ಕ್ರಿಪ್ಟೋಕರೆನ್ಸಿಗಳಿಗೆ ಭವಿಷ್ಯವಿದೆ, ಪಾವತಿಯ ಪರಿಣಾಮಕಾರಿ ಮಾರ್ಗವಾಗಬಲ್ಲವು: ರಘುರಾಂ ರಾಜನ್

ಕ್ರಿಪ್ಟೋಕರೆನ್ಸಿಗಳಿಗೆ ಉಜ್ವಲ ಭವಿಷ್ಯವಿದೆ. ಮುಂದಿನ ದಿನಗಳಲ್ಲಿ ಇದು ಪರಿಣಾಮಕಾರಿ ಪಾವತಿಯ ವಿಧಾನವಾಗಿ ಬೆಳವಣಿಗೆ ಹೊಂದಿರುವ ಮಾರ್ಗಗಳನ್ನು ಕಂಡುಕೊಳ್ಳಬಹುದು ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ.

ಕ್ರಿಪ್ಟೋಕರೆನ್ಸಿಗಳಿಗೆ ಭವಿಷ್ಯವಿದೆ, ಪಾವತಿಯ ಪರಿಣಾಮಕಾರಿ ಮಾರ್ಗವಾಗಬಲ್ಲವು: ರಘುರಾಂ ರಾಜನ್
Linkup
ಹೊಸದಿಲ್ಲಿ: ಕ್ರಿಪ್ಟೋಕರೆನ್ಸಿಗಳು ಉತ್ತಮ ಭವಿಷ್ಯ ಹೊಂದಿವೆ. ಅವುಗಳ ಮೌಲ್ಯದಲ್ಲಿ ತೀವ್ರ ಏರಿಳಿತಗಳಿದ್ದರೂ ಪಾವತಿ ವಿಚಾರದಲ್ಲಿ ಪರಿಣಾಮಕಾರಿಯಾಗುವ ಮಾರ್ಗವನ್ನು ಈ ಆಸ್ತಿಗಳು ಕಂಡುಕೊಳ್ಳಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ನಿಯಂತ್ರಿತ ಸ್ಟೇಬಲ್ ಕಾಯಿನ್‌ಗಳು ಹೆಚ್ಚು ಪರಿಣಾಮಕಾರಿಯಾಗುವುದರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ರಾಜನ್, ಅವುಗಳ ಮೇಲಿನ ಸೂಕ್ತ ನಿಯಂತ್ರಣಕ್ಕೆ ಕೂಡಲೇ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸ್ಟೇಬಲ್ ಕಾಯಿನ್ ಎನ್ನುವುದು ಒಂದು ಡಿಜಿಟಲ್ ಕರೆನ್ಸಿ ಆಗಿದ್ದು, ಅದು ಅಮೆರಿಕನ್ ಡಾಲರ್‌ನಂತಹ ರಾಷ್ಟ್ರೀಯ ಕರೆನ್ಸಿ ಅಥವಾ ಚಿನ್ನದಂತಹ ಅಮೂಲ್ಯ ಲೋಹದಂತಹ ನಿಗದಿಪಡಿಸಲಾದ ಆಸ್ತಿಗಳಿಗೆ ಸಂಬಂಧಿಸಿರುತ್ತದೆ. ಆದರೆ ಮೌಲ್ಯನಿರ್ಣಯಕ್ಕೆ ಅನುವು ಮಾಡಿಕೊಡುವಂತಹ ಯಾವುದೇ ಮೂಲಭೂತ ಅಂಶಗಳಿರುವ ಬಗ್ಗೆ ರಾಜನ್ ಯಾವುದೇ ಸ್ಪಷ್ಟತೆ ವ್ಯಕ್ತಪಡಿಸಿಲ್ಲ. 'ಪ್ರಸ್ತುತ ಈ ಪ್ರಚೋದನಾಕಾರಿ ಪರಿಸ್ಥಿತಿಯಲ್ಲಿ ಆಸ್ತಿ ದರಗಳು ತೀಕ್ಷ್ಣವಾಗಿ ಏರಿಕೆಯಾಗುತ್ತಿದೆ. ಅನೇಕ ಕ್ರಿಪ್ಟೋಗಳ ಮೌಲ್ಯ ನಿರ್ಣಯ ಮಾಡಲಾಗುತ್ತಿದೆ. ಇಲ್ಲಿ ಪಾವತಿಗಳ ಸ್ವರೂಪದಲ್ಲಿ ಅಲ್ಲ, ಆದರೆ ಆಸ್ತಿಗಳ ತಮ್ಮದೇ ಹಕ್ಕುಗಳ ರೀತಿಯಲ್ಲಿ ಈ ಮೌಲ್ಯ ನಿರ್ಣಗಳು ನಡೆಯುತ್ತಿವೆ' ಎಂದು ಷಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬಿಜಿನೆಸ್‌ನ ಹಣಕಾಸು ವಿಭಾಗದ ಪ್ರೊಫಸೆರ್ ಆಗಿರುವ ರಘುರಾಂ ರಾಜನ್ ಹೇಳಿದ್ದಾರೆ. ಭಾರತದಲ್ಲಿ ಕೂಡ ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆಗಳು ಕ್ರಿಪ್ಟೋಕರೆನ್ಸಿಗಳನ್ನು ಡಿಜಿಟಲ್ ಕರೆನ್ಸಿಗಳಂತೆ ವ್ಯಾಖ್ಯಾನಿಸಬೇಕೇ ವಿನಾ ಕರೆನ್ಸಿಯಂತೆ ಅಲ್ಲ ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿವೆ. ಉದ್ಯಮ ಪರಿಣತರ ಪ್ರಕಾರ, ಕ್ರಿಪ್ಟೋಗೆ ಸಂಬಂಧಿಸಿದ ಎಲ್ಲ ಹಣಕಾಸು ಅಪಾಯಗಳ ಕುರಿತಂತೆ ತನ್ನ ಎಲ್ಲ ಕಾನೂನಾತ್ಮಕ ಕಳವಳಗಳನ್ನು ಪರಿಹರಿಸಲು ಸರ್ಕಾರಕ್ಕೆ ಇದು ಸಹಾಯ ಮಾಡಲಿದೆ. ಕ್ರಿಪ್ಟೋಕರೆನ್ಸಿಗಳು ತಮ್ಮ ಏರಿಳಿಕೆಯ ಮೌಲ್ಯಗಳಾಚೆಯೂ ಪರಿಣಾಮಕಾರಿ ಪಾವತಿಯ ಸಾಧನವಾಗಿ ಬಳಕೆಯಾಗುವಂತೆ ಕೆಲವು ಕ್ರಿಪ್ಟೋಕರೆನ್ಸಿಗಳು ಮಾರ್ಗವನ್ನು ಕಂಡುಕೊಳ್ಳಬಹುದು ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ. 'ಗಡಿಯಾಚೆಗಿನ ಪಾವತಿಗಳು ಇಲ್ಲಿ ಒಂದೇ ಭಾಗದಲ್ಲಿದ್ದು, ಇವು ಮುಕ್ತವಾಗಿ ತೆರೆದುಕೊಂಡಿವೆ. ಇದಕ್ಕೆ ಗಡಿಯಾಚೆಗಿನ ಪಾವತಿಗಳನ್ನು ಮಾಡಲು ಇರುವ ವಿಪರೀತ ವರ್ಗಾವಣೆ ವೆಚ್ಚ ಕಾರಣ' ಎಂದು ಅವರು ಹೇಳಿದ್ದಾರೆ. ಕ್ರಿಪ್ಟೋಕರೆನ್ಸಿ ದರಗಳು ಏರಿಕೆಯಾಗುತ್ತಲೇ ಹೋಗುತ್ತದೆ. ಹೀಗಾಗಿ ಈ ಡಿಜಿಟಲ್ ಕರೆನ್ಸಿಗಳು ಸಮರ್ಪಕ ಬಳಕೆ ಮಾರ್ಗವನ್ನು ಕಂಡುಕೊಳ್ಳಬೇಕಿದೆ ಎಂದಿದ್ದಾರೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಉದ್ಯಮ ಕಳೆದ ಮೂರು ವರ್ಷಗಳಲ್ಲಿ ನಾಲ್ಕರಿಂದ ಐದು ಮಿಲಿಯನ್‌ಗೆ ಬೆಳವಣಿಗೆ ಕಂಡಿದೆ. 2018ರಿಂದ 15-20 ಮಿಲಿಯನ್ ಹೂಡಿಕೆದಾರರೊಂದಿಗೆ 1.5 ಬಿಲಿಯನ್ ಡಾಲರ್‌ಗೂ ಅಧಿಕ ಹೂಡಿಕೆ ಕಂಡಿದೆ. ಈ ಮೂರು ವರ್ಷಗಳಲ್ಲಿ , ಎದರ್ ಮತ್ತು ಡಾಗೆಕಾಯಿನ್ ಮುಂತಾದ ಕ್ರಿಪ್ಟೋಕರೆನ್ಸಿಗಳು ನೀಡಿದ ಲಾಭದ ಪರಿಣಾಮವಾಗಿ ಜನರನ್ನು ಸೆಳೆಯುತ್ತಿದೆ.