ನಟಿ ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ ಸೇರಿ 12 ಜನರಿಗೆ ನೋಟಿಸ್ ನೀಡಿದ ಜಾರಿ ನಿರ್ದೇಶನಾಲಯ

ಟಾಲಿವುಡ್‌ನಲ್ಲಿಯೂ ಡ್ರಗ್ಸ್ ಮಾಫಿಯಾ ಜೋರಾಗಿದೆ. 2017ರಿಂದ ಈ ಕುರಿತು ತನಿಖೆ ನಡೆಯುತ್ತಿದೆ. ಸದ್ಯ ಟಾಲಿವುಡ್‌ನ 12 ಕಲಾವಿದರಿಗೆ ವಿಚಾರಣೆಯಲ್ಲಿ ಭಾಗಿಯಾಗುವಂತೆ ನೋಟಿಸ್ ನೀಡಲಾಗಿದೆ.

ನಟಿ ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ ಸೇರಿ 12 ಜನರಿಗೆ ನೋಟಿಸ್ ನೀಡಿದ ಜಾರಿ ನಿರ್ದೇಶನಾಲಯ
Linkup
ಕಳೆದ ಒಂದು ವರ್ಷದಿಂದ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ದೊಡ್ಡ ಸೌಂಡ್ ಮಾಡಿತ್ತು. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಎಫ್‌ಎಸ್‌ಎಲ್ ವರದಿ ಬಂದಿದ್ದು, ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಡ್ರಗ್ಸ್ ಸೇವನೆ ಮಾಡಿರೋದು ಸಾಬೀತಾಗಿದೆ. ಅಂತೆಯೇ ಟಾಲಿವುಡ್‌ನಲ್ಲಿ ಕೆಲ ನಟ-ನಿರ್ಮಾಪಕರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈಗ ಟಾಲಿವುಡ್‌ನ 12 ಮಂದಿಗೆ ಜಾರಿ ನಿರ್ದೇಶನಾಲಯ () ನೋಟಿಸ್ ನೀಡಿದೆ. ಯಾರು ಯಾರಿಗೆ ನೋಟೀಸ್? ಕಲಾವಿದರಾದ ರಕುಲ್ ಪ್ರೀತ್ ಸಿಂಗ್, , ರವಿತೇಜ್, ಚಾರ್ಮಿ ಕೌರ್, ನವದೀಪ್, ಮಮೈತ್ ಖಾನ್, ತನಿಶ್ ನಂದು, ತರುಣ್, ಪುರಿ ಜಗನ್ನಾಥ್ ಸೇರಿದಂತೆ ಕೆಲವರಿಗೆ ಇಡಿ ನೋಟೀಸ್ ನೀಡಿದೆ. ಸೆಪ್ಟೆಂಬರ್ 6ರಂದು , ಸೆಪ್ಟೆಂಬರ್ 8ರಂದು ರಾಣಾ ದಗ್ಗುಬಾಟಿ, ಸೆಪ್ಟೆಂಬರ್ 9ರಂದು ರವಿತೇಜ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಹೇಳಲಾಗಿದೆ. ಆಗಸ್ಟ್ 31ರ ಒಳಗೆ ನಿರ್ದೇಶಕ ಪುರಿ ಜಗನ್ನಾಥ್ ಅವರು ತನಿಖೆಗೆ ಹಾಜರಾಗಬೇಕು. ತನಿಖೆಯಲ್ಲಿ ಭಾಗಿಯಾಗಿರುವ ಇಡಿ ಅಧಿಕಾರಿಯೊಬ್ಬರು, "ತೆಲಂಗಾಣ ಅಬಕಾರಿ ಮತ್ತು ನಿಷೇಧ ಇಲಾಖೆಯಿಂದ ಸುಮಾರು 12 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 11 ಚಾರ್ಜ್ ಶೀಟ್‌ಗಳನ್ನು ಭರ್ತಿ ಮಾಡಲಾಗಿದೆ" ಎಂದು ಹೇಳಿದ್ದಾರೆ. ಸರಿಯಾದ ಸಾಕ್ಷಿ-ಪುರಾವೆ ಸಿಗೋದು ಕಷ್ಟ ಡ್ರಗ್ಸ್ ದಂಧೆಯಲ್ಲಿ ಕೆಲವರು ಸಣ್ಣ ಪ್ರಮಾಣದಲ್ಲಿ ಸಾಗಾಣಿಕೆ ಮಾಡುತ್ತಿದ್ದರು. ಹೀಗಾಗಿ ಟಾಲಿವುಡ್‌ನ ಸೆಲೆಬ್ರಿಟಿಗಳನ್ನು ಸದ್ಯ ಸಾಕ್ಷಿದಾರರು ಎಂದು ಪರಿಗಣಿಸಲಾಗಿದ್ದು, ತನಿಖೆಯ ನಂತರದಲ್ಲಿ ಯಾರು ಈ ಪ್ರಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಕಂಡು ಹಿಡಿದು, ಹೆಸರನ್ನು ಬಹಿರಂಗ ಮಾಡಲಾಗುವುದಂತೆ. ಸರಿಯಾದ ಸಾಕ್ಷಿ-ಪುರಾವೆ ಇಲ್ಲದಿರೋದಕ್ಕೆ ಕಲಾವಿದರನ್ನು ಪ್ರಶ್ನಿಸಿದ ನಂತರದಲ್ಲಿಯೂ ಇಲಾಖೆಗೆ ಕ್ರಮ ಕೈಗೊಳ್ಳಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ. 62 ಜನರ ಮೇಲೆ ಅನುಮಾನ 2017ರಿಂದ ಎಸ್‌ಐಟಿ ತಂಡವು ಕೂದಲು, ಉಗುರಿನ ಸ್ಯಾಂಪಲಡೆ ಪಡೆದಿದ್ದು, 62 ಜನರ ಮೇಲೆ ಅನುಮಾನ ಪಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲಾಖೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಮುಂಬೈನಿಂದ ಹೈದರಾಬಾದ್‌ಗೆ ಕೊಕೇನ್ ಕಳ್ಳಸಾಗಣೆ ಮಾಡಿ ಮಾರಾಟ ಮಾಡಿದ ಆರೋಪದ ಮೇಲೆ ದಕ್ಷಿಣ ಆಫ್ರಿಕಾದ ಪ್ರಜೆಯ ವಿರುದ್ಧ ಒಂದು ಆರೋಪಪಟ್ಟಿ ಸಲ್ಲಿಸಲಾಗಿದೆ. ಅವರನ್ನು ಆಗಸ್ಟ್ 2017 ರಲ್ಲಿ ಬಂಧಿಸಲಾಗಿತ್ತು. ಆಗ ಎಸ್‌ಐಟಿ ತಂಡವು ಆರೋಪಿಗಳನ್ನು ಪ್ರಶ್ನಿಸಿದಾಗ, ಎಲ್ಲಾ ನಟರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದರು.