ಬ್ಯಾಂಕಿಂಗ್, ಹಣಕಾಸು ಸಂಸ್ಥೆಗಳಿಗೆ 4.92 ಲಕ್ಷ ಕೋಟಿ ರೂ. ವಂಚನೆ, ಮೊದಲ ಸ್ಥಾನದಲ್ಲಿ ಎಸ್‌ಬಿಐ

ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಅತೀ ಹೆಚ್ಚು ಅಕ್ರಮ ಪ್ರಕರಣಗಳು ನಡೆದಿದ್ದು, ಇವುಗಳ ಮೌಲ್ಯ 78,072 ಕೋಟಿ ರೂ.ಗಳಾಗಿದೆ. ಖಾಸಗಿ ರಂಗದ ಅತೀ ದೊಡ್ಡ ಬ್ಯಾಂಕ್‌ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೇವಲ ಶೇ. 0.55ರಷ್ಟು ವಂಚನೆ ಮಾತ್ರ ನಡೆದಿದೆ.

ಬ್ಯಾಂಕಿಂಗ್, ಹಣಕಾಸು ಸಂಸ್ಥೆಗಳಿಗೆ 4.92 ಲಕ್ಷ ಕೋಟಿ ರೂ. ವಂಚನೆ, ಮೊದಲ ಸ್ಥಾನದಲ್ಲಿ ಎಸ್‌ಬಿಐ
Linkup
ಹೊಸದಿಲ್ಲಿ: ಬ್ಯಾಂಕಿಂಗ್‌ ಮತ್ತು ಹಣಕಾಸು ಸಂಸ್ಥೆಗಳ ವಲಯದಲ್ಲಿ 2021ರ ಮಾರ್ಚ್ 31ರ ವೇಳೆಗೆ ಒಟ್ಟು 4.92 ಲಕ್ಷ ಕೋಟಿ ರೂ. ಮೊತ್ತದ ವಂಚನೆಯ ಪ್ರಕರಣಗಳು ನಡೆದಿವೆ ಎಂದು ಭಾರತೀಯ ರಿಸರ್ವ್‌ (ಆರ್‌ಬಿಐ)ನ ವರದಿ ತಿಳಿಸಿದೆ. ಒಟ್ಟು 90 ಬ್ಯಾಂಕ್‌ ಮತ್ತು ಸಂಸ್ಥೆಗಳಲ್ಲಿ ಒಟ್ಟಾಗಿ 45,613 ಸಾಲ ವಂಚನೆಯ ಪ್ರಕರಣಗಳು ದಾಖಲಾಗಿವೆ ಎಂದು ವರದಿ ಹೇಳಿದೆ. ಈ ಮೊತ್ತವು ಒಟ್ಟಾರೆ ಬ್ಯಾಂಕ್‌ ಸಾಲಗಳ ಶೇ.4.5ರಷ್ಟು ಪ್ರಮಾಣವಾಗಿದೆ. ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ () ಅತೀ ಹೆಚ್ಚು ಅಕ್ರಮ ಪ್ರಕರಣಗಳು ನಡೆದಿದ್ದು, ಇವುಗಳ ಮೌಲ್ಯ 2021ರ ಮಾರ್ಚ್ 31ರ ವೇಳೆಗೆ, 78,072 ಕೋಟಿ ರೂ.ಗಳಾಗಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ 39,733 ಕೋಟಿ ರೂ., ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 32,224 ಕೋಟಿ ರೂ., ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 29,572 ಕೋಟಿ ರೂ. ಸಾಲ ಅವ್ಯವಹಾರ ಪತ್ತೆಯಾಗಿವೆ. ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ನಡೆದಿರುವ ಸಾಲದ ವಂಚನೆ ಬಗ್ಗೆ ನೋಡುವುದಿದ್ದರೆ, ಐಸಿಐಸಿಐ ಬ್ಯಾಂಕ್‌ (ಶೇ.5.3), ಯೆಸ್‌ಬ್ಯಾಂಕ್‌ (ಶೇ.4.02), ಎಕ್ಸಿಸ್‌ ಬ್ಯಾಂಕ್‌ (ಶೇ. 2.54)ನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆದರೆ ಖಾಸಗಿ ರಂಗದ ಅತೀ ದೊಡ್ಡ ಬ್ಯಾಂಕ್‌ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೇವಲ ಶೇ. 0.55ರಷ್ಟು ವಂಚನೆ ಮಾತ್ರ ನಡೆದಿದೆ.