ನನಗೆ ಬಿಟ್ಟೂ ಗೊತ್ತಿಲ್ಲ, ಕಾಯಿನ್ನೂ ಗೊತ್ತಿಲ್ಲ, ಬೀಟ್ ಪೊಲೀಸ್ ಮಾತ್ರ ಗೊತ್ತಿರೋದು!: ವಿ. ಸೋಮಣ್ಣ

ತಮಗೆ ಬಿಟ್‌ಕಾಯಿನ್ ಬಗ್ಗೆ ಏನೂ ತಿಳಿದಿಲ್ಲ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ. 'ನನಗೆ ಬಿಟ್ಟೂ ಗೊತ್ತಿಲ್ಲ, ಕಾಯಿನ್ನೂ ಗೊತ್ತಿಲ್ಲ. ನನಗೆ ತಿಳಿದಿರುವುದು ಬೀಟ್ ಪೊಲೀಸ್ ಮಾತ್ರ ಎಂದಿರುವ ಅವರು, ಸರ್ಕಾರದ ವಿರುದ್ಧ ಆರೋಪ ಮಾಡಿರುವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.

ನನಗೆ ಬಿಟ್ಟೂ ಗೊತ್ತಿಲ್ಲ, ಕಾಯಿನ್ನೂ ಗೊತ್ತಿಲ್ಲ, ಬೀಟ್ ಪೊಲೀಸ್ ಮಾತ್ರ ಗೊತ್ತಿರೋದು!: ವಿ. ಸೋಮಣ್ಣ
Linkup
ಬೆಂಗಳೂರು: 'ನನಗೆ ಬಿಟ್ಟೂ ಗೊತ್ತಿಲ್ಲ, ಕಾಯಿನ್ನೂ ಗೊತ್ತಿಲ್ಲ, ಬೀಟ್ ಪೊಲೀಸ್ ಮಾತ್ರ ಗೊತ್ತಿರೋದು' ಎಂದು ಸಚಿವ ಹೇಳಿದರು. ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು ಕಾಂಗ್ರೆಸ್ ಶಾಸಕ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದರು. ಪ್ರಿಯಾಂಕ್ ಖರ್ಗೆಯವರು ಸ್ವಲ್ಪ ಗಾಂಭೀರ್ಯತೆ ಅರ್ಥಮಾಡಿಕೊಳ್ಳಬೇಕು. ಪ್ರಿಯಾಂಕ್ ಖರ್ಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ. ಮಾಹಿತಿ ಇಲ್ಲದೇ ಮಾತನಾಡೋದು ಎಷ್ಟು ಸರಿ ಅಂತ ಅವರು ಅರ್ಥ ಮಾಡ್ಕೋಬೇಕು ಎಂದು ತಿರುಗೇಟು ನೀಡಿದರು. ಬಿಟ್ ಕಾಯಿನ್ ವಿಚಾರವಾಗಿ ನಮ್ಮ ಮುಖ್ಯಮಂತ್ರಿ ಉತ್ತರ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಈಗಾಗಲೇ ಮುಖ್ಯಮಂತ್ರಿಗಳು ಈ ವಿಚಾರವಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಜನಸಾಮಾನ್ಯರ ಜತೆ ಬೆರೆಯುವ ಮುಖ್ಯಮಂತ್ರಿ ಇದ್ದಾರೆ ಎಂದರು. ಇದು ಅಪಪ್ರಚಾರ ಮಾಡುವ ಕೆಲಸವಾಗುತ್ತಿದೆ. ನನ್ನ ಅನುಭವದಿಂದ ಹೇಳುತ್ತೇನೆ, ಯಾರೂ ನಿರೀಕ್ಷೆ ಮಾಡದಿರೋ ಅಪವಾದ ಇದು. ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಸರ್ಕಾರ ನಿಂತ ನೀರಲ್ಲ, ಹರಿಯುವ ನೀರಾಗಿದೆ. ಸಿಎಂ ನನಗೆ ಸಿಕ್ಕಿ 3 ದಿನ ಆಗಿದೆ. ಬಿಟ್ ಕಾಯಿನ್ ಬಗ್ಗೆ ಸಿಎಂ ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದರು. ಪ್ರಿಯಾಂಕ ಖರ್ಗೆ ಅವರಲ್ಲಿ ನಾನು ಮನವಿ ಮಾಡ್ತೀನಿ, ಅವರ ಬಳಿ ಇರೋ ಮಾಹಿತಿ ಬಿಡುಗಡೆ ಮಾಡಲಿ. ಹಾದಿ, ಬೀದಿಯಲ್ಲಿ ಹೋಗುವವರ ಮಾತಿಗೆ ಉತ್ತರ ಕೊಡಲು ಸಾಧ್ಯವಿಲ್ಲ. ಸರ್ಕಾರವನ್ನು ಕವಲು ದಾರಿಯಲ್ಲಿ ತೆಗೆದುಕೊಂಡು ಹೋಗಲು ಈ ರೀತಿ ಮಾಡುತ್ತಿದ್ದಾರೆ ಎಂದ ಸೋಮಣ್ಣ ಆರೋಪ ಮಾಡಿದರು. ಪ್ರಿಯಾಂಕ್ ಖರ್ಗೆ ಹೇಳಿದ್ದೇನು? ಹಗರಣವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬಲಿ ಪಡೆಯಲಿದೆ. ಈ ಬಾರಿಯೂ ಬಿಜೆಪಿ ಸರ್ಕಾರದಲ್ಲಿ ಮೂರನೇ ಮುಖ್ಯಮಂತ್ರಿ ಬರಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಬಿಟ್‌ಕಾಯಿನ್ ಹಗರಣ ಕೋಟ್ಯಂತರ ರೂಪಾಯಿ ಹಗರಣವಾಗಿದೆ. ಇದರಲ್ಲಿ ಬಿಜೆಪಿ ನಾಯಕರು, ಅವರ ಮಕ್ಕಳು, ಆಪ್ತರು ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ. ಡ್ರಗ್ಸ್ ಕಿಕ್ ಬ್ಯಾಕ್, ವರ್ಗಾವಣೆ ಕಿಕ್‌ಬ್ಯಾಕ್ ಬಿಟ್‌ಕಾಯಿನ್ ಮೂಲಕವೇ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ಈ ಹಗರಣ ಬೆಳಕಿಗೆ ಬಂದಿತ್ತು. ಅಮೆರಿಕದವರು ಇಂತಹದೊಂದು ಚಟುವಟಿಕೆ ನಡೆಯುತ್ತಿದೆ ಎಂದು ಪ್ರಧಾನಿ ಕಚೇರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದರು. ಈ ಹಗರಣದ ಪಾರದರ್ಶಕವಾದ ತನಿಖೆ ನಡೆದರೆ ಕೇವಲ ಹತ್ತು ದಿನಗಳಲ್ಲೇ ಸಂಪೂರ್ಣ ಮಾಹಿತಿ ಹೊರಬರಲಿದೆ. ಈಗಾಗಲೇ ಬಂಧಿತ ಆರೋಪಿಯನ್ನು ಸರಿಯಾದ ತನಿಖೆಗೊಳಪಡಿಸಿದರೆ ಎಲ್ಲವೂ ಬಾಯಿ ಬಿಡಲಿದ್ದಾನೆ. ಆದರೆ, ಸರ್ಕಾರ ತನಿಖೆ ವಿಚಾರದಲ್ಲಿ ದಾರಿ ತಪ್ಪಿಸುವ ಕೆಲಸ ಮಾಡಲು ಯತ್ನಿಸುತ್ತಿದೆ. ಜಾರಿ ನಿರ್ದೇಶನಾಲಯಕ್ಕೆ ತನಿಖೆ ಒಪ್ಪಿಸಿದ್ದರೆ, ಅದರ ದಾಖಲೆಯನ್ನು ಸರ್ಕಾರ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದರು.