ಮೊದಲ ತ್ರೈಮಾಸಿಕದಲ್ಲಿ ದಾಖಲೆಯ 6,504 ಕೋಟಿ ರೂ. ಲಾಭ ಗಳಿಸಿದ ಸ್ಟೇಟ್‌ ಬ್ಯಾಂಕ್‌

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ಏಪ್ರಿಲ್‌ -ಜೂನ್‌ ತ್ರೈಮಾಸಿಕದಲ್ಲಿ ದಾಖಲೆಯ 6,504 ಕೋಟಿ ರೂ. ಲಾಭ ಗಳಿಸಿದೆ. ಇದು ಎಸ್‌ಬಿಐ ಈವರೆಗೆ ತ್ರೈಮಾಸಿಕವೊಂದರಲ್ಲಿ ಗಳಿಸಿದ ಗರಿಷ್ಠ ಲಾಭವಾಗಿದೆ.

ಮೊದಲ ತ್ರೈಮಾಸಿಕದಲ್ಲಿ ದಾಖಲೆಯ 6,504 ಕೋಟಿ ರೂ. ಲಾಭ ಗಳಿಸಿದ ಸ್ಟೇಟ್‌ ಬ್ಯಾಂಕ್‌
Linkup
ಮುಂಬಯಿ: ದೇಶದ ಅತೀ ದೊಡ್ಡ ಬ್ಯಾಂಕ್‌ 2021-22ರ ಮೊದಲ ತ್ರೈಮಾಸಿಕದಲ್ಲಿ ದಾಖಲೆಯ 6,504 ಕೋಟಿ ರೂ. ಲಾಭ ಗಳಿಸಿದೆ. ಇದು ಬ್ಯಾಂಕ್‌ ಈವರೆಗೆ ತ್ರೈಮಾಸಿಕವೊಂದರಲ್ಲಿ ಗಳಿಸಿದ ಗರಿಷ್ಠ ಲಾಭವಾಗಿದೆ. ಜತೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಕಂಪನಿಯ ಲಾಭದಲ್ಲಿ ಶೇ. 55ರಷ್ಟು ಭಾರಿ ಏರಿಕೆ ದಾಖಲಾಗಿದೆ. ಈ ಅವಧಿಯಲ್ಲಿ ಕಂಪನಿಯ ನಿಬಂಧನೆಗಳಲ್ಲಿ ಶೇ. 19.6ರಷ್ಟು ಕುಸಿತವಾಗಿದ್ದು 10,051.96 ಕೋಟಿ ರೂ.ಗೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಇತರ ಆದಾಯ ಶೇ. 48.5ರಷ್ಟು ಏರಿಕೆ ಕಂಡಿದ್ದು 11,802.7 ಕೋಟಿ ರೂ.ಗೆ ಹೆಚ್ಚಳವಾಗಿದೆ. ಆದರೆ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಬ್ಯಾಂಕ್‌ನ ಅನುತ್ಪಾದಕ ಆಸ್ತಿಯ ಪ್ರಮಾಣ ಶೇ. 4.98ರಿಂದ ಶೇ.5.32ಕ್ಕೆ ಏರಿಕೆಯಾಗಿದೆ. ಮೊದಲ ತ್ರೈಮಾಸಿಕದಲ್ಲಿ ಕಂಪನಿ 26,642 ಕೋಟಿ ರೂ. ಬಡ್ಡಿ ಆದಾಯ ಗಳಿಸಿದೆ. 11,803 ಕೋಟಿ ರೂ. ಬಡ್ಡಿಯೇತರ ಆದಾಯವನ್ನೂ ಬ್ಯಾಂಕ್‌ ಗಳಿಸಿದೆ. ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಚಿಲ್ಲರೆ ಸಾಲ ಪ್ರಮಾಣ ಶೇ. 16.5ರಷ್ಟು ಬೆಳವಣಿಗೆ ಕಂಡಿದೆ. ಇನ್ನು ಗೃಹ ಸಾಲಗಳು ಶೇ. 11ರಷ್ಟು ಏರಿಕೆಯಾಗಿವೆ. ಒಟ್ಟಾರೆ ನೀಡಿದ ಸಾಲಗಳಲ್ಲಿ ಗೃಹ ಸಾಲಗಳ ಪ್ರಮಾಣ ಶೇ. 23ರಷ್ಟಿದೆ.