ನೆಲಮಂಗಲ ಸರಕಾರಿ ಆಸ್ಪತ್ರೆಯಿಂದ ಕೊರೊನಾ ಸೋಂಕಿತ ಎಸ್ಕೇಪ್‌!

ನೆಲಮಂಗಲದ ಸರಕಾರಿ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ 6 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ವ್ಯಕ್ತಿ ಎಸ್ಕೇಪ್‌ ಆಗಿದ್ದು, ಪತ್ತೆಯಾಗದ ಪರಿಣಾಮ ತಾಲೂಕಿನ ಜನರಲ್ಲಿ ಆತಂಕ ಮನೆಮಾಡಿದೆ.

ನೆಲಮಂಗಲ ಸರಕಾರಿ ಆಸ್ಪತ್ರೆಯಿಂದ ಕೊರೊನಾ ಸೋಂಕಿತ ಎಸ್ಕೇಪ್‌!
Linkup
ನೆಲಮಂಗಲ: ನಗರದ ಸರಕಾರಿ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ 6 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ವ್ಯಕ್ತಿ ಎಸ್ಕೇಪ್‌ ಆಗಿದ್ದು, ಪತ್ತೆಯಾಗದ ಪರಿಣಾಮ ತಾಲೂಕಿನ ಜನರಲ್ಲಿ ಆತಂಕ ಮನೆಮಾಡಿದೆ. ತಾಲೂಕಿನಲ್ಲಿ ಶುಕ್ರವಾರ 130 ಪಾಸಿಟಿವ್‌ ಕೇಸ್‌ಗಳು ಬಂದಿವೆ. ಇಂತಹ ಸಮಯದಲ್ಲಿ ಸರಕಾರಿ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 75 ವರ್ಷದ ವೃದ್ಧ ನಾಪತ್ತೆ ಆಗಿರುವುದು ವೈದ್ಯಾಕಾರಿಯ ನಿರ್ಲಕ್ಷ್ಯ ತೋರುತ್ತಿದೆ. ಕಣ್ಮರೆ ಆಗಿರುವ ಸೋಂಕಿತ ಎಲ್ಲಿದ್ದಾನೆ ಎಂಬ ಮಾಹಿತಿ ಸಿಗದ ಕಾರಣ ಜನರಲ್ಲಿ ಬಹಳಷ್ಟು ಆತಂಕ ಎದುರಾಗಿದೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಕೋವಿಡ್‌ ವಾರ್ಡ್‌ನಿಂದ ಸೋಂಕಿತ ತಪ್ಪಿಸಿಕೊಳ್ಳುವ ದೃಶ್ಯ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಂಕಿತ ವ್ಯಕ್ತಿ ಹೊರ ಹೋಗುವಾಗ ಯಾವುದೇ ಸಿಬ್ಬಂದಿ ವಾರ್ಡ್‌ ಬಳಿ ಇರಲಿಲ್ಲ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಶನಿವಾರ ಕೂಡ 17,489 ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಇಲ್ಲಿಯವರೆಗೆ ರಾಜ್ಯದಲ್ಲಿ ದೃಢಪಟ್ಟ ಕೋವಿಡ್‌-19 ಕೇಸ್‌ಗಳ ಸಂಖ್ಯೆ 11,41,998ಕ್ಕೆ ಏರಿಕೆಯಾಗಿದೆ. ಕೊರೊನಾ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದರೂ ಪರೀಕ್ಷೆಗಳ ಸಂಖ್ಯೆ ಸ್ವಲ್ಪವಷ್ಟೆ ಏರಿಕೆಯಾಗಿದೆ. ಹೀಗಾಗಿ ಸ್ಯಾಂಪಲ್‌ಗಳಿಗೆ ಹೋಲಿಸಿದರೆ ಪಾಸಿಟಿವಿ ಪ್ರಮಾಣ ಶೇ.12.20ಕ್ಕೆ ಹೆಚ್ಚಳವಾಗಿದೆ.