ಬೆಂಗಳೂರಿನ ವಿಲ್ಸನ್ ಗಾರ್ಡನ್ ಚಿತಾಗಾರ ತಾತ್ಕಾಲಿಕ ಬಂದ್..

ಚಿತಾಗಾರದಲ್ಲಿ ಕಾರ್ಯನಿರ್ವಹಣೆ ಹೆಚ್ಚಾದ ಕಾರಣ, ವಿಲ್ಸನ್ ಗಾರ್ಡನ್ ಚಿತಾಗಾರದ ತುರ್ತು ನಿರ್ವಹಣೆ ಅಗತ್ಯತೆ ಕಂಡುಬಂದಿದೆ. ಚಿತಾಗಾರ ದಿನವಿಡೀ ಕಾರ್ಯನಿರ್ವಹಿಸುತ್ತಿರುವ ಕಾರಣ, ನಿರ್ವಹಣೆಗೆ ಬ್ರೇಕ್ ನೀಡೋದು ಅನಿವಾರ್ಯವಾಗಿ ಪರಿಣಮಿಸಿದೆ.

ಬೆಂಗಳೂರಿನ ವಿಲ್ಸನ್ ಗಾರ್ಡನ್ ಚಿತಾಗಾರ ತಾತ್ಕಾಲಿಕ ಬಂದ್..
Linkup
: ಮೊದಲೇ ಕೊರೊನಾರ್ಭಟದಿಂದ ಕಂಗೆಟ್ಟಿರುವ ರಾಜಧಾನಿ ಜನರಿಗೆ ಬಿಬಿಎಂಪಿ ಮತ್ತೊಂದು ಶಾಕ್ ಕೊಟ್ಟಿದೆ..! ರಾಜಧಾನಿಯಲ್ಲಿ ಪ್ರತಿ ದಿನ 500ರ ಆಸುಪಾಸು ಮಂದಿ ಕೋವಿಡ್‌ಗೆ ಬಲಿಯಾಗುತ್ತಿರುವ ಬೆನ್ನಲ್ಲೇ, ನಗರದ ಪ್ರಮುಖ ಚಿತಾಗಾರವೊಂದು ತಾತ್ಕಾಲಿಕವಾಗಿ ಬಾಗಿಲು ಮುಚ್ಚಲಿದೆ. ಬೆಂಗಳೂರಿನ ಹೃದಯ ಭಾಗದಲ್ಲಿ ಇರುವ ಚಿತಾಗಾರದ ನಿರ್ವಹಣೆ ಸಮಸ್ಯೆ ಎದುರಾಗಿದೆ. ಹೀಗಾಗಿ, ಮೇ 20 ರಿಂದ 27ರವರೆಗೂ ಬಂದ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಈ ಹಿಂದೆ ಬನಶಂಕರಿ ಚಿತಾಗಾರವನ್ನೂ ಇದೇ ರೀತಿ ಬಂದ್ ಮಾಡಲಾಗಿತ್ತು. ಚಿತಾಗಾರದಲ್ಲಿ ಕಾರ್ಯನಿರ್ವಹಣೆ ಹೆಚ್ಚಾದ ಕಾರಣ, ವಿಲ್ಸನ್ ಗಾರ್ಡನ್ ಚಿತಾಗಾರದ ತುರ್ತು ನಿರ್ವಹಣೆ ಅಗತ್ಯತೆ ಕಂಡುಬಂದಿದೆ. ಚಿತಾಗಾರ ದಿನವಿಡೀ ಕಾರ್ಯನಿರ್ವಹಿಸುತ್ತಿರುವ ಕಾರಣ, ನಿರ್ವಹಣೆಗೆ ಬ್ರೇಕ್ ನೀಡೋದು ಅನಿವಾರ್ಯವಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ ಬಿಬಿಎಂಪಿಯು ಹಲವು ವಲಯಗಳಲ್ಲಿ ಚಿತಾಗಾರ ಹೊಂದಿದೆ. ಬನಶಂಕರಿ, ಮೇಡಿ ಅಗ್ರಹಾರ, ಕುಡ್ಲು, ಪಣತ್ತೂರು, ಕೆಂಗೇರಿ, ಸುಮನಹಳ್ಳಿ, ಪೀಣ್ಯ ಚಿತಾಗಾರಗಳನ್ನು ಕೇವಲ ಕೋವಿಡ್‌ಗೆ ಮೀಸಲಿಡಲು ಬಿಬಿಎಂಪಿ ಈ ಹಿಂದೆ ನಿರ್ಧರಿಸಿತ್ತು. ಇನ್ನು ಟಿಆರ್ ಮಿಲ್ ಹಾಗೂ ತಾವರೆಕೆರೆ ಚಿತಾಗಾರದಲ್ಲಿ ಕೋವಿಡೇತರ ಶವ ಸಂಸ್ಕಾರಕ್ಕೆ ಮೀಸಲಿಡಲಾಗಿತ್ತು.