ಓಮಿಕ್ರಾನ್‌: 3 ಪ್ರಕರಣ ಪತ್ತೆಯಾದರೆ ಕ್ಲಸ್ಟರ್‌ ಎಂದು ಘೋಷಣೆ

ಅಪಾರ್ಟ್‌ಮೆಂಟ್‌ಗಳಲ್ಲಿ ಎಲ್ಲರೂ ಸೇರುವ ಆವರಣದಲ್ಲಿ(ಕಾಮನ್‌ ಮೀಟಿಂಗ್‌ ಏರಿಯಾ) ಡಬಲ್‌ ಡೋಸ್‌ ಲಸಿಕೆ ಪಡೆದವರಷ್ಟೇ ಭೇಟಿಯಾಗಬೇಕು. ಹೊರಗಿನವರು ಅಲ್ಲಿ ಸೇರಲು ಅವಕಾಶ ನೀಡದಂತೆ ಕ್ರಮ ವಹಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ

ಓಮಿಕ್ರಾನ್‌: 3 ಪ್ರಕರಣ ಪತ್ತೆಯಾದರೆ ಕ್ಲಸ್ಟರ್‌ ಎಂದು ಘೋಷಣೆ
Linkup
ಬೆಂಗಳೂರು: ವೈರಸ್‌ ನಿಗ್ರಹದ ಹಿನ್ನೆಲೆಯಲ್ಲಿಶಾಲೆ, ಹಾಸ್ಟೆಲ್‌ ಕ್ಲಸ್ಟರ್‌ ಹಾಗೂ ಬೆಂಗಳೂರಿನ ಅಪಾರ್ಟ್‌ಮೆಂಟ್‌ ಕ್ಲಸ್ಟರ್‌ಗಳ ನಿರ್ವಹಣೆಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಮೂರು ಪ್ರಕರಣ ಪತ್ತೆಯಾದರೂ ಕ್ಲಸ್ಟರ್‌ ಎಂದು ಪರಿಗಣಿಸಿ ನಿರ್ವಹಣೆಗೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '' ಮೊದಲು 10 ಪ್ರಕರಣ ಕಂಡುಬಂದರೆ ಕ್ಲಸ್ಟರ್‌ ಎಂದು ಪರಿಗಣಿಸಲಾಗುತ್ತಿತ್ತು. ಈಗ ಮೂರು ಪ್ರಕರಣ ಪತ್ತೆಯಾದರೂ ಕ್ಲಸ್ಟರ್‌ ಎಂದು ಪರಿಗಣಿಸಿ ಅಲ್ಲಿರುವ ಎಲ್ಲರನ್ನೂ ಪರೀಕ್ಷಿಸುವ ಜತೆಗೆ ಚಿಕಿತ್ಸೆ, ಲಸಿಕೆ ಕೊಡಿಸಲು ಸೂಚಿಸಲಾಗಿದೆ'' ಎಂದು ತಿಳಿಸಿದರು. ''ಅಪಾರ್ಟ್‌ಮೆಂಟ್‌ಗಳಲ್ಲಿ ಎಲ್ಲರೂ ಸೇರುವ ಆವರಣದಲ್ಲಿ(ಕಾಮನ್‌ ಮೀಟಿಂಗ್‌ ಏರಿಯಾ) ಡಬಲ್‌ ಡೋಸ್‌ ಲಸಿಕೆ ಪಡೆದವರಷ್ಟೇ ಭೇಟಿಯಾಗಬೇಕು. ಹೊರಗಿನವರು ಅಲ್ಲಿ ಸೇರಲು ಅವಕಾಶ ನೀಡದಂತೆ ಕ್ರಮ ವಹಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ'' ಎಂದು ಹೇಳಿದರು. ''ಶಾಲೆ, ಕಾಲೇಜಿನಲ್ಲಿಸಿಬ್ಬಂದಿ, ವಿದ್ಯಾರ್ಥಿಗಳ ಪೋಷಕರು ಎರಡು ಡೋಸ್‌ ಲಸಿಕೆ ಪಡೆದಿರಬೇಕು. ಮುಖ್ಯವಾಗಿ ನರ್ಸಿಂಗ್‌, ಅರೆ ವೈದ್ಯಕೀಯ ಕೋರ್ಸ್‌ನ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿಎಲ್ಲರನ್ನೂ ತಪಾಸಣೆ ನಡೆಸಬೇಕು. ಎಲ್ಲರೂ ಡಬಲ್‌ ಡೋಸ್‌ ಲಸಿಕೆ ಪಡೆಯಲು ಅಭಿಯಾನ ನಡೆಸಬೇಕು. ನಾನಾ ಕಾಯಿಲೆ-ಯಿಂದ ಬಳಲುತ್ತಿರುವವರು, ಆಸ್ಪತ್ರೆಗಳಲ್ಲಿರುವವರ ಪರೀಕ್ಷೆಯನ್ನೂ ನಡೆಸಬೇಕು. ಎಲ್ಲಿಯೂ ಸ್ವಲ್ಪವೂ ಸಂಶಯ ಬಾರದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ,'' ಎಂದು ತಿಳಿಸಿದರು. ''ಅಂತಾರಾಷ್ಟ್ರೀಯ ಮಟ್ಟದಲ್ಲಿಓಮಿಕ್ರಾನ್‌ ತಳಿ ಪತ್ತೆಯಾಗಿರುವ ದೇಶದಲ್ಲಿಅನುಸರಿಸುತ್ತಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಸೂಚಿಸಲಾಗಿದೆ. ಸದ್ಯಕ್ಕೆ ನಮಗೆ ಪ್ರಾಥಮಿಕ ವರದಿಯಷ್ಟೇ ಬಂದಿದೆ. ನಾನಾ ಕಡೆ ಡೆಲ್ಟಾ ತಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯನ್ನೇ ಮುಂದುವರಿಸಬೇಕು ಎಂಬ ಮಾಹಿತಿ ಇದೆ. ಮಾಹಿತಿ ಕ್ರೋಡೀಕರಣದ ಮೂಲಕ ವೈಜ್ಞಾನಿಕ ವಿಧಾನದಲ್ಲಿಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು,'' ಎಂದು ತಿಳಿಸಿದರು. ಆರೋಗ್ಯ ಸಚಿವರ ಜತೆ ಚರ್ಚೆ ದಕ್ಷಿಣ ಆಫ್ರಿಕಾದಿಂದ ರಾಜ್ಯಕ್ಕೆ ಬಂದಿದ್ದವರ ಪೈಕಿ 10 ಮಂದಿ ಸಂಪರ್ಕಕ್ಕೆ ಸಿಗದಿರುವ ಬಗ್ಗೆ ಸಚಿವ ಡಾ.ಕೆ.ಸುಧಾಕರ್‌ ಹೇಳಿಕೆ ನೀಡಿದ್ದಾರೆ. ಆರೋಗ್ಯ ಸಚಿವರೊಂದಿಗೆ ಚರ್ಚಿಸುತ್ತೇನೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ ತಿಳಿಸಿದರು.