ಜೆಡಿಎಸ್ ಬಲಿಷ್ಠ ರಾಜಕೀಯ ಪಕ್ಷ..! ಕುತೂಹಲ ಕೆರಳಿಸಿದ ಅನಂತ್ ಕುಮಾರ್ ಪುತ್ರಿ ಟ್ವೀಟ್

ಕರ್ನಾಟಕ ರಾಜಕಾರಣ ದಿನಕ್ಕೊಂದು ಕುತೂಹಲಕ್ಕೆ ಕಾರಣವಾಗುತ್ತಿದೆ. ಈಗ ಕೇಂದ್ರದ ಮಾಜಿ ಸಚಿವ ದಿ.ಅನಂತ್‌ ಕುಮಾರ್‌ ಪುತ್ರಿ ವಿಜೇತಾ ಜೆಡಿಎಸ್‌ನ್ನು ಹೊಗಳಿ ಮಾಡಿರುವ ಟ್ವೀಟ್‌ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಮಾಜಿ ಸಿಎಂ ಎಚ್‌ಡಿಕೆ ಕೂಡ ತೇಜಸ್ವಿನಿ ಅನಂತ್‌ ಕುಮಾರ್‌ ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದು ಹೇಳಿರುವುದು ಕೌತುಕ ಹುಟ್ಟುಹಾಕಿದೆ.

ಜೆಡಿಎಸ್ ಬಲಿಷ್ಠ ರಾಜಕೀಯ ಪಕ್ಷ..! ಕುತೂಹಲ ಕೆರಳಿಸಿದ ಅನಂತ್ ಕುಮಾರ್ ಪುತ್ರಿ ಟ್ವೀಟ್
Linkup
ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ಅನಂತ್ ಕುಮಾರ್ ಅವರು ಜೆಡಿಎಸ್ ಕುರಿತಾಗಿ ಮಾಡಿರುವ‌ ಟ್ವೀಟ್ ಕುತೂಹಲ ಕೆರಳಿಸಿದೆ. ರಾಜಕೀಯ ಏಕೆ ಕುತೂಹಲಕರವಾಗಿದೆ? ಎಂದರೆ ಜೆಡಿಎಸ್ ಇನ್ನು ಬಲಿಷ್ಠ ರಾಜಕೀಯ ಪಕ್ಷವಾಗಿ ಉಳಿದಿದೆ ಎಂದು ವಿಜೇತ ಅನಂತ್ ಕುಮಾರ್ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಲ್ಲದೇ ಕೇವಲ ಸೀಟುಗಳಿಂದ ಪಕ್ಷದ ಜನಪ್ರಿಯತೆ ಲೆಕ್ಕ ಹಾಕಲು ಆಗಲ್ಲ. ಸೀಟ್‌ ಏನಿದ್ರು ಕೊನೆಗೆ ಮಾತ್ರ ಎಂದು ನೆಟ್ಟಿಗರೊಬ್ಬರ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ ಜೆಡಿಎಸ್ ಕುರಿತು ಅವರು ಮಾಡಿರುವ ಟ್ವೀಟ್ ಉದ್ದೇಶ ಏನು ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಆಕಾಂಕ್ಷಿ ಆಗಿದ್ದರು. ಆದರೆ, ಅವರಿಗೆ ಟಿಕೆಟ್ ನೀಡಿರಲಿಲ್ಲ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರು ಇತ್ತೀಚಿನ ದಿನಗಳಲ್ಲಿ ತಟಸ್ಥವಾಗಿ ಉಳಿದಿದ್ದಾರೆ. ರಾಜಕೀಯದಲ್ಲೂ ಸಕ್ರಿಯವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಜೇತ ಅನಂತ್ ಕುಮಾರ್ ಟ್ವೀಟ್ ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ. ‌ ಇನ್ನು, ತೇಜಸ್ವಿನಿ ಅನಂತಕುಮಾರ್ ಅವರು ನಮ್ಮ ಪಕ್ಷಕ್ಕೆ ಬಂದರೆ ಸರಿಯಾದ ಸ್ಥಾನಮಾನ ಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗುರುವಾರ ಮಧ್ಯಾಹ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಗಲಿಲ್ಲ. ಹಾಗಾಗಿ, ಅವರು ನಮ್ಮ ಪಕ್ಷಕ್ಕೆ ಬಂದರೆ ತುಂಬಾ ಸಂತೋಷ ಎಂದರು. ಅನಂತ್ ಕುಮಾರ್ ಅವರ ಪುತ್ರಿ ಜೆಡಿಎಸ್ ಪಕ್ಷದ ಬಗ್ಗೆ ಉತ್ಸಾಹ ತುಂಬುವ ಮಾತನಾಡಿದ್ದಾರೆ. ಜೆಡಿಎಸ್ ಇನ್ನೂ ಸಹ ಕರ್ನಾಟಕದಲ್ಲಿ ಇದೆ ಅನ್ನೋದನ್ನು ಹೇಳಿದ್ದಾರೆ. ಅವರ ತಾಯಿ ತಮ್ಮ ಪಕ್ಷಕ್ಕೆ ಬಂದರೆ ಆತ್ಮೀಯವಾಗಿ ಸ್ವಾಗತಿಸುವುದಾಗಿ ಹೇಳಿದರು.