ಮನೆಗೆ ನುಗ್ಗಲು ಯತ್ನಿಸಿದ ಆಳೆತ್ತರದ ಸರ್ಪವನ್ನು ತಡೆದ ಮಾರ್ಜಾಲ: ಸ್ವಾಮಿನಿಷ್ಠೆ ತೋರಿ ಒಡಿಶಾ ಕುಟುಂಬಸ್ಥರ ರಕ್ಷಣೆ!

ಒಡಿಶಾದಲ್ಲಿ ಮುದ್ದಿನ ಬೆಕ್ಕೊಂದು, ಮನೆಗೆ ನುಗ್ಗಲು ಯತ್ನಿಸಿದ ಕಾಳಿಂಗ ಸರ್ಪವನ್ನು ತಡೆದು ಮಾಲೀಕರ ಜೀವ ರಕ್ಷಣೆ ಮಾಡಿ, ಸ್ವಾಮಿನಿಷ್ಠೆಯಲ್ಲಿ ತಾನೇನೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಭುವನೇಶ್ವರ ಹೊರ ವಲಯದಲ್ಲಿನಡೆದ ಈ ಬೆಕ್ಕಿನ ಕಾವಲು ಕಸರತ್ತು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನರ ಮೆಚ್ಚುಗೆ ಗಳಿಸಿದೆ.

ಮನೆಗೆ ನುಗ್ಗಲು ಯತ್ನಿಸಿದ ಆಳೆತ್ತರದ ಸರ್ಪವನ್ನು ತಡೆದ ಮಾರ್ಜಾಲ: ಸ್ವಾಮಿನಿಷ್ಠೆ ತೋರಿ ಒಡಿಶಾ ಕುಟುಂಬಸ್ಥರ ರಕ್ಷಣೆ!
Linkup
ಹೊಸದಿಲ್ಲಿ: ಸ್ವಾಮಿನಿಷ್ಠೆಯಲ್ಲಿ ನಾಯಿಗಳೇ ಶ್ರೇಷ್ಠ ಎನ್ನುವ ತಿಳಿವಳಿಕೆ ಸಾಮಾನ್ಯ. ಆದರೆ ಒಡಿಶಾದಲ್ಲಿ ಮುದ್ದಿನ ಬೆಕ್ಕೊಂದು, ಮನೆಗೆ ನುಗ್ಗಲು ಯತ್ನಿಸಿದ ಕಾಳಿಂಗ ಸರ್ಪವನ್ನು ತಡೆದು ಮಾಲೀಕರ ಜೀವ ರಕ್ಷಣೆ ಮಾಡಿ, ಸ್ವಾಮಿನಿಷ್ಠೆಯಲ್ಲಿ ತಾನೇನೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಹೊರ ವಲಯದಲ್ಲಿನಡೆದ ಈ ಬೆಕ್ಕಿನ ಕಾವಲು ಕಸರತ್ತು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನರ ಮೆಚ್ಚುಗೆ ಗಳಿಸಿದೆ. ಅದು ಮನೆ ಒಡೆಯರು ಮನೆಯೊಳಗೆ ತಣ್ಣಗೆ ಕುಳಿತಿದ್ದ ತಂಪು ಘಳಿಗೆ. ಅತ್ತ ಸಮೀಪದ ಪೊದೆಯಿಂದ ಆಳೆತ್ತರದ ಕಾಳಿಂಗ ಬುಸುಗುಡುತ್ತಾ ಹರಿದು ಮನೆ ಹೊಸ್ತಿಲ ಬಳಿ ಬಂತು. ಅದರ ಸದ್ದು ಆಲಿಸಿ ಚೆಂಗನೆ ನೆಗೆದು ಅಡ್ಡ ಸಾರಿದ ಶ್ವೇತ ವರ್ಣದ ಬೆಕ್ಕು, ಕೈ ಎತ್ತಿ ಪಂಜಾ ಬೀಸಿತು. ದಿಢೀರ್‌ ಎದುರಾದ ಆಗಂತುಕ ಕಾವಲುಗಾರನಿಂದ ಕಕ್ಕಾಬಿಕ್ಕಿಯಾಗುವ ಸರ್ಪ, ದಿಗ್ಗನೆ ಹೆಡೆ ಎತ್ತಿ ಬುಸ್‌ ಎಂದು ಬೆದರಿಸಿತು. ಅದಕ್ಕೆಲ್ಲ ಬಗ್ಗದ ತಾರಕ ಸ್ವರದಲ್ಲಿ ಅರಚಿ, ಮತ್ತೊಮ್ಮೆ ಜೋರಾಗಿ ಪಂಜಾ ಬೀಸಿತು. ಅರ್ಧತಾಸಿನ ಬಳಿಕ ಇವುಗಳ ಗದ್ದಲ ಕೇಳಿದ ಮಾಲೀಕರು ಹೊರಬಂದು ಸರ್ಪ ರಕ್ಷಕರಿಗೆ ಕರೆ ಮಾಡಿದರು. ಹಾವು ಉರಗ ರಕ್ಷಕರ ಚೀಲ ಸೇರಿದ ಬಳಿಕವೇ ಬೆಕ್ಕು ತಾನು ನಿಂತ ಸ್ಥಳದಿಂದ ಕದಲಿ ಮಾಲೀಕರ ಬಳಿ ತೆರಳಿತು.