂಚಂ ಜೀವ (ಪ್ರೇಮಕ್ಕೆ ಕಣ್ಣಿಲ್ಲ- ಸಖತ್) ಸಿದ್ದಾರ್ಥ್‌ ಬೆಳಮಣ್ಣು (ನೀ ಪರಿಚಯ- ನಿನ್ನ ಸನಿಹಕೆ) ಚಂದನ್ ಶೆಟ್ಟಿ (ಖರಾಬು- ಪೊಗರು)