ಮುಂಬೈನಲ್ಲಿ ನವಜಾತ ಶಿಶುವಿಗೆ ಚಿತ್ರ ಹಿಂಸೆ: ಬಂಟ್ವಾಳ ಮೂಲದ ಮಹಿಳೆಯ ಕೃತ್ಯ..!

​​ತಪಾಸಣೆ ಮಾಡಿದ ವೈದ್ಯರು ಮಗುವಿನ ದೇಹ, ಕೈಕಾಲುಗಳಲ್ಲಿ ಹೆಪ್ಪುಗಟ್ಟಿದ ರಕ್ತದ ಕಲೆಗಳು ಮತ್ತು ಊತುಕೊಂಡಿದ್ದ ಕೈಕಾಲು ಗಮನಿಸಿ ದಾದಿಯ ಮೇಲೆ ಕಣ್ಣಿಡುವಂತೆ ಸಲಹೆ ನೀಡಿದ್ದು, ಮನೆಯವರು ಅಂದೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರು.

ಮುಂಬೈನಲ್ಲಿ ನವಜಾತ ಶಿಶುವಿಗೆ ಚಿತ್ರ ಹಿಂಸೆ: ಬಂಟ್ವಾಳ ಮೂಲದ ಮಹಿಳೆಯ ಕೃತ್ಯ..!
Linkup
: ಉಪನಗರ ನವಿ ಮುಂಬಯಿ ವಾಶಿಯಲ್ಲಿ ವಾಸವಿರುವ ಮಂಗಳೂರು ಮೂಲದ ಸೆರಾವೋ ಕುಟುಂಬದ ದಂಪತಿಯ ನವಜಾತ ಶಿಶು-ಬಾಣಂತಿ ಆರೈಕೆಗಾಗಿ ದಾದಿಯಾಗಿ ಬಂದಿದ್ದ ಐರಿನ್‌ ವಾಸ್‌ರನ್ನು ಹಸುಳೆಗೆ ಚಿತ್ರಹಿಂಸೆ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ. ಘಟನೆ ವಿವರ: ಸೆರಾವೋ ದಂಪತಿ ಐರಿನ್‌ ವಾಸ್‌ರನ್ನು ದಾದಿಯ ಸೇವೆಗೆ ನೇಮಕ ಮಾಡಿದ್ದರು. ಆರಂಭದಲ್ಲಿ ಎಲ್ಲವೂ ಸುಗಮವಾಗಿ ನಡೆಯಿತು. ವಾರದ ಬಳಿಕ ಶಿಶು ನಿರಂತರ ಅಳಲಾರಂಭಿಸಿದ್ದು, ಅದರ ರೋದನ ಕಂಡು ಪಾಲಕರು ವೈದ್ಯರಲ್ಲಿಗೆ ಕರೆತಂದರು. ತಪಾಸಣೆ ಮಾಡಿದ ವೈದ್ಯರು ಮಗುವಿನ ದೇಹ, ಕೈಕಾಲುಗಳಲ್ಲಿ ಹೆಪ್ಪುಗಟ್ಟಿದ ರಕ್ತದ ಕಲೆಗಳು ಮತ್ತು ಊತುಕೊಂಡಿದ್ದ ಕೈಕಾಲು ಗಮನಿಸಿ ದಾದಿಯ ಮೇಲೆ ಕಣ್ಣಿಡುವಂತೆ ಸಲಹೆ ನೀಡಿದ್ದು, ಮನೆಯವರು ಅಂದೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರು. ಅಷ್ಟರಲ್ಲೇ ಬಯಲಾಯಿತು ದಾದಿಯ ಕರ್ಮಕಾಂಡ..! ಶಿಶುವಿಗೆ ಚಿತ್ರಹಿಂಸೆ ನೀಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದನ್ನು ಕಂಡ ಮನೆ ಮಂದಿ ಬೆಚ್ಚಿ ಬಿದ್ದರು. ಹಸುಗೂಸುವಿನ ಸೇವೆ ಮಾಡಬೇಕಿದ್ದ ಕೆಲಸದಾಕೆಯ ಅಮಾನುಷ ಕೃತ್ಯಗಳೆಲ್ಲವನ್ನೂ ಸಿಸಿಟಿವಿ ಕ್ಯಾಮೆರಾ ಮೂಲಕ ಸೆರೆಹಿಡಿದು ಆಕೆಯನ್ನು ರೆಡ್‌ಹ್ಯಾಂಡ್‌ ಆಗಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೋಲಿಸ್‌ ಕಸ್ಟಡಿಯಲ್ಲಿದ್ದ ಐರಿನ್‌ ವಾಸ್‌ ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ. ಈಕೆ ಬಂಟ್ವಾಳ ಅಮ್ಟಾಡಿ ಗ್ರಾಮದ ಬಾಂಬಿಲಪದವು ಮ್ಯಾಕ್ಸಿಮ್‌ ವಿನ್ಸೆಂಟ್‌ ಲಾಸ್ರದೋ ಎಂಬುವರ ಪತ್ನಿ.