'ಲವ್ ಯೂ ರಚ್ಚು' ಶೂಟಿಂಗ್ ವೇಳೆ ಫೈಟರ್ ಸಾವು: ಆರೋಪಿಗಳಿಗೆ ಜಾಮೀನು ನೀಡಿದ ನ್ಯಾಯಾಲಯ

'ಲವ್ ಯೂ ರಚ್ಚು' ಚಿತ್ರದ ದುರ್ಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಎಫ್‌ಐಆರ್ ಹಾಕಲಾಗಿತ್ತು. ಐವರ ಪೈಕಿ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದ್ರೀಗ, ಆರೋಪಿಗಳಿಗೆ ರಾಮನಗರ ನ್ಯಾಯಾಲಯ ಜಾಮೀನು ನೀಡಿದೆ. ಆ ಮೂಲಕ 'ಲವ್ ಯೂ ರಚ್ಚು' ಚಿತ್ರತಂಡಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

'ಲವ್ ಯೂ ರಚ್ಚು' ಶೂಟಿಂಗ್ ವೇಳೆ ಫೈಟರ್ ಸಾವು: ಆರೋಪಿಗಳಿಗೆ ಜಾಮೀನು ನೀಡಿದ ನ್ಯಾಯಾಲಯ
Linkup
ನಟ ಕೃಷ್ಣ ಹಾಗೂ ಡಿಂಪಲ್ ಕ್ವೀನ್ ಅಭಿನಯದ '' ಸಿನಿಮಾದ ಚಿತ್ರೀಕರಣದ ವೇಳೆ ಸಂಭವಿಸಿದ ವಿದ್ಯುತ್ ಅವಘಡದಿಂದ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಎಫ್‌ಐಆರ್ ಹಾಕಲಾಗಿತ್ತು. ಐವರ ಪೈಕಿ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದ್ರೀಗ, ಆರೋಪಿಗಳಿಗೆ ರಾಮನಗರ ನ್ಯಾಯಾಲಯ ಜಾಮೀನು ನೀಡಿದೆ. ಆ ಮೂಲಕ 'ಲವ್ ಯೂ ರಚ್ಚು' ಚಿತ್ರತಂಡಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಆರೋಪಿಗಳಿಗೆ ಜಾಮೀನು ನೀಡಿದ ಕೋರ್ಟ್ 'ಲವ್ ಯೂ ರಚ್ಚು' ಸಿನಿಮಾದ ದುರ್ಘಟನೆಗೆ ಸಂಬಂಧಿಸಿದಂತೆ ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹಾದೇವ್, ಸಾಹಸ ನಿರ್ದೇಶಕ ವಿನೋದ್ ನ್ಯಾಯಾಂಗ ಬಂಧನದಲ್ಲಿದ್ದರು. ಪ್ರೊಡಕ್ಷನ್ ಮ್ಯಾನೇಜರ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ನಾಪತ್ತೆಯಾಗಿದ್ದರು. ಅವರಿಬ್ಬರಿಗೂ ಬಂಧನ ಭೀತಿ ಕಾಡುತ್ತಿತ್ತು. ಹೀಗಾಗಿ ಗುರು ದೇಶಪಾಂಡೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇನ್ನೂ ನಟ ಅಜಯ್ ರಾವ್ ಕೂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದೀಗ 'ಲವ್ ಯೂ ರಚ್ಚು' ಚಿತ್ರತಂಡದ ಆರು ಮಂದಿಗೆ ರಾಮನಗರ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ. ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹಾದೇವ್, ಸಾಹಸ ನಿರ್ದೇಶಕ ವಿನೋದ್, ಪ್ರೊಡಕ್ಷನ್ ಮ್ಯಾನೇಜರ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನಟ ಅಜಯ್ ರಾವ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಎಲ್ಲೂ ಓಡಿ ಹೋಗಿಲ್ಲ ಎಂದ ಅಜಯ್ ರಾವ್ 'ಲವ್ ಯೂ ರಚ್ಚು' ಶೂಟಿಂಗ್ ವೇಳೆ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ ನಟ ಅಜಯ್ ರಾವ್ ಇಂದು ಬಿಡದಿ ಪೊಲೀಸ್ ಠಾಣೆಗೆ ವಿಚಾರಣೆಗೆಂದು ಹಾಜರ್ ಆಗಿದ್ದರು. ವಿಚಾರಣೆ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅಜಯ್ ರಾವ್, ''ದುರ್ಘಟನೆ ಬಳಿಕ ನಾನು ಎಲ್ಲೂ ಓಡಿ ಹೋಗಿಲ್ಲ. ಆಸ್ಪತ್ರೆಯಲ್ಲಿರುವವನಿಗೆ ಸುಳ್ಳು ಮಾಹಿತಿ ನೀಡಿ ಹೇಳಿಕೆ ಕೊಡಿಸಲಾಗಿದೆ. ಸೆಟ್‌ನಲ್ಲಿ ನಾನೊಬ್ಬನೇ ಇದ್ನಾ? ಸಹಾಯ ಮಾಡಬೇಕು ಅಂದ್ರೆ ಏನು ಮಾಡಬೇಕು? ಯಾವ ರೀತಿ ಸಹಾಯ ಮಾಡಬೇಕು? ಪೊಲೀಸರು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ಕೊಟ್ಟಿದ್ದೇನೆ. ಹೆದರಿಕೊಂಡು ನಾನು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ'' ಎಂದು ಹೇಳಿದರು. ಘಟನೆಯ ಹಿನ್ನೆಲೆ ಬಿಡದಿ ಬಳಿಯ ಜೋಗನಪಾಳ್ಯ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ 'ಲವ್ ಯೂ ರಚ್ಚು' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ಫೈಟರ್ ವಿವೇಕ್ ಮೃತಪಟ್ಟರು. ಇನ್ನೂ ಮತ್ತೊಬ್ಬ ಸಾಹಸ ಕಲಾವಿದ ರಂಜಿತ್ ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದರು.