ಬೆಂಗಳೂರಿಗೆ ತಟ್ಟಿಲ್ಲ ಭಾರತ್‌ ಬಂದ್‌ ಪರಿಣಾಮ! ಮೆಜೆಸ್ಟಿಕ್‌ ಸೇರಿ ಹಲವೆಡೆ ಎಂದಿನಂತೆ ಜನಜೀವನ ಸುಗಮ

ಬಂದ್‌ಗೆ ಬೆಂಬಲ ನೀಡಬೇಕು ಎಂದು ರೈತ ಪರ ಸಂಘಟನೆಗಳು ವಿನಂತಿ ಮಾಡಿದರೂ ಬೆಂಗಳೂರು ನಗರದಲ್ಲಿ ಸಾರಿಗೆ ಯೂನಿಯನ್‌ಗಳು ನೈತಿಕ ಬೆಂಬಲವನ್ನಷ್ಟೇ ನೀಡಿವೆ. ಹೊರತಾಗಿ ಬಂದ್‌ನಲ್ಲಿ ಭಾಗಿಯಾಗಿಲ್ಲ. ಆದರೆ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಜಾಥಾಗಳನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ ಕೂಡಾ ಬಂದ್‌ಗೆ ಬೆಂಬಲ ಸೂಚಿಸಿವೆ. ಬೆಂಗಳೂರಿನ ಕೆ.ಆರ್‌ ಪುರದಿಂದ ಟೌನ್‌ಹಾಲ್‌ವರೆಗೆ, ಶಿವಾಜಿ ನಗರದಿಂದ ಟೌನ್‌ಹಾಲ್‌ವರೆಗೆ ಹಾಗೂ ಸುಮನಹಳ್ಳಿಯಿಂದ ಟೌನ್‌ಹಾಲ್‌ವರೆಗೆ ರೈತರ ಜಾಥಾಗಳು ನಡೆಯಲಿವೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಬೆಂಗಳೂರಿಗೆ ತಟ್ಟಿಲ್ಲ ಭಾರತ್‌ ಬಂದ್‌ ಪರಿಣಾಮ! ಮೆಜೆಸ್ಟಿಕ್‌ ಸೇರಿ ಹಲವೆಡೆ ಎಂದಿನಂತೆ ಜನಜೀವನ ಸುಗಮ
Linkup
ಬೆಂಗಳೂರು: ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರೈತ ಹಾಗೂ ಜನಪರ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್‌ ಬಂದ್‌ಗೆ ಬೆಂಗಳೂರಿನಲ್ಲಿ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ನಗರದಲ್ಲಿ ಜನಜೀವನ ಎಂದಿನಂತೆ ಇದೆ. ಅಂಗಡಿ ಮುಂಗಟ್ಟುಗಳು ತೆರೆದಿದ್ದು ವಾಹನ ಸಂಚಾರ ಸರಾಗವಾಗಿದೆ. ಬೆಂಗಳೂರಿನ ಹೃದಯ ಭಾಗದ ಮೆಜೆಸ್ಟಿಕ್‌ನಲ್ಲೂ ಬಂದ್‌ಗೆ ಯಾವುದೇ ರೀತಿಯ ಸಕರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಕೆಎಸ್‌ಆರ್‌ಟಿಸಿ ಬಿಎಂಟಿಸಿ ಬಸ್‌ಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಆಟೋ, ಟ್ಯಾಕ್ಸಿ ಸಂಚಾರವೂ ಸರಾಗವಾಗಿದೆ. ಹೋಟೆಲ್‌, ಅಂಗಡಿಗಳು ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿವೆ. ಶಾಲಾ - ಕಾಲೇಜುಗಳು ನಡೆಯುತ್ತಿದ್ದು ಮೆಟ್ರೋ ಸಂಚಾರವೂ ಸ್ಥಗಿತಗೊಂಡಿಲ್ಲ. ಇವೆಲ್ಲದರ ಪರಿಣಾಮ ಬೆಂಗಳೂರಿಗರ ಮೇಲೆ ಯಾವುದೇ ರೀತಿಯ ಪರಿಣಮ ಈವರೆಗೆ ಬಿದ್ದಿಲ್ಲ. ಬಹುತೇಕ ನೈತಿಕ ಬೆಂಬಲಬಂದ್‌ಗೆ ಬೆಂಬಲ ನೀಡಬೇಕು ಎಂದು ರೈತ ಪರ ಸಂಘಟನೆಗಳು ವಿನಂತಿ ಮಾಡಿದರೂ ಬೆಂಗಳೂರು ನಗರದಲ್ಲಿ ಸಾರಿಗೆ ಯೂನಿಯನ್‌ಗಳು ನೈತಿಕ ಬೆಂಬಲವನ್ನಷ್ಟೇ ನೀಡಿವೆ. ಹೊರತಾಗಿ ಬಂದ್‌ನಲ್ಲಿ ಭಾಗಿಯಾಗಿಲ್ಲ. ಆದರೆ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಜಾಥಾಗಳನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ ಕೂಡಾ ಬಂದ್‌ಗೆ ಬೆಂಬಲ ಸೂಚಿಸಿವೆ. ಬೆಂಗಳೂರಿನ ಕೆ.ಆರ್‌ ಪುರದಿಂದ ಟೌನ್‌ಹಾಲ್‌ವರೆಗೆ, ಶಿವಾಜಿ ನಗರದಿಂದ ಟೌನ್‌ಹಾಲ್‌ವರೆಗೆ ಹಾಗೂ ಸುಮನಹಳ್ಳಿಯಿಂದ ಟೌನ್‌ಹಾಲ್‌ವರೆಗೆ ರೈತರ ಜಾಥಾಗಳು ನಡೆಯಲಿವೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಟೌನ್‌ಹಾಲ್‌ ಬಳಿ ಉರುಳು ಸೇವೆ ಮಾಡಿ ಪ್ರತಿಭಟನೆ.ಈ ಮಧ್ಯೆ ಬೆಂಗಳೂರಿನ ಟೌನ್‌ಹಾಲ್‌ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಉರುಳು ಸೇವೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು. ಟೌನ್‌ಹಾಲ್‌ ಮುಂಭಾಗದಲ್ಲಿ ಭಾರತ್‌ ಬಂದ್‌ಗೆ ಬೆಂಬಲ ನೀಡಿರುವ ಹಲವು ಸಂಘಟನೆಗಳು ಸೇರಿದ್ದು, ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಟೌನ್‌ಹಾಲ್‌ ಮುಂಭಾಗದಲ್ಲಿ ಸೇರಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಟೌನ್‌ಹಾಲ್‌ಗೆ ಜನ ಜಮಾಯಿಸುತ್ತಿದ್ದು, ಬೃಹತ್‌ ಮಟ್ಟದಲ್ಲಿ ಕೃಷಿ ಮಾರುಕಟ್ಟೆ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಪೊಲೀಸರು ಕೂಡ ಟೌನ್‌ಹಾಲ್‌ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.