ಯುಪಿ ಸಿಎಂ ಯೋಗಿಯನ್ನು ಟೀಕಿಸಿದ ಮಾಜಿ ರಾಜ್ಯಪಾಲ ಖುರೇಶಿ ವಿರುದ್ಧ ದೇಶದ್ರೋಹದ ಕೇಸ್‌

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ಬಗ್ಗೆ ರಕ್ತ ಹೀರುವ ರಾಕ್ಷಸ ಎಂದು ಹೇಳಿದ್ದ ಮಾಜಿ ರಾಜ್ಯಪಾಲ ಅಜೀಜ್‌ ಖುರೇಶಿ ವಿರುದ್ಧ ಉತ್ತರ ಪ್ರದೇಶದ ರಾಂಪುರ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.

ಯುಪಿ ಸಿಎಂ ಯೋಗಿಯನ್ನು ಟೀಕಿಸಿದ ಮಾಜಿ ರಾಜ್ಯಪಾಲ ಖುರೇಶಿ ವಿರುದ್ಧ ದೇಶದ್ರೋಹದ ಕೇಸ್‌
Linkup
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಾಗಿದೆ. ಬಿಜೆಪಿ ನಾಯಕ ಆಕಾಶ್‌ ಕುಮಾರ್‌ ಸಕ್ಸೇನಾ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ರಾಂಪುರ ಜಿಲ್ಲೆಯ ಸಿವಿಲ್‌ ಲೈನ್ಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ ಎಂದು ಪೊಲೀಸರಿ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು, 'ರಕ್ತ ಹೀರುವ ರಾಕ್ಷಸ' ಎಂದು ಖುರೇಶಿ ಟೀಕೆ ಮಾಡಿದ್ದರು. ಹೀಗಾಗಿ ಮಾಜಿ ರಾಜ್ಯಪಾಲರ ವಿರುದ್ಧ ಬಿಜೆಪಿ ಪ್ರಕರಣ ದಾಖಲಿಸಿದೆ. ಖುರೇಶಿ ಅವರು ನೀಡಿದ ಹೇಳಿಕೆಯಿಂದಾಗಿ ಸಮಾಜ ಎರಡು ಗುಂಪುಗಳ ನಡುವೆ ಉದ್ವೇಗ ಉಂಟು ಮಾಡುವ ಸಾಧ್ಯತೆ ಇದ್ದು, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸಾಧ್ಯತೆ ಇದೆ. ಹೀಗಾಗಿ ನಾವು ಅವರ ಮೇಲೆ ಮೊಕದ್ದಮೆ ದಾಖಲಿಸಿದ್ದೇವೆ ಎಂದು ಸಕ್ಸೇನಾ ಹೇಳಿದ್ದಾರೆ. ಅಲ್ಲದೇ ಖುರೇಶಿ ಅವರು ನೀಡಿರುವ ಹೇಳಿಕೆಯನ್ನು ಹಲವು ಮಾಧ್ಯಮಗಳು ಕೂಡ ಪ್ರಸಾರ ಮಾಡಿದ್ದು, ಅವುಗಳ ಮುದ್ರಿಕೆ ಇರುವ ಪೆನ್‌ಡ್ರೈವ್‌ ಅನ್ನೂ ಕೂಡ ಸಕ್ಸೇನಾ ಪೊಲೀಸರಿಗೆ ನೀಡಿದ್ದಾರೆ. ಖುರೇಶಿ ವಿರುದ್ಧ ಐಪಿಸಿ ಕಾಯ್ದೆಯಯ 153A (ಎರಡು ಪಂಗಡಗಳ ನಡುವೆ ಧರ್ಮ, ಜಾತಿಯ ಆಧಾರದಲ್ಲಿ ದ್ವೇಷ ಉಂಟು ಸೃಷ್ಠಿಸುವುದು), 153B (ರಾಷ್ಟ್ರೀಯ ಏಕೀಕರಣಕ್ಕೆ ಧಕ್ಕೆಯಾಗುವಂತೆ ಪೂರ್ವಗ್ರಹ ಪೀಡಿತವಾಗಿ ಹೇಳಿಕೆ ನೀಡುವುದು), 124A () ಹಾಗೂ 505(1)(B) (ಸಾರ್ವಜನಿಕರಿಗೆ ಭಯ ಹುಟ್ಟಿಸುವುದು) ಮುಂತಾದ ಕಲಂಗಳಡಿ ಪ್ರಕರಣ ದಾಖಲಾಗಿದೆ. ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 81 ವರ್ಷದ ಖುರೇಶಿ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದು, ಮಿಜೋರಾಂ ಹಾಗೂ ಉತ್ತರಾಖಂಡ್‌ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಈ ಮಧ್ಯೆ ಉತ್ತರ ಪ್ರದೇಶದ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು.