ಏ.1ರಿಂದ ಟಿ.ವಿ ಚಾನೆಲ್‌ ದರ ಪರಿಷ್ಕರಣೆ; ಸಣ್ಣ ಕಾರುಗಳ ಮಾರಾಟ ನಿಲ್ಲಿಸಲ್ಲ ಎಂದ ಮಾರುತಿ & ಇತರ ಸುದ್ದಿಗಳು

ದೂರ ಸಂಪರ್ಕ ನಿಯಂತ್ರಕ ಪ್ರಾಧಿಕಾರ ಟ್ರಾಯ್‌, ಟಿ.ವಿ ಚಾನೆಲ್‌ಗಳ ಪರಿಷ್ಕೃತ ದರ ನಿಗದಿಗೆ ಗಡುವನ್ನು 2022ರ ಏಪ್ರಿಲ್‌ 1ಕ್ಕೆ ಮುಂದೂಡಿದ್ದು, ಅಂದಿನಿಂದನೇ ಟಿವಿ ವಾಹಿನಿಗಳ ನೂತನ ದರಗಳು ಜಾರಿಗೆ ಬರಲಿವೆ.

ಏ.1ರಿಂದ ಟಿ.ವಿ ಚಾನೆಲ್‌ ದರ ಪರಿಷ್ಕರಣೆ; ಸಣ್ಣ ಕಾರುಗಳ ಮಾರಾಟ ನಿಲ್ಲಿಸಲ್ಲ ಎಂದ ಮಾರುತಿ & ಇತರ ಸುದ್ದಿಗಳು
Linkup
ಹೊಸದಿಲ್ಲಿ: ದೂರ ಸಂಪರ್ಕ ನಿಯಂತ್ರಕ ಪ್ರಾಧಿಕಾರ ಟ್ರಾಯ್‌, ಟಿ.ವಿ ಚಾನೆಲ್‌ಗಳ ಪರಿಷ್ಕೃತ ದರ ನಿಗದಿಗೆ ಗಡುವನ್ನು 2022ರ ಏಪ್ರಿಲ್‌ 1ಕ್ಕೆ ಮುಂದೂಡಿದೆ. ಈ ಹಿಂದೆ ಡಿಸೆಂಬರ 1ಕ್ಕೆ ಗಡುವು ನಿಗದಿಯಾಗಿತ್ತು. ಪ್ರಸಾರ ವಲಯದ ಕಂಪನಿಗಳು ಡಿಸೆಂಬರ್‌ 31ರೊಳಗೆ ತಮ್ಮ ರೆಫರೆನ್ಸ್‌ ಇಂಟರ್‌ಕನೆಕ್ಟ್ ಆಫರ್‌ (ಆರ್‌ಐಒ) ಅನ್ನು ಸಲ್ಲಿಸಬೇಕಾಗುತ್ತದೆ. ಇದರಲ್ಲಿ ತಮ್ಮ ಚಾನೆಲ್‌ಗಳ ಎಂಆರ್‌ಪಿ ವಿವರಗಳನ್ನು ಪ್ರಸ್ತಾಪಿಸಬೇಕಾಗುತ್ತದೆ. ಡಿಟಿಎಚ್‌ ಮತ್ತು ಕೇಬಲ್‌ ಕಂಪನಿಗಳು ತಮ್ಮ ವಿತರಣೆಗಳ ರಿಟೇಲ ದರ (ಡಿಆರ್‌ಪಿ) ವಿವರವನ್ನು 2022 ಜನವರಿ 31ರೊಳಗೆ ಟ್ರಾಯ್‌ಗೆ ಸಲ್ಲಿಸಬೇಕಾಗುತ್ತದೆ. ಸಣ್ಣ ಕಾರುಗಳ ಮಾರಾಟವನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದೆ. ಹೊಸದಿಲ್ಲಿ: ಸಣ್ಣ ಕಾರುಗಳು ಮಾರುಕಟ್ಟೆಯಿಂದ ನಿರ್ಗಮಿಸುವ ಹಾದಿಯಲ್ಲಿವೆ ಎಂಬ ವರದಿಗಳನ್ನು ನಿರಾಕರಿಸಿರುವ ಮಾರುತಿ ಸುಜುಕಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆಂಚಿ ಆಯುಕಾವಾ, ಸಣ್ಣ ಕಾರುಗಳ ಮಾರಾಟ ಮತ್ತೆ ವೃದ್ಧಿಸುವ ನಿರೀಕ್ಷೆ ಇದೆ ಎಂದರು. ಮಾರುಕಟ್ಟೆಯಲ್ಲೀಗ ಎಸ್‌ಯುವಿಗಳು ಶೇ.50ಕ್ಕೂ ಹೆಚ್ಚು ಪಾಲನ್ನು ವಹಿಸಿಕೊಂಡಿವೆ. ಹೀಗಿದ್ದರೂ ಸಣ್ಣ ಕಾರುಗಳು ಮತ್ತೆ ಮಾರುಕಟ್ಟೆಯಲ್ಲಿ ಪ್ರಾಬಲ್ಯ ವಹಿಸುವ ಸಾಧ್ಯತೆ ಇದೆ ಎಂದವರು ಅಂದಾಜಿಸಿದ್ದಾರೆ ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಸಣ್ಣ ಕಾರುಗಳ ಉತ್ಪಾದನೆಗೆ ಹಿನ್ನಡೆಯಾಗಿದೆ. ಆದರೆ ಭಾರತದಲ್ಲಿ ಸಣ್ಣ ಕಾರುಗಳಿಗೆ ಯಾವತ್ತಿಗೂ ಬೇಡಿಕೆ ಇದ್ದೇ ಇದೆ. ಅವುಗಳಿಗೆ ಹೊಸ ಗ್ರಾಹಕರು ಸಿಗಲಿದ್ದಾರೆ ಎಂದರು. ಮಾರುತಿ ಸುಜುಕಿಯು ಎಸ್‌ಯುವಿ ಹಾಗೂ ಇವಿ ಬಗ್ಗೆಯೂ ಯೋಜನೆ ರೂಪಿಸಲಿದೆ ಎಂದರು. ಜಿಡಿಪಿ ಶೇ.9.5 ಬೆಳವಣಿಗೆ ಸಂಭವ ಹೊಸದಿಲ್ಲಿ: ಪ್ರಸಕ್ತ ಸಾಲಿನಲ್ಲಿಶೇ.9.5ರ ಜಿಡಿಪಿ ಬೆಳವಣಿಗೆ ನಿರೀಕ್ಷಿಸಲಾಗಿದೆ ಎಂದು ಆರ್‌ ಬಿಐ ಗವರ್ನರ್‌ ಶಕ್ತಿಕಾಂತದಾಸ್‌ ಅಭಿಪ್ರಾಯಪಟ್ಟಿದ್ದಾರೆ. ಸರಕಾರ ತೆಗೆದುಕೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳಿಂದ ನಿರೀಕ್ಷೆಗಿಂತಲೂ ವೇಗವಾಗಿ ಆರ್ಥಿಕತೆ ಚೇತರಿಸುತ್ತಿದೆ. ಇಂಧನದ ಮೇಲಿನ ತೆರಿಗೆ ಕಡಿತ, ಟೆಲಿಕಾಂ ವಲಯದ ತೆರಿಗೆ ಸುಧಾರಣೆ, ಏರ್‌ ಇಂಡಿಯಾ ಮಾರಾಟ, ಸಾರ್ವಜನಿಕ ವಲಯದ ಕೆಲವು ಬ್ಯಾಂಕ್‌ಗಳ ಮಾರಾಟ, ಪಿಎಲ್‌ಐ ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿವೆ. ಆದ್ದರಿಂದ 2021-22ರಲ್ಲಿ ಶೇ.9.5ರ ಆರ್ಥಿಕ ಬೆಳವಣಿಗೆ ಖಂಡಿತವಾಗಿ ಸಾಧ್ಯ ಎಂಬುದು ನನ್ನ ವಿಶ್ವಾಸ ಎಂದು ದಾಸ್‌ ವಿವರಿಸಿದರು. ಹೀಗಿದ್ದರೂ ಜಾಗತಿಕ ಆರ್ಥಿಕತೆಯ ವಲಯದಲ್ಲಿ ಕೆಲವು ಸಮಸ್ಯೆಗಳಿದ್ದು, ಶೇ. 5.9 ಬೆಳವಣಿಗೆ ನಿರೀಕ್ಷಿಸಲಾಗಿದೆ. ಸೆಮಿಕಂಡಕ್ಟರ್‌ ಕೊರತೆ, ಕಚ್ಚಾ ಸಾಮಾಗ್ರಿಗಳ ಪೂರೈಕೆಯ ಕೊರತೆ, ಬೆಲೆ ಏರಿಕೆಯ ಸಮಸ್ಯೆ ಕಾಡುತ್ತಿದೆ. ಯುರೋಪ್‌, ಏಷ್ಯಾದ ಕೆಲ ದೇಶಗಳು ಈಗಲೂ ಕೋವಿಡ್‌ ಸಮಸ್ಯೆ ವಿರುದ್ಧ ಹೋರಾಡುತ್ತಿವೆ ಎಂದರು. ಆರ್‌ಬಿಐನ ಎರಡು ಯೋಜನೆಗೆ ಚಾಲನೆ ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎರಡು ನೂತನ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಲಿದ್ದಾರೆ. ರಿಟೇಲ್‌ ಡೈರೆಕ್ಟ್ ಸ್ಕೀಮ್‌ ಮತ್ತು ಸಮಗ್ರ ಒಂಬುಡ್ಸ್‌ಮನ್‌ ಯೋಜನೆಗೆ ಪ್ರಧಾನಿಯವರು ಚಾಲನೆ ನೀಡಲಿದ್ದಾರೆ. ರಿಟೇಲ್‌ ಡೈರೆಕ್ಟ್ ಯೋಜನೆಯು ರಿಟೇಲ್‌ ಹೂಡಿಕೆದಾರರಿಗೆ ಸರಕಾರದ ಸಾಲಪತ್ರ, ಬಾಂಡ್‌ ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆಗೆ ಅನುಕೂಲ ಕಲ್ಪಿಸಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಲಪತ್ರಗಳಲ್ಲಿ ಸುಲಭವಾಗಿ ಹೂಡಿಕೆದಾರರು ಹೂಡಿಕೆ ಮಾಡಲು ಅವಕಾಶ ಸಿಗಲಿದೆ. ಒಂಬುಡ್ಸ್‌ಮನ್‌ ಯೋಜನೆಯು ಜನತೆಗೆ ವ್ಯಾಪ್ತಿಯಲ್ಲಿನ ಸಂಸ್ಥೆಗಳು, ಬ್ಯಾಂಕ್‌ಗಳಲ್ಲಿಉಂಟಾಗುವ ತೊಂದರೆಗಳ ವಿರುದ್ಧ ಅಹವಾಲು ಸಲ್ಲಿಸಲು ಇರುವಂಥ ವ್ಯವಸ್ಥೆ. ಒನ್‌ ನೇಶನ್‌-ಒನ್‌ ಒಂಬುಡ್ಸ್‌ಮನ್‌ ಮೂಲಕ ಒಂದು ಇ-ಮೇಲ್‌, ಒಂದು ಅಂಚೆ ವಿಳಾಸ ಮೂಲಕ ಗ್ರಾಹಕರು ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.