ರೈಲ್ವೆ ನೌಕರರಿಗೆ ಭರ್ಜರಿ ದಸರಾ ಗಿಫ್ಟ್‌! 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸಂಪುಟ!

ರೈಲೈ ಇಲಾಖೆ ತನ್ನ ನೌಕರರಿಗೆ ಭರ್ಜರಿ ಉಡುಗೊರೆ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ರೈಲ್ವೆ ನೌಕರರಿಗೆ ಬೋನಸ್ ನೀಡುವ ಕುರಿತು ನಿರ್ಧಾರ ಪ್ರಕಟಿಸಲಾಗಿದೆ.

ರೈಲ್ವೆ ನೌಕರರಿಗೆ ಭರ್ಜರಿ ದಸರಾ ಗಿಫ್ಟ್‌! 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸಂಪುಟ!
Linkup
ಹೊಸದಿಲ್ಲಿ: ಹಬ್ಬಗಳ ಸೀಜನ್ ಆಂಭಕ್ಕೂ ಮೊದಲೇ ಭಾರತೀಯ ರೈಲೈ ಇಲಾಖೆ ತನ್ನ ನೌಕರರಿಗೆ ಭರ್ಜರಿ ಉಡುಗೊರೆ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ರೈಲ್ವೆ ನೌಕರರಿಗೆ ನೀಡುವ ಕುರಿತು ನಿರ್ಧಾರ ಪ್ರಕಟಿಸಲಾಗಿದೆ. ಈ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರೈಲ್ವೆ ನೌಕರರಿಗೆ ಈ ಬಾರಿ ಬರೋಬ್ಬರಿ 78 ದಿನಗಳ ಬೋನಸ್ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ದಸರಾ ಹಬ್ಬದ ಆರಂಭಕ್ಕೂ ಮುನ್ನವೇ ರೈಲ್ವೆ ಇಲಾಖೆಯ ನೌಕರರಿಗೆ ಈ ಬೋನಸ್ ಹಣ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿ ವರ್ಷ ರೈಲ್ವೆ ಇಲಾಖೆಯ ಸುಮಾರು 11.56 ಲಕ್ಷ ನಾನ್ ಗೆಜೆಟೆಡ್ ನೌಕರರಿಗೆ 78 ದಿನಗಳ ಬೋನಸ್ ನೀಡಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ. ಎಷ್ಟು ಹಣ ಸಿಗಲಿದೆ? ಈ ಬಾರಿ ರೈಲ್ವೆ ಇಲಾಖೆಯ ನೌಕರರಿಗೆ ಸುಮಾರು 18000 ರೂ. ಹೆಚ್ಚುವರಿ ಬೋನಸ್ ಸಿಗಲಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಾಮಾನ್ಯವಾಗಿ ಬೋನಸ್ 72 ದಿನಗಳ ವೇತನ ಆಗಿರುತ್ತದೆ. ಆದರೆ, ಈ ಬಾರಿ 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲಾಗುತ್ತಿದೆ. ರೈಲ್ವೆ ಇಲಾಖೆಯ ಸುಮಾರು 11.56 ಲಕ್ಷ ನೌಕರರಿಗೆ ಇದರ ಲಾಭ ಸಿಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 1985 ಕೋಟಿ ರೂ. ಹೊರೆ ಬೀಳಲಿದೆ ಎಂದು ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. ಕೋಲ್ ಇಂಡಿಯಾ ನೌಕರರಿಗೆ ಸಿಗಲಿದೆ 72, 500 ರೂ. ರಿವಾರ್ಡ್ ಇನ್ನೊಂದೆಡೆ, ಸಾರ್ವಜನಿಕ ವಲಯದ ಕೋಲ್ ಇಂಡಿಯಾ ಲಿಮಿಟೆಡ್ (Coal India Limited) ಹಬ್ಬದ ಸೀಸನ್ ಗೆ ಮುಂಚಿತವಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ಅಂದರೆ, 2020-21ರ ಹಣಕಾಸು ವರ್ಷಕ್ಕೆ ತನ್ನ ಎಲ್ಲ ಕಾರ್ಯನಿರ್ವಾಹಕವಲ್ಲದ ಕೆಲಸಗಾರರಿಗೆ 72,500 ರೂ.ಗಳ PLR (Performance-Linked Reward) ನೀಡುವುದಾಗಿ ಘೋಷಿಸಿದೆ. PLR ಅನ್ನು ಅಕ್ಟೋಬರ್ 11, 2021 ಅಥವಾ ಅದಕ್ಕಿಂತ ಮೊದಲು ಪಾವತಿಸಲಾಗುವುದು ಎಂದು ನವರತ್ನ ಕಂಪನಿಗಳಲ್ಲಿ ಒಂದಾಗಿರುವ ಕಂಪನಿ ಹೇಳಿದೆ. ಅಂದರೆ, ದಸರಾಕ್ಕಿಂತ ಮುಂಚಿತವಾಗಿ ಉದ್ಯೋಗಿಗಳಿಗೆ ಇದು ಸಿಗಲಿದೆ. ಕೋಲ್ ಇಂಡಿಯಾ ಉಡುಗೊರೆ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ 'ಕೋಲ್ ಇಂಡಿಯಾ ಹಾಗೂ ಅದರ ಸಬ್ಸಿಡರಿ ಸಿಂಗರೆನಿ ಕೊಲಿಯರಿಸ್ ಕಂಪನಿ ಲಿಮಿಟೆಡ್ ಕಾರ್ಯನಿರ್ವಾಹಕರಲ್ಲದ ಕೆಡೆರ್ ನೌಕರರಿಗೆ ಆರ್ಥಿಕ ವರ್ಷ 2020-21 ಕ್ಕಾಗಿ 72, 500 ರೂ.ಗಳ PLR ನೀಡಲಾಗುವದು' ಎಂದು ಹೇಳಿದೆ. ಸೆಂಟ್ರಲ್ ಟ್ರೇಡ್ ಯೂನಿಯನ್ ಪ್ರತಿನಿಧಿಗಳು ಹಾಗೂ ಕೋಲ್ ಇಂಡಿಯಾ ಹಾಗೂ SCCL ಮ್ಯಾನೇಜ್ಮೆಂಟ್ ಮಧ್ಯೆ ನಡೆದ ದ್ವಿಪಕ್ಷಿಯ ಮಾತುಕತೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಇಲ್ಲಿ ಗಮನಾರ್ಹ.