ಆಧಾರ್, ಪಾನ್ ಕಾರ್ಡ್ ಕೊಡುವ ಮುನ್ನ ಎಚ್ಚರ..! ನಿಮಗೇ ಗೊತ್ತಿಲ್ಲದೆ ನಿಮ್ಮ ಹೆಸರಲ್ಲೇ ಸಾಲ ತಗೋತಾರೆ..!

ಆಧಾರ್ ಹಾಗೂ ಪಾನ್‌ ಕಾರ್ಡ್‌ ಪಡೆದು ವಂಚಿಸಿದ ಈ ಸ್ಕೀಂ ಬಗ್ಗೆ ಅನುಮಾನಗೊಂಡು ಬ್ಯಾಂಕ್‌ನವರನ್ನು ವಿಚಾರಿಸಿದಾಗ, 'ನಿಮ್ಮ ಹೆಸರಿನಲ್ಲಿ ಮೊಬೈಲ್‌, ಬೈಕ್‌ಗಳನ್ನು ಖರೀದಿ ಮಾಡಲಾಗಿದೆ. ಹೀಗಾಗಿ, ಪ್ರತಿ ತಿಂಗಳು ಇಎಂಐ ಕಟ್ಟುವಂತೆ ಹೇಳಿದ್ದಾರೆ'..!

ಆಧಾರ್, ಪಾನ್ ಕಾರ್ಡ್ ಕೊಡುವ ಮುನ್ನ ಎಚ್ಚರ..! ನಿಮಗೇ ಗೊತ್ತಿಲ್ಲದೆ ನಿಮ್ಮ ಹೆಸರಲ್ಲೇ ಸಾಲ ತಗೋತಾರೆ..!
Linkup
: ಆಧಾರ್‌ ಕಾರ್ಡ್‌ ಮತ್ತು ಪಾನ್‌ ಕಾರ್ಡ್‌ ಪಡೆದು ಅವರ ಹೆಸರಿನಲ್ಲಿ ದ್ವಿ ಚಕ್ರ ವಾಹನ ಹಾಗೂ ಮೊಬೈಲ್‌ ಫೋನ್‌ ಖರೀದಿಸಿ ವಂಚಿಸಿರುವ ಪ್ರಕರಣದ ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ವಿಶೇಷ ತಂಡ ತಲೆಮರೆಸಿಕೊಂಡಿರುವ ಆರೋಪಿಗಳಾದ ಮೊಹಮದ್‌ ಜೈನ್‌, ಲೋಕೇಶ, ಕಾರ್ತಿಕ್‌, ಮುಜಾಹಿದ್‌, ಹಫೀಜ್‌, ಮನ್ಸೂರ್‌ಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ. ಮತ್ತೊಂದೆಡೆ ಪುಲಿಕೇಶಿ ನಗರ ಪೊಲೀಸರು ಪ್ರಕರಣದ ಸಂಬಂಧ ಸಂಗೀತಾ ಶೋ ರೂಮ್‌ಗೆ ತೆರಳಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಿ ಸಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದು ಕಾರ್ಯಾಚರಣೆ ಕೈಗೊಂಡಿದ್ದಾರೆ. ಏನಿದು ಪ್ರಕರಣ? ಟೈಲರಿಂಗ್‌ ಕೆಲಸ ಮಾಡುವ ನಯೀಮ್‌ ತಾಜ್‌ ಅವರಿಗೆ ಕಳೆದ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ರೇಷನ್‌ ಹಂಚುವಾಗ ಗುಲ್ಜರ್‌ ಬಾನು ಎಂಬುವವರ ಪರಿಚಯವಾಗಿತ್ತು. ಈ ವೇಳೆ ಗುಲ್ಜರ್‌ ಬಾನು 'ಒಂದು ಸ್ಕೀಂ ಇದ್ದು, ನೀವು ಪಾಲುದಾರರಾದರೆ ಪ್ರತಿ ತಿಂಗಳು ನಿಮಗೆ ಹಣ ಬರಲಿದೆ' ಎಂದು ತಿಳಿಸಿದ್ದಾಳೆ. ಅದಕ್ಕೆ ನಯೀಮ್‌ ತಾಜ್‌ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಅವರನ್ನು ಕಳೆದ ಏಪ್ರಿಲ್‌ನಲ್ಲಿ ಪುಲಿಕೇಶಿ ನಗರದ ಸಂಗೀತಾ ಮೊಬೈಲ್‌ ಶೋ ರೂಮ್‌ಗೆ ಕರೆದುಕೊಂಡು ಹೋಗಿರುವ ಗುಲ್ಜರ್‌ ಬಾನು, ಮಹಮದ್‌ ಇಮ್ರಾನ್‌ ಎಂಬಾತನ ಪರಿಚಯ ಮಾಡಿಸಿದ್ದಾಳೆ. ಬಳಿಕ ಇಮ್ರಾನ್‌ ಸ್ಕೀಂ ಬಗ್ಗೆ ವಿವರಿಸಿ, ನಯೀಮ್‌ ತಾಜ್‌ ಅವರ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಪಡೆದುಕೊಂಡಿದ್ದಾನೆ. ಬಳಿಕ ಆ ದಾಖಲೆಗಳನ್ನು ಸಂಗೀತಾ ಶೋ ರೂಮ್‌ನ ಮ್ಯಾನೇಜರ್‌ ಕಾರ್ತಿಕ್‌ ಹಾಗೂ ಸಿಸ್ಟಮ್‌ ಆಪರೇಟರ್‌ ಮುಜಾಹಿದ್‌ಗೆ ನೀಡಿದ್ದಾರೆ. ಈ ವೇಳೆ ಈ ಇಬ್ಬರು ನಯೀಮ್‌ ತಾಜ್‌ ಅವರ ಸಹಿ ಪಡೆದು ಮೊಬೈಲ್‌ಗೆ ಓಟಿಪಿ ಸಂಖ್ಯೆ ಕಳುಹಿಸಿದ್ದಾರೆ. ಬಳಿಕ ಮೊಬೈಲ್‌ನಲ್ಲಿ ಫೋಟೊ ತೆಗೆದುಕೊಂಡು ಸ್ಕೀಂಗೆ ಲಾಗಿನ್‌ ಆಗಿರುವುದಾಗಿ ತಿಳಿಸಿದ್ದಾರೆ. 'ನೀವು ಸ್ಕೀಂನ ಗ್ರಾಹಕರಾಗಿರುವುದಾಗಿ ತಿಳಿಸಿ 1 ಸಾವಿರ ರೂ. ಹಣವನ್ನು ಫೋನ್‌ ಪೇ ಮೂಲಕ ಕಳುಹಿಸಿದ್ದಾರೆ. ಇದೇ ರೀತಿ ನೀವು ಬೇರೆಯವರನ್ನು ಕರೆದುಕೊಂಡು ಬಂದು ಗ್ರಾಹಕರಾಗಿ ಮಾಡಿದರೆ ಹೆಚ್ಚಿನ ಹಣ ಸಿಗಲಿದೆ' ಎಂದು ಹೇಳಿ ಕಳುಹಿಸಿದ್ದರು. ಇದರಂತೆ ಇವರು 25 ಕ್ಕೂ ಹೆಚ್ಚು ಮಂದಿಯನ್ನು ಕರೆದುಕೊಂಡು ಬಂದು ಲಾಗಿನ್‌ ಮಾಡಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? ಇಎಂಐ ಪಾವತಿಸುವಂತೆ ನಯೀಮ್‌ ತಾಜ್‌ ಸೇರಿದಂತೆ ಅವರು ಸ್ಕೀಂಗೆ ಸೇರ್ಪಡೆ ಮಾಡಿದ್ದ ಇತರರಿಗೆ ಕರೆಗಳು ಬರಲಾರಂಭಿಸಿವೆ. ಈ ವೇಳೆ ಸ್ಕೀಂ ಬಗ್ಗೆ ಅನುಮಾನಗೊಂಡು ಬ್ಯಾಂಕ್‌ನವರನ್ನು ವಿಚಾರಿಸಿದಾಗ, 'ನಿಮ್ಮ ಹೆಸರಿನಲ್ಲಿ ಮೊಬೈಲ್‌, ಬೈಕ್‌ಗಳನ್ನು ಖರೀದಿ ಮಾಡಲಾಗಿದೆ. ಹೀಗಾಗಿ, ಪ್ರತಿ ತಿಂಗಳು ಇಎಂಐ ಕಟ್ಟುವಂತೆ ಹೇಳಿದ್ದಾರೆ' ಎಂದರು. ಈ ಬಗ್ಗೆ ಮಹಮದ್‌ ಇಮ್ರಾನ್‌ನನ್ನು ಕೇಳಿದಾಗ, ನಾನು ದುಬೈಗೆ ಹೋಗುತ್ತಿರುವುದಾಗಿ ಹೇಳಿ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾನೆ. ಬಳಿಕ ನಯೀಮ್‌ ತಾಜ್‌ ನೀಡಿದ ದೂರಿನ ಮೇರೆಗೆ ಮೊಹಮದ್‌ ಜೈನ್‌, ಲೋಕೇಶ, ಕಾರ್ತಿಕ್‌, ಮುಜಾಹಿದ್‌, ಹಫೀಜ್‌, ಮನ್ಸೂರ್‌ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.