ಬೆಂಗಳೂರು: ಕೋವಿಡ್‍ ಸಂಕಷ್ಟ ಕಾಲದಲ್ಲಿ ವರದಾನವಾದ ಎಲ್‌ಪಿಜಿ ಐರನ್ ಬಾಕ್ಸ್

ದಿನ ನಿತ್ಯ ಜೀವನ ನಿರ್ವಹಣೆಗಾಗಿ ಐರನ್ ಮಾಡುವ ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ಉದ್ದೇಶದಿಂದ ಬಟ್ಟೆಗಳನ್ನು ಇಸ್ತ್ರಿ ಮಾಡುವ ಮಡಿವಾಳರ ಅನುಕೂಲಕ್ಕೂ ಪ್ರತ್ಯೇಕ ಇಸ್ತ್ರಿ ಪೆಟ್ಟಿಗೆಗಳು ಬಂದಿವೆ.

ಬೆಂಗಳೂರು: ಕೋವಿಡ್‍ ಸಂಕಷ್ಟ ಕಾಲದಲ್ಲಿ ವರದಾನವಾದ ಎಲ್‌ಪಿಜಿ ಐರನ್ ಬಾಕ್ಸ್
Linkup
ಎಚ್.ಪಿ. ಪುಣ್ಯವತಿ, ಜೀವನವನ್ನು ದುಸ್ತರ ಮಾಡಿದರೆ ಕೆಲವರಿಗೆ ಹೊಸ ಆಲೋಚನೆಗಳನ್ನು ತರಿಸಿದೆ. ಬೆಂಗಳೂರಿಗೆ‌ ಈಗ ಬಂದಿವೆ ಪರಿಸರ ಸ್ನೇಹಿ ಎಲ್‌ಪಿಜಿ ಆಧಾರಿತ ಐರನ್ ಬಾಕ್ಸ್‌ಗಳು. ಕೋವಿಡ್‍ನಿಂದಾಗಿ ಇದ್ದಿಲಿಗೆ ತೀವ್ರ ಬರ ಉಂಟಾಗಿತ್ತು. ಇಸ್ತ್ರಿ ಮಾಡಿಸುವ ಗ್ರಾಹಕರ ಸಂಖ್ಯೆಯೂ ಇಳಿಕೆಯಾಯಿತು. ಇದರಿಂದ ಬೆಂಗಳೂರಿನಲ್ಲಿ ಸಾಕಷ್ಟು ಮಡಿವಾಳರು ಇಸ್ತ್ರಿ ಅಂಗಡಿಗಳನ್ನು ಬಂದ್ ಮಾಡಿದ್ದರು. ಕೆಲವರು ತಮ್ಮ ಹುಟ್ಟೂರುಗಳಿಗೆ ಹಿಂದಿರುಗಿದರು. ಈ ವೇಳೆ ಎಲ್‍ಪಿಜಿ ಐರನ್ ಬಾಕ್ಸ್‌ಗಳು ವರದಾನವಾದವು. ಹಲಸೂರಿನ ಕೇಂಬ್ರಿಡ್ಜ್ ಲೇಔಟ್, ಕೋರಮಂಗಲ, ಇಂದಿರಾನಗರ ಹೀಗೆ ಕೆಲವು ಕಡೆ ಮಡಿವಾಳರು ಎಲ್‍ಪಿಜಿ ಐರನ್ ಬಾಕ್ಸ್ ಗಳನ್ನು ಬಳಸುತ್ತಿದ್ದಾರೆ ಎಂದು ಎಲ್‍ಪಿಜಿ ಐರನ್ ಬಾಕ್ಸ್ ವಿತರಕರಾದ ಗಾಂಧಿ ಬಜಾರ್ ನ ದೀಪಕ್ ಬೊಹರಾ ತಿಳಿಸಿದರು‌. ಅಡುಗೆ ಮಾಡಲು, ವಾಹನ ಓಡಿಸಲು ಮತ್ತಿತರ ಉದ್ದೇಶಗಳಿಗೆ ಬಳಮೆಯಾಗುತ್ತಿದ್ದ ಎಲ್‍ಪಿಜಿ ಗ್ಯಾಸ್ ಇದೀಗ ಬಟ್ಟೆ ಇಸ್ತ್ರಿ ಉದ್ಯಮದಲ್ಲಿ ಹೊಸ ಛಾಪು ಮೂಡಿಸಿದೆ. ಸುಮಾರು ಎರಡು ದಶಕಗಳ ಹಿಂದೆ ಇದ್ದಿಲನ್ನು ಕೆಂಡ ಮಾಡಿ ಐರನ್ ಮಾಡಲಾಗುತ್ತಿತ್ತು. ಇದರಿಂದ ಸಾಕಷ್ಟು ಮಾಲಿನ್ಯ ಉಂಟಾಗುತ್ತಿತ್ತು. ಈ ಮಾದರಿಯ ಇಸ್ತ್ರಿ ಪೆಟ್ಟಿಗೆಗಳು ಈಗಲೂ ಬಳಕೆಯಲ್ಲಿದ್ದರೂ, ಕಾಲ ಬದಲಾದಂತೆ ವಿದ್ಯುತ್ ಸಂಪರ್ಕದ ಇಸ್ತ್ರಿ ಪೆಟ್ಟಿಗೆಗಳು ಬಂದವು. ಇದೀಗ ಆಧುನಿಕ ಯುಗದಲ್ಲಿ ಪರಿಸರ ಸ್ನೇಹಿ ಎಲ್‍ಪಿಜಿ ಗ್ಯಾಸ್‍ನ ಐರನ್ ಬಾಕ್ಸ್ ಗಳು ಬಂದಿವೆ. ವಿದ್ಯುತ್ ಆಧಾರಿತ ಐರನ್ ಬಾಕ್ಸ್ ನಲ್ಲಿ ಯಾವ ಬಟ್ಟೆಗೆ ಎಷ್ಟು ಬಿಸಿ ಬೇಕು ಎಂಬುದನ್ನು ಸೆಟ್ ಮಾಡಿಕೊಳ್ಳುವಂತೆ ಗ್ಯಾಸ್ ಐರನ್ ಬಾಕ್ಸ್‍ನಲ್ಲೂ ಸೆಟ್ ಮಾಡಿಕೊಳ್ಳಬಹುದು. ಅಡುಗೆ ಸ್ಟೌವ್ ಅನ್ನು ಲೈಟರ್ ನಲ್ಲಿ ಆನ್ ಮಾಡಿದಂತೆ ಐರನ್ ಬಾಕ್ಸ್ ಅನ್ನು ಆನ್ ಮಾಡಿದರಾಯಿತು. 10-20 ಸೆಕೆಂಡ್‍ನಲ್ಲೇ ಐರನ್ ಬಾಕ್ಸ್ ಬಿಸಿಯಾಗುತ್ತದೆ. ಯಾವ ಮಾದರಿಯ ಬಟ್ಟೆಗೆ ಎಷ್ಟು ಬಿಸಿ ಬೇಕೋ ಅಷ್ಟನ್ನು ಅಡ್ಜೆಸ್ಟ್ ಮಾಡಿಕೊಂಡು ಐರನ್ ಮಾಡಬಹುದು. ಹೊಸದಿಲ್ಲಿ ಮೂಲದ ಕಂಪನಿಯೊಂದು ಈ ಇಸ್ತ್ರಿ ಪೆಟ್ಟಿಗೆಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, 2019ರಲ್ಲಿ ಬೆಂಗಳೂರಿಗೂ ಬಂತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಇದು ಹೆಚ್ಚು ಪ್ರಚಲಿತವಾಗಲಿಲ್ಲ. ಅಲ್ಲದೆ ಐರನ್ ಉದ್ಯಮ ತೀವ್ರ ಪ್ರಮಾಣದಲ್ಲಿ ನಷ್ಟ ಹೊಂದುವಂತಾಯಿತು. ಇದೀಗ ಕೋವಿಡ್ ನಿಯಂತ್ರಣದಲ್ಲಿದೆ. ಪರಿಸರ ಸ್ನೇಹಿ ಐರನ್ ಬಾಕ್ಸ್ ಗಳು ಬಂದಿದ್ದು, ಸಮುದಾಯದವರಿಗೆ ವರದಾನವಾಗಿದೆ. ಉದ್ಯಮ್ ವ್ಯಾಪಾರ್ ಸ್ವಯಂ ಸೇವಾ ಸಂಸ್ಥೆಯು ಬೆಂಗಳೂರಿನಲ್ಲಿ ಕೆಲವರಿಗೆ ಎಲ್‍ಪಿಜಿ ಆಧಾರಿತ ಐರನ್ ಬಾಕ್ಸ್ ಗಳನ್ನು ಪೂರೈಸಿ ಸಂಪರ್ಕ ಕಲ್ಪಿಸಿದೆ. ಎಲ್‍ಪಿಜಿ ಐರನ್‍ ಬಾಕ್ಸ್ ನಲ್ಲಿ ಒಂದು ಬಟ್ಟೆಗೆ ಕೇವಲ 70 ಪೈಸೆ ಖರ್ಚು ಸಾಮಾನ್ಯವಾಗಿ ಇದ್ದಿಲು ಬಳಸಿ ಒಂದು ಬಟ್ಟೆ ಐರನ್ ಮಾಡಲು 1. 50 ರೂ. ಬೇಕು. ಕರೆಂಟ್‍ನ ಐರನ್ ಬಾಕ್ಸ್ ಆದರೆ ಒಂದು ಬಟ್ಟೆಗೆ ಸುಮಾರು 1.70 ರೂ. ಖರ್ಚು ಬರುತ್ತದೆ. ಅದೇ ಎಲ್‍ಪಿಜಿ ಆಧಾರಿತ ಐರನ್ ಬಾಕ್ಸ್‌ನಲ್ಲಿ ಒಂದು ಬಟ್ಟೆಗೆ ಕೇವಲ 70 ಪೈಸೆ ವೆಚ್ಚ ತಗಲುತ್ತದೆ. ಇಸ್ತ್ರಿ ಮಾಡುವವರ ಅಭಿಪ್ರಾಯ ಇಂದಿರಾನಗರದಲ್ಲಿ ಎರಡು ದಶಕಗಳಿಂದ ಇಸ್ತ್ರಿ ಉದ್ಯಮ ನಡೆಸುತ್ತಿದ್ದೇನೆ. ಚಳಿಗಾಲದಲ್ಲಿ ಇದ್ದಿಲನ್ನು ಕೆಂಡ ಮಾಡಲು ಹರಸಾಹಸ ಪಡಬೇಕಿತ್ತು. ಕರೆಂಟ್‍ ಐರನ್ ಬಾಕ್ಸ್ ಬಳಸಲು ನಮಗೆ ಖರ್ಚು ಜಾಸ್ತಿ. ಇದೀಗ ನಮಗೆ ಉದ್ಯಮ್ ವ್ಯಾಪಾರ್ ಸಂಸ್ಥೆಯು ಎಲ್‍ಪಿಜಿ ಐರನ್ ಬಾಕ್ಸ್ ಅನ್ನು ಪರಿಚಯಿಸಿದೆ. ಇದೀಗ ನಮ್ಮ ಉದ್ಯಮ ಲಾಭದಾಯಕವಾಗಿ ನಡೆಯುತ್ತಿದೆ ಎಂದು ವೆಂಕಟೇಶ್ ತಿಳಿಸಿದರು. ಕೋವಿಡ್‍ನಿಂದ ಸಂಕಷ್ಟದಲ್ಲಿದ್ದ ವರದಾನ ಕೋವಿಡ್‍ನಿಂದಾಗಿ ಇದ್ದಿಲಿಗೆ ತೀವ್ರ ಬರ ಉಂಟಾಯಿತು. ಇಸ್ತ್ರಿ ಮಾಡಿಸುವ ಗ್ರಾಹಕರ ಸಂಖ್ಯೆಯೂ ಇಳಿಕೆಯಾಯಿತು. ಇದರಿಂದ ಬೆಂಗಳೂರಿನಲ್ಲಿ ಸಾಕಷ್ಟು ಮಡಿವಾಳರು ಇಸ್ತ್ರಿ ಅಂಗಡಿಗಳನ್ನು ಬಂದ್ ಮಾಡಿದ್ದರು. ಕೆಲವರು ತಮ್ಮ ಹುಟ್ಟೂರುಗಳಿಗೆ ಹಿಂದಿರುಗಿದರು. ಈ ವೇಳೆ ಎಲ್‍ಪಿಜಿ ಐರನ್ ಬಾಕ್ಸ್ ಗಳು ವರದಾನವಾದವು. ಹಲಸೂರಿನ ಕೇಂಬ್ರಿಡ್ಜ್ ಲೇಔಟ್, ಕೋರಮಂಗಲ, ಇಂದಿರಾನಗರ ಹೀಗೆ ಕೆಲವು ಕಡೆ ಮಡಿವಾಳರು ಎಲ್‍ಪಿಜಿ ಐರನ್ ಬಾಕ್ಸ್ ಗಳನ್ನು ಬಳಸುತ್ತಿದ್ದಾರೆ ಎಂದು ಎಲ್‍ಪಿಜಿ ಐರನ್ ಬಾಕ್ಸ್ ವಿತರಕರಾದ ಗಾಂಧಿ ಬಜಾರ್ ನ ದೀಪಕ್ ಬೊಹರಾ.