ದೀಪಾವಳಿ ವೇಳೆಗೆ ಕಲ್ಲಿದ್ದಲು ಸಂಗ್ರಹಣೆ ಚೇತರಿಕೆ: ವಿದ್ಯುತ್‌ ಕೊರತೆಯ ಆತಂಕ ದೂರ!

ರಾಜ್ಯಕ್ಕೆ ಕವಿದಿದ್ದ ಕಲ್ಲಿದ್ದಲಿನ ಕೊರತೆಯ ಕಾರ್ಮೋಡ ನಿಧಾನವಾಗಿ ಸರಿಯುತ್ತಿದ್ದು, ಬಳ್ಳಾರಿಯ ಕುಡಿತಿನಿ ಶಾಖೋತ್ಪನ್ನ ಹೊರತುಪಡಿಸಿ ಇನ್ನುಳಿದ ಎರಡು ಥರ್ಮಲ್‌ ವಿದ್ಯುತ್‌ ಉತ್ಪಾದನೆ ಕೇಂದ್ರಗಳಲ್ಲಿ ಕಲ್ಲಿದ್ದಲು ಸಂಗ್ರಹಣೆ ಏರಿಕೆಯಾಗಿದೆ.

ದೀಪಾವಳಿ ವೇಳೆಗೆ ಕಲ್ಲಿದ್ದಲು ಸಂಗ್ರಹಣೆ ಚೇತರಿಕೆ: ವಿದ್ಯುತ್‌ ಕೊರತೆಯ ಆತಂಕ ದೂರ!
Linkup
ಜಗನ್ನಾಥ. ಆರ್‌.ದೇಸಾಯಿ ರಾಜ್ಯಕ್ಕೆ ಕವಿದಿದ್ದ ಕಲ್ಲಿದ್ದಲಿನ ಕೊರತೆಯ ಕಾರ್ಮೋಡ ನಿಧಾನವಾಗಿ ಸರಿಯುತ್ತಿದ್ದು, ಬಳ್ಳಾರಿಯ ಕುಡಿತಿನಿ ಶಾಖೋತ್ಪನ್ನ ಹೊರತುಪಡಿಸಿ ಇನ್ನುಳಿದ ಎರಡು ಥರ್ಮಲ್‌ ವಿದ್ಯುತ್‌ ಉತ್ಪಾದನೆ ಕೇಂದ್ರಗಳಲ್ಲಿ ಸಂಗ್ರಹಣೆ ಏರಿಕೆಯಾಗಿದೆ. ಹೀಗಾಗಿ ದಸರಾಕ್ಕೆ ಎದುರಾಗಿದ್ದ ವಿದ್ಯುತ್‌ ಕೊರತೆಯ ಆತಂಕ ದೀಪಾವಳಿಗೆ ದೂರವಾಗಿದೆ. ಅಕ್ಟೋಬರ್‌ ತಿಂಗಳಾರಂಭದಲ್ಲಿ ದೇಶದ ಕಲ್ಲಿದ್ದಲು ಗಣಿಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಹೇರಳವಾಗಿದ್ದರೂ, ಸಾಗಣೆಯ ಸಮಸ್ಯೆಯಿಂದಾಗಿ ಕೊರತೆಯಾಗಿತ್ತು. ಪರಿಸ್ಥಿತಿ ನಿಭಾಯಿಸಲು ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ ಅಘೋಷಿತವಾಗಿ ಜಾರಿಗೆ ತರಲಾಗಿತ್ತು. ದಸರಾ ಹಬ್ಬದ ಸಂಭ್ರಮಕ್ಕೆ ವಿದ್ಯುತ್‌ ಕೊರತೆಯ ಬಿಸಿ ತಟ್ಟಿತ್ತು. ಕೇಂದ್ರ ಸರಕಾರದ ಕಲ್ಲಿದ್ದಲು ಸಚಿವಾಲಯವು ದೇಶದಲ್ಲಿ ಎದುರಾದ ಕಲ್ಲಿದ್ದಲು ಅಭಾವ ನೀಗಿಸಲು ಯುದ್ಧೋಪಾದಿಯಲ್ಲಿ ಕಲ್ಲಿದ್ದಲು ಒದಗಿಸಲು ಮುಂದಾಗಿದ್ದರಿಂದ ಕಲ್ಲಿದ್ದಲು ಪೂರೈಕೆ ಚುರುಕುಗೊಳಿಸಿದ್ದು, ರಾಜ್ಯದ ಮೂರು ಥರ್ಮಲ್‌ ಘಟಕಗಳಿಗೆ ಕಲ್ಲಿದ್ದಲು ಪೂರೈಕೆ ಸಗಾರವಾಗಿದೆ. ಸಂಗ್ರಹಣೆ ಏರಿಕೆ: ರಾಜ್ಯದ ಬಳ್ಳಾರಿ, ಶಕ್ತಿನಗರ ಹಾಗೂ ಯರಮರಸ್‌ ನಲ್ಲಿರುವ ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳಿಗೆ ಅಕ್ಟೋಬರ್‌ ಎರಡನೇ ವಾರದ ಹೊತ್ತಿಗೆ ಕಲ್ಲಿದ್ದಲು ಪೂರೈಕೆ ಆರಂಭಗೊಂಡಿದ್ದು, ಬಳ್ಳಾರಿಯಲ್ಲಿ ಕಲ್ಲಿದ್ದಲು ಕೊರತೆ ಈಗಲೂ ಮುಂದುವರಿದಿದೆ. ಕುಡಿತಿನಿಯ ಬಿಟಿಪಿಎಸ್‌ ನಲ್ಲಿ ಕಲ್ಲಿದ್ದಲು ಸಂಗ್ರಹ ತಳಕಚ್ಚಿದೆ. ಆದರೆ ಸಮಾಧಾನದ ಸಂಗತಿಯೆಂದರೆ ರಾಯಚೂರಿನ ಶಕ್ತಿನಗರ, ಹಾಗೂ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳಲ್ಲಿ ಕಲ್ಲಿದ್ದಲು ಸಂಗ್ರಹಣೆ ಅಕ್ಟೋಬರ್‌ ತಿಂಗಳಾರಂಭಕ್ಕಿಂತ ಚೇತರಿಕೆ ಕಂಡಿದೆ. ಶಕ್ತಿನಗರದಲ್ಲಿ ಸದ್ಯ ನಾಲ್ಕು ಘಟಕಗಳಿಂದ 850ಮೆವ್ಯಾ ವಿದ್ಯುತ್ ಉತ್ಪಾದಿಸುತ್ತಿದ್ದು, 4 ದಿನಕ್ಕಾಗುವಷ್ಟು 60.2 ಮೆಟ್ರಿಕ್‌ ಟನ್‌, ಯರಮರಸ್‌ ನಲ್ಲಿ ಸದ್ಯ ತಾಂತ್ರಿಕ ಸಮಸ್ಯೆಯಿಂದ ಉತ್ಪಾದನೆ ಸ್ಥಗಿತಗೊಳಿಸಿದ್ದು ಅಲ್ಲಿ 42.4 ಮೆ.ಟನ್‌ ಕಲ್ಲಿದ್ದಲಿದೆ. ಮೂರು ದಿನಕ್ಕೆ ಇದು ಸಾಕಾಗಲಿದೆ ಎಂದು ಮೂಲಗಳು ತಿಳಿಸಿವೆ. ಒಡಿಶಾದ ಮಹಾನದಿ ಕಲ್ಲಿದ್ದಲು ಗಣಿ ಕಂಪನಿಯಿಂದ ಸರಕಾರವು ಅಗತ್ಯ ಪ್ರಮಾಣದಲ್ಲಿ ಸಾಗಣೆಗೆ ಮುಂದಾಗಿದ್ದು ಹಾಗೆಯೇ ಸಿಂಗರೇಣಿ ಮತ್ತು ವೆಸ್ಟರ್ನ್‌ ಕೋಲ್‌ ಫೀಲ್ಡ್‌ ನಿಂದಲೂ ಕಲ್ಲಿದ್ದಲು ಸಾಗಣೆ ಸುಧಾರಣೆ ಕಂಡಿರುವುದು ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರ ಮತ್ತು ಯರಮರಸ್‌ ನ ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳಿಗೆ ಶಕ್ತಿ ತುಂಬಿದೆ. ದಿನವೂ ಮತ್ತು ವೈಟಿಪಿಎಸ್‌ ಗೆ ನಿಯಮಿತವಾಗಿ ಕಲ್ಲಿದ್ದಲು ರೈಲುಗಳ ಮೂಲಕ ಸಾಗಣೆಯಾಗುತ್ತಿದ್ದು, ಕೆಪಿಸಿ ಅಧಿಕಾರಿಗಳಿಗೂ ತುಸು ನೆಮ್ಮದಿ ತಂದುಕೊಟ್ಟಿದೆ. ಬೇಡಿಕೆ ಏರಿಕೆ: ರಾಜ್ಯದಲ್ಲಿ ಮಳೆಯ ಅಬ್ಬರ ತಗ್ಗಿದೆ. ಸಂಭ್ರಮದ ಆಚರಣೆಗೆ ಸಜ್ಜಾಗುತ್ತಿದ್ದು, ವಿದ್ಯುತ್‌ ಬಳಕೆ ಸಹಜವಾಗಿಯೇ ವಾಣಿಜ್ಯಿಕವಾಗಿ ಏರಿಕೆ ಕಾಣಲಿರುವುದರಿಂದ ಈಗಲೇ ವಿದ್ಯುತ್‌ ಬೇಡಿಕೆಯ ಮುನ್ಸೂಚನೆ ಸಿಕ್ಕಿದೆ. ಸದ್ಯ ದಿನವೂ 9ಸಾವಿರ ದಿಂದ 9500ಮೆವ್ಯಾ ವರೆಗೆ ವಿದ್ಯುತ್‌ ಬೇಡಿಕೆ ತಲುಪಿದೆ. ದಸರಾ ಹಬ್ಬಕ್ಕೆ ಕವಿದಿದ್ದ ವಿದ್ಯುತ್‌ ಅಭಾವದ ಬಿಸಿ ದೀಪಾವಳಿಗೆ ಬಹುತೇಕ ಮರೆಯಾಗುವ ಲಕ್ಷಣಗಳಿವೆ. ಬಳ್ಳಾರಿಯಲ್ಲಿ ಕಲ್ಲಿದ್ದಲು ಕೊರತೆಯಾಗಿದ್ದರೂ ಶಕ್ತಿನಗರ ಹಾಗೂ ಯರಮರಸ್‌ ನಲ್ಲಿಅಗತ್ಯ ಕಲ್ಲಿದ್ದಲಿರುವುದು ಸಮಸ್ಯೆಗೆ ಸದ್ಯಕ್ಕೆ ಪರಿಹಾರ ದೊರಕಿಸಿದೆ.