ಬ್ಲಿಂಕೆನ್ ಭೇಟಿ ವೇಳೆ ಮಾನವ ಹಕ್ಕು ವಿಷಯ ಚರ್ಚೆ: ಅಮೆರಿಕಕ್ಕೆ ಭಾರತದ ತಿರುಗೇಟು

ಭಾರತದ ಭೇಟಿಯ ವೇಳೆ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳ ವಿಷಯಗಳನ್ನು ಪ್ರಸ್ತಾಪಿಸಲಿದ್ದಾರೆ ಎಂಬ ಅಮೆರಿಕ ಹೇಳಿಕೆಗೆ ಭಾರತ ಸರಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಬ್ಲಿಂಕೆನ್ ಭೇಟಿ ವೇಳೆ ಮಾನವ ಹಕ್ಕು ವಿಷಯ ಚರ್ಚೆ: ಅಮೆರಿಕಕ್ಕೆ ಭಾರತದ ತಿರುಗೇಟು
Linkup
ಹೊಸದಿಲ್ಲಿ: ತನ್ನ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಮಾನವ ಹಕ್ಕುಗಳನ್ನು ಎತ್ತಿಹಿಡಿಯುವುದರಲ್ಲಿನ ತನ್ನ ಸಾಧನೆ ಕುರಿತು ಹೆಮ್ಮೆಪಡುತ್ತಿದೆ. ವೈವಿಧ್ಯವನ್ನು ಗುರುತಿಸುವವರೊಂದಿಗೆ ತೊಡಗಿಸಿಕೊಳ್ಳಲು ದೇಶ ಮುಕ್ತವಾಗಿದೆ ಎಂದು ಅಮೆರಿಕಕ್ಕೆ ಭಾರತ ತಿರುಗೇಟು ನೀಡಿದೆ. ಹೊಸದಿಲ್ಲಿಗೆ ಭೇಟಿ ನೀಡುತ್ತಿರುವ ವಿದೇಶಾಂಗ ಕಾರ್ಯದರ್ಶಿ ಅವರು ಭಾರತದಲ್ಲಿನ ಮಾನವಹಕ್ಕುಗಳ ಉಲ್ಲಂಘನೆ ವಿಷಯಗಳ ಕುರಿತು ಪ್ರಸ್ತಾಪಿಸಲಿದ್ದಾರೆ ಎಂಬ ಹೇಳಿಕೆ ಬಗ್ಗೆ ಭಾರತ ಖಾರವಾಗಿ ಪ್ರತಿಕ್ರಿಯಿಸಿದೆ. ಮತ್ತು ಸಾರ್ವತ್ರಿಕ ಮತ್ತು ನಿರ್ದಿಷ್ಟ ದೇಶ ಅಥವಾ ಸಾಂಸ್ಕೃತಿಕ ದೃಷ್ಟಿಕೋನದಾಚೆಗೂ ವ್ಯಾಪಿಸಿದೆ ಎಂದು ಸರಕಾರದ ಅಧಿಕೃತ ಮೂಲಗಳು ಹೇಳಿವೆ. ಆಂಟೋನಿ ಬ್ಲಿಂಕೆನ್ ಅವರು ಜುಲೈ 27ರಂದು ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಲಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ದೂರವಾಣಿ ಮಾತುಕತೆ ನಡೆಸಲಿದ್ದಾರೆ. ಭಾರತ ಪ್ರವಾಸದ ಸಂದರ್ಭದಲ್ಲಿ ಆಂಟೋನಿ ಬ್ಲಿಂಕೆನ್ ಅವರು ಅಧಿಕಾರಿಗಳ ಜತೆ ಮಾನವ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ವಿಚಾರಗಳನ್ನು ಪ್ರಸ್ತಾಪಿಸಲಿದ್ದಾರೆ ಎಂದು ದಕ್ಷಿಣ ಮತ್ತು ಕೇಂದ್ರ ಏಷ್ಯಾ ವ್ಯವಹಾರಗಳ ಹಂಗಾಮಿ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಡೀನ್ ಥಾಂಪ್ಸನ್ ಹೇಳಿದ್ದರು. 'ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದಂತಹ ವಿಷಯಗಳು ಸಾರ್ವತ್ರಿಕ ಹಾಗೂ ನಿರ್ದಿಷ್ಟ ದೇಶ ಅಥವಾ ಸಂಸ್ಕೃತಿಯಾಚೆ ವಿಸ್ತರಿಸಿದೆ. ಭಾರತವು ಎರಡೂ ಕ್ಷೇತ್ರಗಳಲ್ಲಿನ ತನ್ನ ಸಾಧನೆ ಬಗ್ಗೆ ಹೆಮ್ಮೆ ಹೊಂದಿದೆ ಹಾಗೂ ಅನುಭವಗಳನ್ನು ಹಂಚಿಕೊಳ್ಳಲು ಸದಾ ಹರ್ಷಿಸುತ್ತದೆ' ಎಂದು ಸರಕಾರದ ಮೂಲಗಳು ಹೇಳಿವೆ.