ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ನಾಮಪತ್ರ ಸಲ್ಲಿಸಿದ ಬಿಜೆಪಿಯ ಪ್ರಿಯಾಂಕಾ ಟಿಬ್ರೂವಾಲ್‌

ಪಶ್ಚಿಮ ಬಂಗಾಳ ಭವಾನಿಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಅಖಾಡಕ್ಕೆ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೂವಾಲ್‌ ಅವರ ಅಧಿಕೃತ ಪ್ರವೇಶವಾಗಿದೆ. ಸೋಮವಾರ ಬೆಳಗ್ಗೆ ಅವರು ನಾಮಪತ್ರ ಸಲ್ಲಿಸಿದರು. ಸೆಪ್ಟೆಂಬರ್‌ 30ರಂದು ಚುನಾವಣೆ ನಡೆಯಲಿದ್ದು, ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಾಲಿಗೆ ಅಗ್ನಿಪರೀಕ್ಷೆ ಎಂದೇ ವ್ಯಾಖ್ಯಾನಿಸಲಾಗಿದೆ.

ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ನಾಮಪತ್ರ ಸಲ್ಲಿಸಿದ ಬಿಜೆಪಿಯ ಪ್ರಿಯಾಂಕಾ ಟಿಬ್ರೂವಾಲ್‌
Linkup
ಕೋಲ್ಕೊತಾ: ಭಾರಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಭವಾನಿಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಅಖಾಡಕ್ಕೆ ಅಭ್ಯರ್ಥಿ ಅವರ ಅಧಿಕೃತ ಪ್ರವೇಶವಾಗಿದೆ. ಸೋಮವಾರ ಬೆಳಗ್ಗೆ ಅವರು ನಾಮಪತ್ರ ಸಲ್ಲಿಸಿದರು. ಸೆಪ್ಟೆಂಬರ್‌ 30ರಂದು ಚುನಾವಣೆ ನಡೆಯಲಿದ್ದು, ಇದು ಮುಖ್ಯಮಂತ್ರಿ ಅವರ ಪಾಲಿಗೆ ಅಗ್ನಿಪರೀಕ್ಷೆ ಎಂದೇ ವ್ಯಾಖ್ಯಾನಿಸಲಾಗಿದೆ. ಬಿಜೆಪಿಯಿಂದ ಪ್ರಿಯಾಂಕಾ, ಸಿಪಿಐ(ಎಂ)ನ ಶ್ರೀಜೀಬ್‌ ಬಿಸ್ವಾಸ್‌ ಹಾಗೂ ಅನೇಕ ಸ್ವತಂತ್ರ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಸ್ಥಾನ ಉಳಿಸಿಕೊಳ್ಳುವುದಕ್ಕಾಗಿಯೇ ತೆರವು ಮಾಡಲಾಗಿರುವ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ. ಪ್ರಿಯಾಂಕಾ ಸೇರಿದಂತೆ ಎಲ್ಲಾ ಅಭ್ಯರ್ಥಿಗಳಿಂದ ಪ್ರಚಾರ ಭರಾಟೆ ಶುರುವಾಗಿದೆ. ಆದರೆ, ಮುಖ್ಯ ಅಭ್ಯರ್ಥಿ ಆಡಳಿತಾರೂಢ ಟಿಎಂಸಿಯ ಮಮತಾ ಬ್ಯಾನರ್ಜಿ ಇನ್ನೂ ಪ್ರಚಾರ ಕಣಕ್ಕೆ ಧುಮುಕಿಲ್ಲ ಹಾಗೂ ನಾಮಪತ್ರವನ್ನೂ ಸಲ್ಲಿಸಿಲ್ಲ. ಪ್ರಚಾರ ನಡೆಸದಿದ್ದರೂ ತಾನು ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸ ಮಮತಾ ಅವರಲ್ಲಿದೆ. ನಾಮಪತ್ರ ಸಲ್ಲಿಸಿದ ಬಳಿಕ ಬೆರಳೆಣಿಕೆಯ ಬಹಿರಂಗ ಸಮಾವೇಶಗಳನ್ನು ಉದ್ದೇಶಿಸಿ ಅವರು ಮಾತನಾಡುವ ಸಾಧ್ಯತೆ ಇದೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಪರ ಪ್ರಚಾರ ರಾರ‍ಯಲಿ ನಡೆಸಿದ ಸುವೇಂದು ಅಧಿಕಾರಿ, ''ಎಲ್ಲಾ ಪೈಪೋಟಿಗಳೂ ಕಠಿಣವಾಗಿರುತ್ತವೆ. ನಂದಿಗ್ರಾಮದಲ್ಲಿ ಮಾಡಿದ್ದನ್ನೇ ಇಲ್ಲಿ ಮಾಡಿ ಎಂದು ಭವಾನಿಪುರದ ಜನತೆಗೆ ನಾನು ಮನವಿ ಮಾಡುತ್ತೇನೆ. ಹಾಗೆ ಮಾಡಿದರೆ ನೀವು ಇತಿಹಾಸ ಸೃಷ್ಟಿಸುತ್ತೀರಿ. ಪ್ರಿಯಾಂಕಾ ಬಂಗಾಳದ ಪುತ್ರಿ,'' ಎಂದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಸೋಲಿನ ರುಚಿ ಉಣ್ಣಿಸಿರುವ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ, ಈಗ ತಾರಾ ಪ್ರಚಾರಕರಾಗಿದ್ದಾರೆ. ಗ್ಯಾನಿ ಜೈಲ್‌ಸಿಂಗ್‌ ಮೊಮ್ಮಗ ಇಂದ್ರಜಿತ್‌ ಬಿಜೆಪಿ ಸೇರ್ಪಡೆ ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್‌ಸಿಂಗ್‌ ಅವರ ಮೊಮ್ಮಗ ಇಂದ್ರಜಿತ್‌ ಸಿಂಗ್‌ ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹೊಸದಿಲ್ಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಇಂದ್ರಜಿತ್‌ರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ''ತಮ್ಮನ್ನು ಕಾಂಗ್ರೆಸ್‌ ಕೆಟ್ಟದಾಗಿ ನಡೆಸಿಕೊಂಡಿರುವ ಕುರಿತು ತಾತ ಗ್ಯಾನಿ ಜೈಲ್‌ಸಿಂಗ್‌ ಅವರಿಗೆ ಬೇಸರವಿತ್ತು. ಹೀಗಾಗಿ ನಾನು ಬಿಜೆಪಿ ಸೇರಬೇಕೆಂಬುದು ಅವರ ಬಯಕೆಯಾಗಿತ್ತು. ಅವರೇ ಖುದ್ದಾಗಿ ನನ್ನನ್ನು ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಲ್‌.ಕೆ.ಆಡ್ವಾಣಿ ಅವರಿಗೆ ಪರಿಚಯಿಸಿದ್ದರು. ಮದನ್‌ಲಾಲ್‌ ಖುರಾನಾ ಕಾಲದಿಂದಲೂ ದಿಲ್ಲಿಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದೆ,'' ಎಂದು ಇಂದ್ರಜಿತ್‌ ಸಿಂಗ್‌ ಹೇಳಿದರು. ಇಂದ್ರಜಿತ್‌ ಅವರು ಸಿಖ್‌ ಸಮುದಾಯದ, ಒಬಿಸಿ ವ್ಯಾಪ್ತಿಯಲ್ಲಿರುವ ರಾಮ್‌ಗರ್ಹಿಯಾ ಪಂಗಡಕ್ಕೆ ಸೇರಿದವರಾಗಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್‌ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂದ್ರಜಿತ್‌ ಸೇರ್ಪಡೆಯಿಂದ ಬಿಜೆಪಿಗೆ ಇತರೆ ಹಿಂದುಳಿದ ವರ್ಗಗಳ ನಾಯಕನೊಬ್ಬ ಸಿಕ್ಕಂತಾಗಿದೆ.