‘ಮನೆ ಬಾಡಿಗೆ ಬೇಡ, ಗಂಡನಿಲ್ಲದ ವೇಳೆ ಕಿಸ್ ಕೊಡು’ ಎಂದು ಪೀಡಿಸಿದ ಮನೆ ಮಾಲೀಕನ ಬಂಧನ
‘ಮನೆ ಬಾಡಿಗೆ ಬೇಡ, ಗಂಡನಿಲ್ಲದ ವೇಳೆ ಕಿಸ್ ಕೊಡು’ ಎಂದು ಪೀಡಿಸಿದ ಮನೆ ಮಾಲೀಕನ ಬಂಧನ
ವಿವಾಹಿತ ಮಹಿಳೆಯ ಗಂಡ ಆಟೋ ಚಾಲಕನಾಗಿದ್ದು, ಬೆಳಗ್ಗೆ ಮನೆಯಿಂದ ಹೊರಗೆ ದುಡಿಯಲು ಹೋದರೆ ಸಂಜೆ ವೇಳೆಗೆ ಮನೆಗೆ ಬರುತ್ತಿದ್ದ. ಇದನ್ನೇ ಬಂಡವಾಳವಾಗಿಸಿಕೊಂಡ ಮನೆ ಮಾಲೀಕ ಜಯಕುಮಾರ್, ಮಹಿಳೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಮಾಲೀಕ ಜಯಕುಮಾರ್‌ನ ಕಿರುಕುಳದಿಂದ ನೊಂದ ಮಹಿಳೆಯು ತನ್ನ ಗಂಡನಿಗೆ ವಿಷಯ ಮುಟ್ಟಿಸಿದ್ದಾಳೆ.
ಚೆನ್ನೈ: ದಂಪತಿಗೆ ಮನೆ ಬಾಡಿಗೆ ನೀಡಿದ ಮಾಲೀಕನೊಬ್ಬ ಬಾಡಿಗೆ ಮನೆಯ ಮಹಿಳೆಗೆ ಕಿಸ್ ನೀಡುವಂತೆ ಕಿರುಕುಳ ನೀಡಿದ ಪರಿಣಾಮ ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.
ಚೆನ್ನೈನ ಕೊಡುಂಗೈಯ್ಯೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಾಡಿಗೆ ಮನೆ ಮಹಿಳೆಗೆ ಕಿರುಕುಳ ನೀಡಿದ 50 ವರ್ಷದ ಮನೆ ಮಾಲೀಕ ಜಯಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಮಹಿಳೆಗೆ ದಿನನಿತ್ಯ ನೀಡಿದ್ದು, ಅಲ್ಲದೇ ನೀನು ಮನೆ ಬಾಡಿಗೆ ಕೊಡೋದು ಬೇಡ, ನಿನ್ನ ಗಂಡ ಇಲ್ಲದಾಗ ಮನೆಗೆ ಬಂದು ಕಿಸ್ ಕೊಡು ಎಂದು ಒತ್ತಾಯಿಸಿದ್ಧಾನೆ.
ವಿವಾಹಿತ ಮಹಿಳೆಯ ಗಂಡ ಆಟೋ ಚಾಲಕನಾಗಿದ್ದು, ಬೆಳಗ್ಗೆ ಮನೆಯಿಂದ ಹೊರಗೆ ದುಡಿಯಲು ಹೋದರೆ ಸಂಜೆ ವೇಳೆಗೆ ಮನೆಗೆ ಬರುತ್ತಿದ್ದ. ಇದನ್ನೇ ಬಂಡವಾಳವಾಗಿಸಿಕೊಂಡ ಮನೆ ಮಾಲೀಕ ಜಯಕುಮಾರ್, ಮಹಿಳೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಮಾಲೀಕ ಜಯಕುಮಾರ್‌ನ ಕಿರುಕುಳದಿಂದ ನೊಂದ ಮಹಿಳೆಯು ತನ್ನ ಗಂಡನಿಗೆ ವಿಷಯ ಮುಟ್ಟಿಸಿದ್ದಾಳೆ. ಈ ವೇಳೆ ಆಕೆಯ ಗಂಡ ಜಯಕುಮಾರ್‌ನ ವಾರ್ನ್ ನೀಡಿದ್ಧಾನೆ.
ಬುಧವಾರ ಏಕಾಏಕಿ ಮಹಿಳೆಯ ಬಾಡಿಗೆ ಮನೆಗೆ ನುಗ್ಗಿದ ಕಾಮುಕ ಜಯಕುಮಾರ್, ಮನೆ ಬಾಡಿಗೆ ನೀಡೋದು ಬೇಡ, ನನಗೆ ಕಿಸ್ ಕೊಡು ಎಂದು ಆಕೆಯನ್ನು ಬಲವಂತವಾಗಿ ಹಿಡಿದು ಪೀಡಿಸಿದ್ದಾನೆ. ಇದರಿಂದ ಆತಂಕಗೊಂಡ ಮಹಿಳೆ ಜೋರಾಗಿ ಆತನನ್ನು ತಳ್ಳಿ ಸೇಫ್ ಆಗಿದ್ದಾಳೆ. ಬಳಿಕ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮಹಿಳೆ ನೀಡಿದ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.