ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ; 9917 ಮಂದಿಗೆ ಸೋಂಕು, 57 ಮಂದಿ ಸಾವು!

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಸಂಕ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, 9917 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಕೋವಿಡ್‌ಗೆ ಒಂದೇ ದಿನ 57 ಮಂದಿ ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ; 9917 ಮಂದಿಗೆ ಸೋಂಕು, 57 ಮಂದಿ ಸಾವು!
Linkup
ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯ ಅಟ್ಟಹಾಸ ಮಿತಿ ಮೀರುತ್ತಿದ್ದು, ಶುಕ್ರವಾರವೂ 9917 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಕೋವಿಡ್‌ಗೆ ಒಂದೇ ದಿನ 57 ಮಂದಿ ಬಲಿಯಾಗಿದ್ದಾರೆ. ಸೋಂಕು ಪೀಡಿತರ ಪೈಕಿ ಒಂದೇ ದಿನ 57 ಮಂದಿ ಸಾವನ್ನಪ್ಪಿರುವುದು ಇದೇ ಮೊದಲು. ಅಂತ್ಯಕ್ರಿಯೆಗಾಗಿ ವಿದ್ಯುತ್‌ ಚಿತಾಗಾರಗಳ ಬಳಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ಜಿಲ್ಲೆಯಲ್ಲಿಇದುವರೆಗೆ 5,22,438 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 4,37,801 ಮಂದಿ ಚೇತರಿಸಿಕೊಂಡಿದ್ದಾರೆ. ಉಳಿದ 79,616 ಮಂದಿ ನಿಗದಿತ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಚಿಕಿತ್ಸೆ ಫಲಿಸದೆ 5020 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸೋಂಕು ಪತ್ತೆ ಪ್ರಮಾಣವು ಶೇ. 8ಕ್ಕೆ ಏರಿಕೆಯಾಗಿದ್ದು, ಮರಣ ದರವು ಶೇ 0.46ರಷ್ಟಿದೆ. ಸಕ್ರಿಯ ಸೋಂಕಿತರ ಪ್ರಮಾಣವು ಶೇ 15.24ಕ್ಕೆ ಹೆಚ್ಚಳವಾಗಿದೆ. ಪಾಲಿಕೆಯ 198 ವಾರ್ಡ್‌ಗಳ ಪೈಕಿ 187 ಕಡೆ ತಲಾ 50ಕ್ಕಿಂತ ಹೆಚ್ಚು ಸೋಂಕಿತರು ಇದ್ದಾರೆ. ಸೋಂಕಿತರ ಪೈಕಿ ಶೇ 80ರಷ್ಟು ಮಂದಿ ಹೋಮ್‌ ಐಸೋಲೇಷನ್‌ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.