ಭಾರತೀಯ ಕ್ರಿಪ್ಟೋಕರೆನ್ಸಿ ವಲಯಕ್ಕೆ ಅಮಿತಾಬ್‌ ಬಚ್ಚನ್‌ ಎಂಟ್ರಿ!

ಭಾರತೀಯ ಕ್ರಿಪ್ಟೋಕರೆನ್ಸಿ ವಲಯಕ್ಕೆ ಬಿಗ್‌-ಬಿ ಎಂದೇ ಖ್ಯಾತರಾದ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಎಂಟ್ರಿ ನೀಡಿದ್ದಾರೆ. ಇದೀಗ ಭಾರತೀಯ ಕ್ರಿಪ್ಟೋ ಎಕ್ಸ್ಚೇಂಜ್ ಕಾಯಿನ್‌ಡಿಸಿಎಕ್ಸ್‌ ( CoinDCX) ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದಾರೆ.

ಭಾರತೀಯ ಕ್ರಿಪ್ಟೋಕರೆನ್ಸಿ ವಲಯಕ್ಕೆ ಅಮಿತಾಬ್‌ ಬಚ್ಚನ್‌ ಎಂಟ್ರಿ!
Linkup
ಹೊಸದಿಲ್ಲಿ: ಭಾರತೀಯ ವಲಯಕ್ಕೆ ಬಿಗ್‌-ಬಿ ಎಂದೇ ಖ್ಯಾತರಾದ ಹಿರಿಯ ನಟ ಎಂಟ್ರಿ ನೀಡಿದ್ದಾರೆ. ಇದೀಗ ಭಾರತೀಯ ಕ್ರಿಪ್ಟೋ ಎಕ್ಸ್ಚೇಂಜ್ ( ) ಆಗಿರುವ ಅಮಿತಾಬ್‌ ಬಚ್ಚನ್, ಕ್ರಿಪ್ಟೋ ಕರೆನ್ಸಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದು ಕಾಯಿನ್‌ಡಿಸಿಎಕ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ. ಬಚ್ಚನ್ ಅವರು ಕ್ರಿಪ್ಟೋಕರೆನ್ಸಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಏಕೈಕ ಮೇರು ಸೆಲೆಬ್ರಿಟಿಯಾಗಿದ್ದಾರೆ. ಇದು ಭಾರತದಲ್ಲಿ ಕ್ರಿಪ್ಟೋ ವಲಯವು ತ್ವರಿತವಾಗಿ ವಿಸ್ತರಣೆಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ವಿಯೆಟ್ನಾಂ, ಪಾಕಿಸ್ತಾನ ಮತ್ತು ಉಕ್ರೇನ್‌ ಗಳಲ್ಲಿ ಕೂಡ ಕ್ರಿಪ್ಟೋ ವಲಯ ಭಾರೀ ಬೆಳವಣಿಗೆ ಕಾಣುತ್ತಿದೆ. ಅಮಿತಾಬ್‌ ಬಚ್ಚನ್ ಕ್ರಿಪ್ಟೋ ಕ್ಷೇತ್ರದ ಜತೆಗೆ ನಾನ್‌- ಫಂಜಿಬಲ್‌ ಟೋಕನ್‌ ( non-fungible tokens - NFTs) ಕ್ಷೇತ್ರಕ್ಕೂ ಪ್ರವೇಶ ನೀಡಿದ್ದಾರೆ. ಇವುಗಳು ಡಿಜಿಟಲ್ ಸ್ವತ್ತುಗಳಾಗಿದ್ದು, ಕಲೆ, ಸಂಗೀತ, ಕ್ರೀಡೆ, ವೀಡಿಯೊಗಳಂತಹ ಅನನ್ಯ ವಸ್ತುಗಳನ್ನು ಪ್ರತಿನಿಧಿಸುತ್ತವೆ. ಇವುಗಳನ್ನು ಕ್ರಿಪ್ಟೋಕರೆನ್ಸಿ ಬಳಸಿ ಸಂಗ್ರಹಿಸಬಹುದಾಗಿದೆ. ಹಿರಿಯ ಖ್ಯಾತ ನಟ ಅಮಿತಾಬ್ ಬಚ್ಚನ್‌ ಇದೇ ವರ್ಷ ನವೆಂಬರ್ ವೇಳೆಗೆ ತನ್ನದೇ NFTಗಳನ್ನು ಹೊರತರುವ ನಿರೀಕ್ಷೆಯಲ್ಲಿದ್ದಾರೆ. ಈ ಪೈಕಿ ತಮ್ಮ ಗುರುತು ಹೊಂದಿರುವ ಅಥವಾ ತಮ್ಮನ್ನು ಪ್ರತಿನಿಧಿಸುವ ಕೆಲವು ಅನನ್ಯ ಕಲಾಕೃತಿಗಳನ್ನು ಒಳಗೊಂಡಿವೆ ಎಂದು ಮಾಧ್ಯಮ ವರದಿಗಳು ಇತ್ತೀಚೆಗೆ ಬಹಿರಂಗಪಡಿಸಿವೆ. ರಾಪರ್ ಸ್ನೂಪ್ ಡಾಗ್ ಮತ್ತು ಅಮೆರಿಕನ್ ಟಿವಿ ಕಾರ್ಯಕ್ರಮದ ನಿರೂಪಕ ಸ್ಟೀವ್ ಹಾರ್ವೆ ಸೇರಿದಂತೆ ಹಲವಾರು ವಿದೇಶಿ ಕಲಾವಿದರು ಈಗಾಗಲೇ ಕ್ರಿಪ್ಟೋ ವಲಯಕ್ಕೆ ಜಿಗಿದಿದ್ದಾರೆ. ಇದೀಗ ಈ ಪ್ರವೃತ್ತಿ ಭಾರತೀಯ ಖ್ಯಾತನಾಮರಲ್ಲಿಯೂ ಮೊದಲುಗೊಂಡಿದೆ. ನಟಿ ಸನ್ನಿ ಲಿಯೋನ್ ಕೂಡ ಸೆಪ್ಟೆಂಬರ್‌ನಲ್ಲಿ ಕ್ರಿಪ್ಟೋ ಕರೆನ್ಸಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಈ ಮೂಲಕ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ ಮೊದಲ ಬಾಲಿವುಡ್ ನಟಿ ಎನಿಸಿಕೊಂಡರು. ವಾಸ್ತವವಾಗಿ, NFT ಟ್ರೇಡಿಂಗ್ ಪ್ಲಾಟ್‌ಫಾರ್ಮ್ Colexion ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸುನಿಲ್ ಶೆಟ್ಟಿ, ಅಮೀರ್ ಅಲಿ, ಮಿಕಾ ಸಿಂಗ್ ಮತ್ತು ಸಿದ್ದು ಮೂಸ್ ವಾಲಾ ಸೇರಿದಂತೆ ಇತರರೊಂದಿಗೆ ಸಹಿ ಹಾಕಿದೆ. ಭಾರತೀಯ ವ್ಯಾಪಾರ ಸಂಸ್ಥೆ ನಾಸ್ಕಾಂನ ಇತ್ತೀಚಿನ ವರದಿಯ ಪ್ರಕಾರ, ಜಾಗತಿಕ ಕ್ರಿಪ್ಟೋ ಟೆಕ್ ಮಾರುಕಟ್ಟೆಯು 2026 ರ ವೇಳೆಗೆ $ 2.3 ಬಿಲಿಯನ್ (ಅಂದಾಜು ರೂ. 17,087 ಕೋಟಿ) ಮೌಲ್ಯ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಇದು 2030 ರ ವೇಳೆಗೆ $ 241 ಮಿಲಿಯನ್ (ಸರಿಸುಮಾರು 1,790 ಕೋಟಿ ರೂ.) ದಾಟಲಿದೆ ಎಂದು ಅಂದಾಜಿಸಲಾಗಿದೆ.