ಅಗ್ನಿ ಅವಘಡದಲ್ಲಿ ನೂರಾರು ಜನರ ಜೀವ ಉಳಿಸಿದ ನಾಯಿ! ಶ್ವಾನದ ಸಮಯಪ್ರಜ್ಞೆಗೆ ನಿವಾಸಿಗಳು ಫಿದಾ

ಒಂದು ಮೂಕ ಪ್ರಾಣಿ ಅಪಾರ್ಟ್​ಮೆಂಟ್​ನ ಜನರಿಗೆ ಆಗಬಹುದಾಗಿದ್ದ ದೊಡ್ಡ ಹಾನಿಯನ್ನು ತಪ್ಪಿಸಿದ್ದು, ನೂರಾರು ಜನರ ಜೀವ ಉಳಿಸಿದೆ. ಎಲೆಕ್ಟ್ರಾನಿಕ್‌ ಸಿಟಿಯ ಸಂಪಿಗೆ ನಗರದಲ್ಲಿ ನಡೆದ ಅಗ್ನಿ ಅವಘಡದಲ್ಲಿ ನಾಯಿಯೊಂದು ನೂರಾರು ಜನರ ಪ್ರಾಣ ಉಳಿಸಿದ್ದು, ನಾಯಿಯ ಸಮಯಪ್ರಜ್ಞೆಗೆ ಜನ ಬೆರಗಾಗಿದ್ದಾರೆ.

ಅಗ್ನಿ ಅವಘಡದಲ್ಲಿ ನೂರಾರು ಜನರ ಜೀವ ಉಳಿಸಿದ ನಾಯಿ! ಶ್ವಾನದ ಸಮಯಪ್ರಜ್ಞೆಗೆ ನಿವಾಸಿಗಳು ಫಿದಾ
Linkup
ಎಲೆಕ್ಟ್ರಾನಿಕ್‌ ಸಿಟಿಯ ಸಂಪಿಗೆ ನಗರದಲ್ಲಿ ನಡೆದ ಅಗ್ನಿ ಅವಘಡದಲ್ಲಿ ನಾಯಿಯೊಂದು ನೂರಾರು ಜನರ ಪ್ರಾಣ ಉಳಿಸಿದೆ. ಬೆಂಕಿಯ ಕೆನ್ನಾಲಿಗೆ ಚಾಚುವುದನ್ನು ನೋಡಿದ ಜೋರಾಗಿ ಬೊಗಳುತ್ತಾ ಇಡೀ ಅಪಾರ್ಟ್‌ಮೆಂಟ್‌ ಸುತ್ತಾಡಿದ್ದು, ಅಪಾರ್ಟ್‌ಮೆಂಟ್‌ನಲ್ಲಿದ್ದ ಜನರಿಗೆ ಅಗ್ನಿ ದುರಂತದ ಸುಳಿವನ್ನು ನೀಡಿದೆ. ಬುಧವಾರ ಮಧ್ಯಾಹ್ನ ಎಲೆಕ್ಟ್ರಾನಿಕ್‌ ಸಿಟಿಯ ಸಂಪಿಗೆ ನಗರದ ವಸುಂಧರಾ ಲೇಔಟ್‌ನ ವಿ ಮ್ಯಾಕ್ಸ್‌ ಚಾಲೇಟ್‌ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿ ಎರಡು ಫ್ಲಾಟ್‌ಗಳಿಗೆ ಆವರಿಸಿತ್ತು. ಈ ವೇಳೆ ಬೆಂಕಿಯನ್ನು ಕಂಡ ನಾಯಿ ಇಡೀ ಅಪಾರ್ಟ್‌ಮೆಂಟ್‌ ತುಂಬಾ ಜೋರಾಗಿ ಬೊಗಳುತ್ತಾ ಓಡಾಡಿದೆ. ನಾಯಿ ಬೊಗಳುವ ಶಬ್ಧ ಕೇಳಿ ಜನರು ಎಚ್ಚೆತ್ತಿಕೊಂಡ ಫ್ಲಾಟ್‌ನಲ್ಲಿದ್ದ ಜನರು ಬೆಂಕಿ ನೋಡಿ ಓಡೋಡಿ ಹೊರಗೆ ಬಂದಿದ್ದಾರೆ. 119ನೇ ಫ್ಲಾಟ್‌ನ ನಾಯಿ ಅಪಾರ್ಟ್‌ಮೆಂಟ್‌ನಲ್ಲಿ ಜೋರಾಗಿ ಬೊಗಳಿದೆ. ನಾಯಿ ಕೂಗುವುದನ್ನು ಕೇಳಿ ಜನರು ಹೊರ ಬಂದು ನೋಡುತ್ತಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಹೊಗೆ ನೋಡಿ ಜನರು ಗಾಬರಿಯಾಗಿದ್ದಾರೆ. ಇದಕ್ಕೂ ಮೊದಲು ನಾಯಿ ಭದ್ರತಾ ಸಿಬ್ಬಂದಿ ಬಳಿ ಬಂದು ಬೊಗಳಿ ಓಡಿತ್ತು ಎಂದು ತಿಳಿದುಬಂದಿದೆ. ನಾಯಿಯ ಸಮಯ ಪ್ರಜ್ಞೆ ಕಂಡು ಅಪಾರ್ಟ್ಮೆಂಟ್ ನಿವಾಸಿಗಳು ಬೆರಗಾಗಿದ್ದಾರೆ. ನಾಯಿ ಇಲ್ಲದಿದ್ದರೆ ಬೆಂಕಿ ಹೊತ್ತಿಕೊಂಡಿರುವುದು ಅಪಾರ್ಟ್‌ಮೆಂಟ್‌ನ ಇತರೆ ಫ್ಲಾಟ್ ನವರಿಗೆ ಗೊತ್ತಿರುತ್ತಿರಲಿಲ್ಲ. ನಾಯಿಯ ನಿಯತ್ತಿಗೆ ಇಡೀ ಅಪಾರ್ಟ್‌ಮೆಂಟ್‌ ಜನ ಫಿದಾ ಆಗಿದ್ದು, ಮೂಕ ಪ್ರಾಣಿ ಅಪಾರ್ಟ್ಮೆಂಟ್ನ ಜನರಿಗೆ ಆಗಬಹುದಾಗಿದ್ದ ದೊಡ್ಡ ಹಾನಿಯನ್ನು ಕಡಿಮೆ ಮಾಡಿದೆ. ಸಣ್ಣ ಪ್ರಮಾಣದಲ್ಲಿ ಅಪಾಯ ತಪ್ಪಿಸಿದೆ. ಆನೇಕಲ್‌ನ ಸಂಪಿಗೆ ನಗರದ ವಸುಂಧರಾ ಲೇಔಟ್‌ನ ವಿ ಮ್ಯಾಕ್ಸ್‌ ಚಾಲೇಟ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಪಾರ್ಟ್‌ಮೆಂಟ್‌ನ ಒಂದು ಫ್ಲಾಟ್‌ನಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿತ್ತು. ನಂತರ ಮತ್ತೊಂದು ಫ್ಲಾಟ್‌ಗೆ ಬೆಂಕಿ ಹಬ್ಬುತ್ತಿದ್ದಂತೆಯೇ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಜನ ಮಾಹಿತಿ ತಿಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇನ್ನು, ಬೆಂಕಿ ಅವಘಡದಿಂದ ಫ್ಲಾಟ್‌ನಲ್ಲಿದ್ದ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಜನರು ಫ್ಲ್ಯಾಟ್‌ನಿಂದ ಹೊರಗೆ ಬಂದ ಹಿನ್ನೆಲೆ ಅದೃಷ್ಟಾವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ನಿಖರ ಕಾರಣ ಇನ್ನು ತಿಳಿದುಬಂದಿಲ್ಲ.