ಲಾಕ್‌ಡೌನ್ನ‌ಲ್ಲಿ ರೋಡ್‌ ರೋಲರ್‌ ಕದ್ದು ಗುಜರಿಗೆ ಮಾರಿದ ಭೂಪರು!

ಲಾಕ್‌ಡೌನ್‌ ಸಮಯದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರೋಡ್‌ ರೋಲರ್‌ ಗಮನಿಸಿದ ಖದೀಮರು, ಅದನ್ನು ಗುಜರಿಗೆ ಹಾಕಲು ಯೋಜಿಸಿ, ಮೂರು ಭಾಗ ಮಾಡಿ ತೂಕ ಲೆಕ್ಕದಲ್ಲಿ ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ್ದಾರೆ.

ಲಾಕ್‌ಡೌನ್ನ‌ಲ್ಲಿ ರೋಡ್‌ ರೋಲರ್‌ ಕದ್ದು ಗುಜರಿಗೆ ಮಾರಿದ ಭೂಪರು!
Linkup
ಬೆಂಗಳೂರು: ಲಾಕ್‌ಡೌನ್‌ ಸಮಯದಲ್ಲಿ ಕೆಲಸವಿಲ್ಲದೆ ದಿನಗಟ್ಟಲೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಗಮನಿಸಿದ ಖದೀಮರು, ಅದನ್ನು ಗುಜರಿಗೆ ಹಾಕಲು ಯೋಜಿಸಿ, ಮೂರು ಭಾಗ ಮಾಡಿ ತೂಕಕ್ಕೆ ಮಾರಾಟ ಮಾಡಿದ್ದಾರೆ. ರಿಯಲ್‌ ಎಸ್ಟೇಟ್‌ ಮಾಲೀಕನ ಮಗ ರೋಡ್‌ ರೋಲರ್‌ ಕದ್ದ ಭೂಪನಾಗಿದ್ದಾನೆ. ಈ ಸಂಬಂಧ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಪವನ್‌ ಕುಮಾರ್‌ ಎಂಬಾನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿತ ಇಬ್ಬರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಚಂದ್ರಾ ಲೇಔಟ್‌ ಅರುಂಧತಿ ನಗರದ ನಿವಾಸಿ ಸೆಲ್ವರಾಜ್‌ ಅವರು 12 ವರ್ಷಗಳ ಹಿಂದೆ ತಮಿಳುನಾಡಿನ ವ್ಯಕ್ತಿಯೊಬ್ಬರಿಂದ ರೋಡ್‌ ರೋಲರ್‌ ಖರೀದಿಸಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸವಿಲ್ಲದ ಕಾರಣ ಮಾಗಡಿ ರಸ್ತೆಯ ಸೀಗೇಹಳ್ಳಿಯ ಖಾಲಿ ಮೈದಾನದಲ್ಲಿ ನಿಲ್ಲಿಸಿದ್ದರು. ಸಂಬಂಧಿಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮೇ 25ರಂದು ತಮಿಳುನಾಡಿಗೆ ಹೋಗಿದ್ದರು. ನಂತರ ಜೂನ್‌ 19ರಂದು ಬೆಂಗಳೂರಿಗೆ ಮರಳಿದಾಗ, ರೋಡ್‌ ರೋಲರ್‌ ಕಳ್ಳತನವಾಗಿರುವ ಗೊತ್ತಾಗಿದೆ. ಈ ಸಂಬಂಧ ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಚಂದ್ರಾ ಲೇಔಟ್‌ ಇನ್ಸಪೆಕ್ಟರ್‌ ಬ್ರಿಜೇಶ್‌ ಮ್ಯಾಥ್ಯೂ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಬಯಲಿಗೆಳೆದಿದ್ದಾರೆ. ''ರೋಡ್‌ ರೋಲರ್‌ ಕಳ್ಳತನವಾಗಿರುವುದು ನಗರದಲ್ಲೇ ಮೊದಲ ಪ್ರಕರಣವಾಗಿದೆ. ಸೀಗೇಹಳ್ಳಿ ನಿವಾಸಿ ಎನ್‌. ವಿನಯ್‌(30) ಎಂಬಾತ ತನ್ನ ಕಾರಿನ ಚಾಲಕ ಪವನ್‌ ಕುಮಾರ್‌ ಜತೆ ಸೇರಿ ಗುಜರಿ ಕಬ್ಬಿಣ ವ್ಯಾಪಾರಿ ಇಸ್ಮಾಯಿಲ್‌ ಎಂಬಾತನಿಗೆ 28 ರೂ. ಪ್ರತಿ ಕೆಜಿ ಲೆಕ್ಕದ್ದಲ್ಲಿ 78 ಕ್ವಿಂಟಾಲ್‌ (7,800 ಕೆಜಿ) ತೂಕದ ರೋಡ್‌ ರೋಲರ್‌ ಮಾರಾಟ ಮಾಡಿದ್ದಾರೆ. ವಿನಯ್‌ ಜಮೀನುದಾರ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿ ನಾರಾಯಣಪ್ಪ ಎಂಬುವರ ಮಗನಾಗಿದ್ದಾನೆ. ಕಳ್ಳತನದ ಮುಖ್ಯ ರೂವಾರಿ ವಿನಯ್‌ ಮತ್ತು ಗುಜರಿ ವ್ಯಾಪಾರಿ ಇಸ್ಮಾಯಿಲ್‌ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ, '' ಎಂದು ಪೊಲೀಸರು ತಿಳಿಸಿದ್ದಾರೆ. ಪವನ್‌ನನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆತನನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಕ್ರೇನ್‌ ಬಳಸಿ ಸಾಗಾಟ ''ಮೊದಲು ಗ್ಯಾಸ್‌ ಕಟ್ಟರ್‌ ಬಳಸಿ ರೋಡ್‌ ರೋಲರ್‌ ಅನ್ನು ಮೂರು ಭಾಗ ಮಾಡಿದ್ದಾರೆ. ನಂತರ ಇದನ್ನು ಮಾರಾಟ ಮಾಡಲು ಗುಜರಿ ವ್ಯಾಪಾರಿಯನ್ನು ಸಂಪರ್ಕಿಸಿದ್ದಾರೆ. ಇಸ್ಮಾಯಿಲ್‌ನೊಂದಿಗೆ ವ್ಯಾಪಾರ ಕುದುರಿದ ನಂತರ, ಕ್ರೇನ್‌ಗಳ ಸಹಾಯದಿಂದ ರೋಡ್‌ ರೋಲರ್‌ ಭಾಗಗಳನ್ನು ಟ್ರಕ್‌ಗೆ ಹಾಕಿದ್ದಾರೆ. ನಂತರ ಅದನ್ನು ಸೀಗೇಹಳ್ಳಿಯ ಗುಜರಿಗೆ ಸಾಗಿಸಲಾಗಿದೆ. ಈ ದೃಶ್ಯವು ಸುತ್ತಮುತ್ತಲಿನ ಮನೆಗಳ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಕಾಮಾಕ್ಷಿಪಾಳ್ಯ ನಿವಾಸಿ ಪವನ್‌ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಸಲಿ ವಿಷಯ ಬಯಲಾಗಿದೆ.