ಪನ್ನಾ ಗಣಿಯಲ್ಲಿ 8.22 ಕ್ಯಾರೆಟ್‌ ವಜ್ರ ಪತ್ತೆ ಹಚ್ಚಿದ ಕಾರ್ಮಿಕರು

ಹೀರಾಪುರ ತಾಪರಿಯಾನ್‌ ವಲಯದಲ್ಲಿನ ಗುತ್ತಿಗೆ ಗಣಿಯಲ್ಲಿ ವಜ್ರ ಪತ್ತೆಯಾಗಿದೆ. ರತನ್‌ಲಾಲ್‌ ಪ್ರಜಾಪತಿ ಮತ್ತು ಇತರೆ ಮೂವರು ಕಾರ್ಮಿಕರಿಗೆ ಆ ವಜ್ರಗಳು ಸಿಕ್ಕಿವೆ. ಈ ಮಾಸಾಂತ್ಯಕ್ಕೆ ಅವುಗಳನ್ನು ಹರಾಜಿಗೆ ಇಡಲಾಗುವುದು.

ಪನ್ನಾ ಗಣಿಯಲ್ಲಿ 8.22 ಕ್ಯಾರೆಟ್‌ ವಜ್ರ ಪತ್ತೆ ಹಚ್ಚಿದ ಕಾರ್ಮಿಕರು
Linkup
ಭೋಪಾಲ್‌: ಮಧ್ಯಪ್ರದೇಶದಲ್ಲಿಅಮೂಲ್ಯ ವಜ್ರಕ್ಕಾಗಿ ದಶಕಗಳಿಂದ ನಡೆಯುತ್ತಿದ್ದ ಶೋಧ ಕೊನೆಗೂ ಫಲ ನೀಡಿದೆ. ಪನ್ನಾ ಜಿಲ್ಲೆಯ ಗಣಿಯೊಂದರಲ್ಲಿ ನಾಲ್ವರು ಕಾರ್ಮಿಕರು 8.22 ಕ್ಯಾರೆಟ್‌ ವಜ್ರ ಪತ್ತೆ ಹಚ್ಚಿದ್ದು, ಅದರ ಬೆಲೆ 40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ''ಹೀರಾಪುರ ತಾಪರಿಯಾನ್‌ ವಲಯದಲ್ಲಿನ ಗುತ್ತಿಗೆ ಗಣಿಯಲ್ಲಿ ವಜ್ರ ಪತ್ತೆಯಾಗಿದೆ. ರತನ್‌ಲಾಲ್‌ ಪ್ರಜಾಪತಿ ಮತ್ತು ಇತರೆ ಮೂವರು ಕಾರ್ಮಿಕರಿಗೆ ಆ ವಜ್ರಗಳು ಸಿಕ್ಕಿವೆ. ಈ ಮಾಸಾಂತ್ಯಕ್ಕೆ ಅವುಗಳನ್ನು ಹರಾಜಿಗೆ ಇಡಲಾಗುವುದು. ಹರಾಜಿನಿಂದ ಬಂದ ಲಾಭದಲ್ಲಿ ಸರಕಾರದ ರಾಯಧನ ಕಡಿತ ಮಾಡಿಕೊಂಡು ಉಳಿದ ಹಣವನ್ನು ಗಣಿ ಗುತ್ತಿಗೆದಾರರಿಗೆ ನೀಡಲಾಗುವುದು'' ಎಂದು ಪನ್ನಾ ಜಿಲ್ಲಾಧಿಕಾರಿ ಸಂಜಯ್‌ ಕುಮಾರ್‌ ಮಿಶ್ರಾ ಹೇಳಿದ್ದಾರೆ. ಮಧ್ಯಪ್ರದೇಶದ ಹಲವೆಡೆ ವಜ್ರಗಳ ನಿಕ್ಷೇಪ ಇವೆ ಎಂದು ತಜ್ಞರು ಹೇಳಿದ್ದಾರೆ. ಇದನ್ನು ನಂಬಿ ಕಳೆದ 15 ವರ್ಷಗಳಿಂದ ಪೆನ್ನಾ ಜಿಲ್ಲೆಯ ವಿವಿಧೆಡೆ ಗಣಿಗಾರಿಕೆ ನಡೆದಿದೆ. ''ಇದೇ ಮೊದಲ ಬಾರಿ ಹೀರಾಪುರ ತಪರಿಯಾನ್‌ನ ಸಣ್ಣ ಗಣಿಯಲ್ಲಿವಜ್ರದ ಹರಳುಗಳು ನಮಗೆ ಲಭಿಸಿವೆ. ಕಳೆದ ಆರು ತಿಂಗಳಿಂದ ನಾವಿಲ್ಲಿ ಗಣಿಗಾರಿಕೆ ಮಾಡುತ್ತಿದ್ದೇವೆ. ಈಗ 8.22 ಕ್ಯಾರೆಟ್‌ ವಜ್ರ ಲಭಿಸಿದೆ. ಇನ್ನಷ್ಟು ಹರಳುಗಳು ಅಲ್ಲಿಇರುವ ಸಾಧ್ಯತೆ ಇದೆ'' ಎಂದು ಗಣಿಗಾರಿಕೆಯಲ್ಲಿನಿರತರಾಗಿರುವ ರಘುವೀರ್‌ ಪ್ರಜಾಪತಿ ಆಶಾಭಾವ ವ್ಯಕ್ತಪಡಿಸಿದ್ದಾರೆ.