ಮಲ ತಾಯಿಗಿಂತ ಹೆತ್ತ ತಾಯಿ ಬಳಿಯೇ ಮಗು ಬೆಳೆಯುವುದು ನ್ಯಾಯ; ಹೈಕೋರ್ಟ್

‘ಮಕ್ಕಳ ಸುಪರ್ದಿ ವಿಚಾರ ಧರ್ಮ ಮತ್ತು ನಂಬಿಕೆ ಮೀರಿದ್ದು, ಪ್ರಕರಣದಲ್ಲಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಪತ್ನಿ ಸ್ವತಂತ್ರ ಜೀವನ ನಡೆಸುತ್ತಿದ್ದಾಳೆ. ಪತಿ ಎರಡನೇ ಮದುವೆಯಾಗಿದ್ದು, ಒಂದು ಹೆಣ್ಣು ಮಗು ಜನಿಸಿದೆ. ಹಾಗಾಗಿ ಮೊದಲ ಪತ್ನಿಯ ಮಗು, ತಾಯಿಯ ಪಾಲನೆಯಲ್ಲಿರುವುದೇ ಹೆಚ್ಚು ಸುರಕ್ಷಿತ. ಅದು ಆಕೆಯ ಹಕ್ಕು’ ಎಂದು ನ್ಯಾಯಪೀಠ ತಿಳಿಸಿದೆ.

ಮಲ ತಾಯಿಗಿಂತ ಹೆತ್ತ ತಾಯಿ ಬಳಿಯೇ ಮಗು ಬೆಳೆಯುವುದು ನ್ಯಾಯ; ಹೈಕೋರ್ಟ್
Linkup
: ಮುಸ್ಲಿಂ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ ಮಗು ಮಲ ತಾಯಿಗಿಂತ ಬಳಿಯೇ ಬೆಳೆಯುವುದು ಸೂಕ್ತ. ಮಲ ತಾಯಿಯ ಮಡಿಲಿಗೆ ಮಗು ಹಾಕುವುದು ನ್ಯಾಯ ಸಮ್ಮತವಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಹೀಗಾಗಿ ಮೊದಲ ಪತಿಯಿಂದ ಮಗುವಿನ ಸುಪರ್ದಿಗೆ ಕೋರಿದ್ದ ತಂದೆಗೆ 50 ಸಾವಿರ ರೂ. ದಂಡ ವಿಧಿಸಿದೆ. ಬೆಂಗಳೂರಿನ ಜಿ.ಕೆ. ಮೊಹಮ್ಮದ್‌ ಮುಷ್ತಾಕ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ, ‘ನ್ಯಾಯಾಲಯ ವಿಧಿಸಿರುವ ದಂಡ ಮೊತ್ತವನ್ನು ಒಂದು ತಿಂಗಳ ಒಳಗೆ ಪತ್ನಿಗೆ ನೀಡಬೇಕು. ತಪ್ಪಿದರೆ ಮಗನ ಭೇಟಿಗೆ ಕಲ್ಪಿಸಲಾಗಿರುವ ಅವಕಾಶ ರದ್ದು ಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಸಿದೆ. ಪತಿ-ಪತ್ನಿ ಪರಸ್ಪರ ದಾಖಲಿಸಿರುವ ಎಂಟು ಪ್ರಕರಣಗಳನ್ನು ಒಂಬತ್ತು ತಿಂಗಳೊಳಗೆ ಇತ್ಯರ್ಥಪಡಿಸಬೇಕು. ಆ ಕುರಿತ ವರದಿಯನ್ನು ರಿಜಿಸ್ಟ್ರಾರ್‌ ಜನರಲ್‌ಗೆ ತಲುಪಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ. ‘ಮಕ್ಕಳ ಸುಪರ್ದಿ ವಿಚಾರ ಧರ್ಮ ಮತ್ತು ನಂಬಿಕೆ ಮೀರಿದ್ದು, ಪ್ರಕರಣದಲ್ಲಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಪತ್ನಿ ಸ್ವತಂತ್ರ ಜೀವನ ನಡೆಸುತ್ತಿದ್ದಾಳೆ. ಪತಿ ಎರಡನೇ ಮದುವೆಯಾಗಿದ್ದು, ಒಂದು ಹೆಣ್ಣು ಮಗು ಜನಿಸಿದೆ. ಹಾಗಾಗಿ ಮೊದಲ ಪತ್ನಿಯ ಮಗು, ತಾಯಿಯ ಪಾಲನೆಯಲ್ಲಿರುವುದೇ ಹೆಚ್ಚು ಸುರಕ್ಷಿತ. ಅದು ಆಕೆಯ ಹಕ್ಕು’ ಎಂದು ನ್ಯಾಯಪೀಠ ತಿಳಿಸಿದೆ. ಬೆಂಗಳೂರಿನ ಸಾಫ್ಟ್‌ವೇರ್‌ ಉದ್ಯೋಗಿ ಮುಷ್ತಾಕ್‌, ದಾವಣಗೆರೆಯ ಅಯೇಷಾ ಬಾನು ಜೊತೆ 2009ರ ಏ.30ರಂದು ವಿವಾಹವಾಗಿದ್ದರು. ದಂಪತಿಗೆ 2012ರ ಆ.1ರಂದು ಗಂಡು ಮಗು ಜನಿಸಿತ್ತು. ನಂತರ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಜೀವನಾಂಶ, ಮಾನನಷ್ಟ ಮೊಕದ್ದಮೆ, ವರದಕ್ಷಿಣೆ ಕಿರುಕುಳ ಸೇರಿ ಪತಿ- ಪತ್ನಿ ನಡುವೆ ಎಂಟು ಪ್ರಕರಣಗಳಿವೆ.