ಬ್ರಿಟನ್, ರಷ್ಯಾ, ಬಾಂಗ್ಲಾದಲ್ಲಿ ಮತ್ತೆ ಕೊರೊನಾ ಕಾಟ: ಎಚ್ಚರಿಕೆ ಸಂದೇಶ ರವಾನಿಸಿದೆ ಕೇಂದ್ರ..!

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ, ಹೊಸ ಸೋಂಕಿತರ ಸಂಖ್ಯೆ ಶೇ. 8ರಷ್ಟು ಕುಸಿತ ಕಂಡಿದೆ. ಶೇ. 80ರಷ್ಟು ಹೊಸ ಕೇಸ್‌ಗಳು ದೇಶದ 90 ಜಿಲ್ಲೆಗಳಲ್ಲಿ ವರದಿಯಾಗಿವೆ

ಬ್ರಿಟನ್, ರಷ್ಯಾ, ಬಾಂಗ್ಲಾದಲ್ಲಿ ಮತ್ತೆ ಕೊರೊನಾ ಕಾಟ: ಎಚ್ಚರಿಕೆ ಸಂದೇಶ ರವಾನಿಸಿದೆ ಕೇಂದ್ರ..!
Linkup
: , ಹಾಗೂ ಬಾಂಗ್ಲಾ ದೇಶದಲ್ಲಿ ವೈರಸ್‌ ಮತ್ತೆ ಕಾಡಲಾರಂಭಿಸಿದೆ. ಹೀಗಾಗಿ, ನಾವು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಎಚ್ಚರಿಕೆ ನೀಡಿದೆ. ಜನರು ಯಾವುದೇ ಕಾರಣಕ್ಕೂ ಮೈಮರೆಯಬಾರದು ಎಂದು ಎಚ್ಚರಿಕೆ ನೀಡಿರುವ ಆರೋಗ್ಯ ಸಚಿವಾಲಯ, ಪ್ರವಾಸಿ ತಾಣಗಳಲ್ಲಿ ಜನರು ಸಾಮಾಜಿಕ ಅಂತರ, ಮಾಸ್ಕ್‌ ಇಲ್ಲದೆ ಗುಂಪುಗೂಡಿರುವ ಚಿತ್ರಗಳನ್ನು ಪ್ರಕಟಿಸಿ ಎಚ್ಚರಿಕೆಯ ಸಂದೇಶ ರವಾನಿಸಿದೆ. ನಾವು ಇನ್ನೂ ಕೋವಿಡ್ 2ನೇ ಅಲೆಯನ್ನೇ ನಿಭಾಯಿಸುತ್ತಿದ್ದೇವೆ. ಎರಡನೇ ಅಲೆ ಇನ್ನೂ ಮುಗಿದಿಲ್ಲ. ಹೀಗಾಗಿ, ಸಾರ್ವಜನಿಕ ಸ್ಥಳದಲ್ಲಿ ಸುರಕ್ಷಿತ ಅಂತರ ಹಾಗೂ ಮಾಸ್ಕ್ ಧಾರಣೆಯನ್ನು ಮರೆಯಬೇಡಿ ಎಂದು ಎಚ್ಚರಿಸಿದೆ. ಉತ್ತರಾಖಂಡದ ಮಸ್ಸೂರಿಯಲ್ಲಿ ಜನರು ಜಲಪಾತದ ಬಳಿ ಗುಂಪುಗೂಡಿದ್ದ ಫೋಟೋವನ್ನೂ ಪ್ರಕಟಿಸಿದೆ. ಸಮಾಧಾನಕರ ಸಂಗತಿ ಎಂದರೆ ಸದ್ಯ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ, ಹೊಸ ಸೋಂಕಿತರ ಸಂಖ್ಯೆ ಶೇ. 8ರಷ್ಟು ಕುಸಿತ ಕಂಡಿದೆ. ಶೇ. 80ರಷ್ಟು ಹೊಸ ಕೇಸ್‌ಗಳು ದೇಶದ 90 ಜಿಲ್ಲೆಗಳಲ್ಲಿ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮತ್ತೊಂದು ಸಂತಸದ ಸಂಗತಿಯನ್ನೂ ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡಿದೆ. ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 97.2ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಇದೇ ವೇಳೆ, ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ನಿಯಮಾವಳಿ ರೂಪಿಸಿದೆ. ಹೊಸದಾಗಿ ಮೂರು ಮಾದರಿಯ ಲಸಿಕೆಗಳು ದೇಶಕ್ಕೆ ಎಂಟ್ರಿ ಕೊಟ್ಟಿವೆ. ಇನ್ನು ಗರ್ಭಿಣಿಯರೂ ಕೂಡಾ ಲಸಿಕೆ ಹಾಕಿಸಿಕೊಳ್ಳಬಹುದಾಗಿದ್ದು, ಇದು ಅತ್ಯಗತ್ಯವಾಗಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿಕೆ ಪೌಲ್ ತಿಳಿಸಿದ್ದಾರೆ.