ಕ್ರಿಪ್ಟೋ ವಹಿವಾಟು ಸುರಕ್ಷಿತವೇ? ಡಿಜಿಟಲ್‌ ಕರೆನ್ಸಿ ಕುರಿತು ವಿಶ್ವದ ಟಾಪ್‌-10 ಕಾನೂನು ಹೋರಾಟಗಳಿವು!

ಕ್ರಿಪ್ಟೋಕರೆನ್ಸಿ ಮೇಲಿನ ಹೂಡಿಕೆ ಅತಿ ಹೆಚ್ಚು ಲಾಭ ತಂದುಕೊಡಬಲ್ಲದು. ಆದರೆ, ಕ್ರಿಪ್ಟೋ ನಾಣ್ಯಗಳ ಮೇಲಿನ ಹೂಡಿಕೆ ಸಂಪೂರ್ಣ ಸುರಕ್ಷಿತವೇ ಎಂಬ ಪ್ರಶ್ನೆಗೆ ಇಲ್ಲ ಎಂದೇ ಹೇಳಬೇಕು. ಈ ಕುರಿತ ಕೆಲವು ಪ್ರಮುಖ ಕಾನೂನು ಹೋರಾಟದ ಪ್ರಕರಣಗಳ ಮಾಹಿತಿ ಇಲ್ಲಿದೆ.

ಕ್ರಿಪ್ಟೋ ವಹಿವಾಟು ಸುರಕ್ಷಿತವೇ? ಡಿಜಿಟಲ್‌ ಕರೆನ್ಸಿ ಕುರಿತು ವಿಶ್ವದ ಟಾಪ್‌-10 ಕಾನೂನು ಹೋರಾಟಗಳಿವು!
Linkup
ಹೊಸದಿಲ್ಲಿ: ಮೇಲಿನ ಹೂಡಿಕೆ ಅತಿ ಹೆಚ್ಚು ಲಾಭ ತಂದುಕೊಡಬಲ್ಲದು. ಆದರೆ, ಕ್ರಿಪ್ಟೋ ನಾಣ್ಯಗಳ ಮೇಲಿನ ಹೂಡಿಕೆ ಸಂಪೂರ್ಣ ಸುರಕ್ಷಿತವೇ ಎಂಬ ಪ್ರಶ್ನೆಗೆ ಇಲ್ಲ ಎಂದೇ ಹೇಳಬೇಕು. ಕೆಲವೊಮ್ಮೆ ಕ್ರಿಪ್ಟೋ ಹೂಡಿಕೆ ದೊಡ್ಡ ಆಪತ್ತನ್ನೇ ಸೃಷ್ಟಿಸಬಹುದು. ಈ ಕುರಿತ ಕೆಲವು ಕಾನೂನು ಹೋರಾಟದ ಪ್ರಕರಣಗಳ ಮಾಹಿತಿ ಇಲ್ಲಿದೆ. ಕಳೆದ ಕೆಲವೇ ವರ್ಷಗಳಲ್ಲಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಅದ್ಭುತ ಬೆಳವಣಿಗೆ ಸಾಧಿಸಿರುವುದೇನೋ ನಿಜ. ಇತ್ತೀಚೆಗೆ ಡಿಜಿಟಲ್ ಸ್ವತ್ತುಗಳಲ್ಲಿ ಹೂಡಿಕೆ ಮಾಡುವವರೂ ಹೆಚ್ಚಾಗಿದ್ದಾರೆ. ಭವಿಷ್ಯದಲ್ಲಿ ಕ್ರಿಪ್ಟೋಕರೆನ್ಸಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ಸ್ಥಳೀಯ ಕರೆನ್ಸಿಗಳ ಸ್ಥಾನವನ್ನು ಪೂರ್ಣವಾಗಿ ಬದಲಿಸಬಹುದು ಎನ್ನುತ್ತಿದ್ದಾರೆ ಮಾರುಕಟ್ಟೆ ತಜ್ಞರು. ಕ್ರಿಪ್ಟೋ ನಾಣ್ಯಗಳು ನೀಡುವ ತ್ವರಿತ ವಹಿವಾಟು ಸೌಲಭ್ಯಕ್ಕೆ ಹೋಲಿಸಿದರೆ ಇದರಿಂದಾಗುವ ಅಡ್ಡಪರಿಣಾಮಗಳು ಗೌಣವಾಗಿಬಿಡುತ್ತವೆ. ಹಾಗೆಂದ ಮಾತ್ರಕ್ಕೆ ಕ್ರಿಪ್ಟೋ ನಾಣ್ಯಗಳ ಮೇಲಿನ ಹೂಡಿಕೆ ಪೂರ್ಣ ಸುರಕ್ಷಿತವೇನಲ್ಲ. ವಿಶ್ವಾದ್ಯಂತ ಕ್ರಿಪ್ಟೋಕರೆನ್ಸಿ ವಲಯಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ವಿಶ್ವಾದ್ಯಂತ ಗನಸೆಳೆದ ಟಾಪ್‌ 10 ಪ್ರಕರಣಗಳ ಮಾಹಿತಿ ಇಲ್ಲಿದೆ. ನ್ಯೂಯಾರ್ಕ್‌ನ ಅಟಾರ್ನಿ ಜನರಲ್ ಕಚೇರಿ v/s ಬಿಟ್‌ಫಿನ್‌ಎಕ್ಸ್ (Bitfinex): ಅಮೆರಿಕದ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಲ್ಲಿ ಒಂದಾದ ಬಿಟ್‌ಫಿನ್‌ಎಕ್ಸ್‌ ಹೂಡಿಕೆದಾರರನ್ನು ದಾರಿ ತಪ್ಪಿಸುತ್ತಿದೆ ಎಂಬ ಆರೋಪ ಎದುರಿಸುತ್ತಿದೆ. ಈ ಪ್ರಕರಣ ಕುರಿತಂತೆ ನ್ಯೂಯಾರ್ಕ್‌ನ ಆಫೀಸ್‌ ಆಫ್‌ ದಿ ಅಟಾರ್ನಿ ಜನರಲ್ (ಒಎಜಿ) ತನಿಖೆ ನಡೆಸುತ್ತಿದೆ. ಈ ಎಕ್ಸ್‌ಚೇಂಜ್‌ಗಳು ನೂರಾರು ಮಿಲಿಯನ್‌ ಡಾಲರ್‌ ಮೊತ್ತದ ನಷ್ಟವನ್ನು ಮುಚ್ಚಿಹಾಕಿವೆ. ಅಲ್ಲದೆ, ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿವೆ ಎಂಬ ಆರೋಪಗಳಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮುಂದುವರಿಸುವಂತೆ ನ್ಯೂಯಾರ್ಕ್‌ನ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರು ಆದೇಶಿಸಿದ್ದಾರೆ. ಆದರೆ, ಕ್ರಿಪ್ಟೋ ಕಂಪನಿಗಳು ನ್ಯಾಯಾಲಯದ ಈ ಆದೇಶಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿವೆ. ಎಸ್ಇಸಿ v/s ಟ್ರೆಂಡನ್ ಶೇವರ್ಸ್: ಬಿಟ್ ಕಾಯಿನ್ ಸೇವಿಂಗ್ಸ್ ಅಂಡ್ ಟ್ರಸ್ಟ್ (ಬಿಟಿಸಿಎಸ್ಟಿ) ನ ಆಯೋಜಕರು, ಹಲವು ಮಂದಿಯಿಂದ ಸಾಲ ಪಡೆದು ಬಿಟ್ ಕಾಯಿನ್‌ಗಳಲ್ಲಿ ಅಕ್ರಮ ಹೂಡಿಕೆ ಮಾಡಿರುವ ಕುರಿತ ಪ್ರಕರಣವು ಎಸ್ಇಸಿ ಕಾನೂನು ಪರಿಶೀಲನೆಗೆ ಒಳಪಟ್ಟಿದೆ. ಈ ಪ್ರಕರಣವು ಭವಿಷ್ಯದಲ್ಲಿ ಬಿಟ್‌ಕಾಯಿನಿಂದ ಭಾರೀ ಪ್ರಮಾಣದ ಹಾನಿಗಳು ಹೇಗೆ ಸಂಭವಿಸಲಿವೆ ಎಂಬುದರ ಬಗ್ಗೆ ಪೂರ್ಣ ಒಳನೋಟ ಒದಗಿಸಲಿದೆ. ಬಿಟ್‌ಕಾಯಿನ್ ವಹಿವಾಟಿನಲ್ಲಿ ಆಯಾ ದಿನದ ಬೆಲೆಯನ್ನು ಮಾತ್ರವೇ ಪರಿಗಣಿಸಲಾಗುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು. ದಿ ಸ್ಟೇಟ್ ಆಫ್ ಫ್ಲೋರಿಡಾ v/s ಎಸ್ಪಿನೋಜಾ: ಹಣ ವರ್ಗಾವಣೆ ಶುಲ್ಕವನ್ನು ವಜಾಗೊಳಿಸುವಂತೆ ಕೋರಿ 2021ರ ಆಗಸ್ಟ್‌ನಲ್ಲಿ ಫ್ಲೋರಿಡಾ ನಿವಾಸಿ ಪ್ಯಾಸ್ಕಲ್ ರೀಡ್ ಎಂಬುವವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ಆಧಾರದ ಮೇಲೆ ಬಿಟ್ ಕಾಯಿನ್ ಫೌಂಡೇಶನ್ ಅಮಿಕಸ್ ಕ್ಯೂರಿ ದಾವೆ ಸಲ್ಲಿಸಿತ್ತು. ಪ್ಯಾಸ್ಕಲ್ ರೀಡ್ ಮತ್ತು ಮಿಚೆಲ್ ಅನ್ಬರ್ ಎಸ್ಪಿನೋಜಾ ಅವರನ್ನು ಸ್ಟಿಂಗ್‌ ಆಪರೇಷನ್‌ ನಡೆಸುವ ಮೂಲಕ ಬಂಧಿಸಲಾಗಿತ್ತು. ಈ ಇಬ್ಬರು ಆರೋಪಿಗಳು ರಹಸ್ಯ ಏಜೆಂಟ್‌ಗಳೊಂದಿಗೆ ನಕಲಿ ವಹಿವಾಟು ನಡೆಸುವ ಮೂಲಕ 30,000 ಡಾಲರ್‌ ಮೊತ್ತದ ಹಣವನ್ನು ಬಿಟ್‌ಕಾಯಿನ್ ಆಗಿ ಪರಿವರ್ತಿಸಿದ್ದರು. ಇಬ್ಬರ ಮೇಲೂ ಮನಿ ಲಾಂಡರಿಂಗ್ ಕಾನೂನಿಡಿ ಪ್ರಕರಣ ದಾಖಲಾಗಿತ್ತು. ಆದರೆ, ಬಿಟ್ ಕಾಯಿನ್ ನಿಜವಾದ ಹಣವಲ್ಲದ ಕಾರಣ ಪ್ರಕರಣವನ್ನು ವಜಾಗೊಳಿಸಲಾಗಿದೆ. ಒರಾಕಲ್ v/s ಕ್ರಿಪ್ಟೋಆರಾಕಲ್: ಸಾಫ್ಟ್‌ವೇರ್ ದೈತ್ಯ 'ಒರಾಕಲ್' ಬ್ಲಾಕ್‌ಚೈನ್ ಸ್ಟಾರ್ಟ್ಅಪ್ 'ಕ್ರಿಪ್ಟೋಆರಾಕಲ್' ವಿರುದ್ಧ ಮೊಕದ್ದಮೆ ದಾಖಲಿಸಿದೆ. ಟ್ರೇಡ್‌ಮಾರ್ಕ್ ಕಾನೂನು ಉಲ್ಲಂಘನೆ ಮತ್ತು ಸೈಬರ್‌ಕ್ವಾಟಿಂಗ್ ಆರೋಪದೊಂದಿಗೆ ಪ್ರಕರಣ ದಾಖಲಿಸಿದೆ. ದೂರಿನ ಪ್ರಕಾರ, ಸ್ಟಾರ್ಟ್ಅಪ್ ತನ್ನ ಖ್ಯಾತಿಯನ್ನು ಹೆಚ್ಚಿಸಲು ಒರಾಕಲ್ ಹೆಸರನ್ನು ಬಳಸಿದೆ. ಟೆಕ್ ದೈತ್ಯ ಒರಾಕಲ್‌ ಆರಂಭದಲ್ಲಿ ನ್ಯಾಯಾಲಯದ ಹೊರಗೆ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿತು. ಆದರೆ ಕ್ರಿಪ್ಟೋಆರಾಕಲ್‌ ತನ್ನ ಟ್ರೇಡ್‌ಮಾರ್ಕ್‌ ಉಳಿಸಿಕೊಳ್ಳುವ ಸಲುವಾಗಿ ಪ್ರಕರಣ ದಾಖಲಿಸಿದೆ. ದಕ್ಷಿಣ ಕೊರಿಯಾದ ಕ್ರಿಪ್ಟೋ ಎಕ್ಸ್ಚೇಂಜ್ ಬಿಟ್‌ಥಂಬ್‌ ವಿರುದ್ಧ ವಂಚನೆ ಪ್ರಕರಣ: ದಕ್ಷಿಣ ಕೊರಿಯಾದ ಕ್ರಿಪ್ಟೋ ಎಕ್ಸ್‌ಚೇಂಜ್‌ ಅಂಗಸಂಸ್ಥೆ ಬಿಟ್‌ಥಂಬ್‌ ವಿರುದ್ಧ ವಂಚನೆಯ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಅಲ್ಲದೆ ಹಾಂಗ್ ಕಾಂಗ್‌ನಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿದೆ. ಇದು ಥಾಯ್‌ಲ್ಯಾಂಡ್‌ನಲ್ಲಿ ನೂತನ ಎಕ್ಸ್‌ಚೇಂಜ್‌ ತೆರೆಯುವ ಯೋಜನೆಯನ್ನು ಘೋಷಿಸಿದಾಗ ಈ ಪ್ರಕಟಣೆಯನ್ನು ದುರ್ಬಳಕೆ ಮಾಡಿಕೊಂಡಿತ್ತು. ಜನರು ತನ್ನ BXA ಕ್ರಿಪ್ಟೋ ನಾಣ್ಯದಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿತ್ತು ಎಂಬ ಆರೋಪಗಳಿವೆ. ಅಂತಿಮವಾಗಿ ಬಿಟ್‌ಥಂಬ್‌ ಕಾನೂನು ಹೋರಾಟದಲ್ಲಿ ಸೋತಿತು. 100 ಶತಕೋಟಿ ಡಾಲರ್‌ ಪರಿಹಾರ ಪಾವತಿಸಲು ನ್ಯಾಯಾಲಯ ತೀರ್ಪು ನೀಡಿತು. ಹ್ಯಾರಿಸನ್ ಹೈನ್ಸ್ v/s ಜೋಸೆಫ್ ಲುಬಿನ್: ಈ ಪ್ರಕರಣದಲ್ಲಿ ತನ್ನ ಮಾಜಿ ವ್ಯಾಪಾರ ಪಾಲುದಾರ ಜೋಸೆಫ್ ಲುಬಿನ್ ನನ್ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿರುವುದಾಗಿ ಕನ್ಸೆನ್ಸಿಸ್ ಇನ್ಕ್ಯುಬೇಟೆಡ್ ಸ್ಟಾರ್ಟ್ ಅಪ್ ಸಂಸ್ಥಾಪಕ ಹ್ಯಾರಿಸನ್ ಹೈನ್ಸ್‌ ಆರೋಪಿಸಿದ್ದರು. ಅಲ್ಲದೆ ಲುಬಿನ್‌ಗೆ 13 ಮಿಲಿಯನ್ ಡಾಲರ್‌ ನೀಡಿರುವುದಾಗಿಯೂ ದೂರಿನಲ್ಲಿ ತಿಳಿಸಿದ್ದರು. ಈ ಪ್ರಕರಣವನ್ನು ನ್ಯೂಯಾರ್ಕ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಆರೋಪಿಯು ಒಪ್ಪಂದದ ಉಲ್ಲಂಘನೆ, ವಂಚನೆ ಮೊದಲಾದ ಆರೋಪಗಳೊಂದಿಗೆ ಲುಬಿನ್ ಸಂಪರ್ಕ ಹೊಂದಿದ್ದಾರೆ ಎಂದು ಪ್ರಕರಣದಲ್ಲ ಉಲ್ಲೇಖಿಸಲಾಗಿದೆ. ಅಮೆರಿಕ v/s ರಾಸ್ ವಿಲಿಯಂ ಉಲ್ಬ್ರಿಚ್ಟ್: ಈ ಪ್ರಕರಣದಲ್ಲಿ ಉಲ್ಬ್ರಿಚ್ ನಿಷ್ಕ್ರಿಯವಾದ ಆನ್‌ಲೈನ್ ಬ್ಲಾಕ್‌ ಮಾರ್ಕೆಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. 2014ರ ಫೆಬ್ರವರಿಯಲ್ಲಿ, ಕಂಪ್ಯೂಟರ್ ಹ್ಯಾಕಿಂಗ್, ಮಾದಕವಸ್ತು ಕಳ್ಳಸಾಗಣೆ, ಮನಿ ಲಾಂಡರಿಂಗ್ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳ ಆರೋಪಗಳನ್ನು ಈತನ ಮೇಲೆ ಹೊರಿಸಲಾಗಿತ್ತು. ಈತ ತನ್ನ ಎಲ್ಲಾ ವಹಿವಾಟುಗಳಿಗೆ ಬಿಟ್‌ಕಾಯಿನ್ ಬಳಸಿದ್ದಾನೆ ಎಂದೂ ಆರೋಪಿಸಲಾಗಿತ್ತು. ಬಿಟ್‌ಕಾಯಿನ್ ನಿಜವಾದ ಹಣವಲ್ಲ ಎಂಬ ಒಂದೇ ಕಾರಣಕ್ಕಾಗಿ ಆತನನ್ನು ತಪ್ಪಿತಸ್ಥನಲ್ಲ ಎಂದು ಪ್ರತಿಪಾದಿಸಲಾಯಿತು. ಭಾರತದ ಸುಪ್ರೀಂ ಕೋರ್ಟ್ v/s ಭಾರತೀಯ ರಿಸರ್ವ್ ಬ್ಯಾಂಕ್: 2018ರ ಜುಲೈನಲ್ಲಿ ಆರ್‌ಬಿಐ ಕ್ರಿಪ್ಟೋ ಕರೆನ್ಸಿ ನಿಷೇಧಕ್ಕೆ ಮುಂದಾದಾಗ ಸುಪ್ರೀಂ ಕೋರ್ಟ್ ಬಹಿರಂಗವಾಗಿ ಟೀಕಿಸಿತ್ತು. ಕ್ರಿಪ್ಟೋಕರೆನ್ಸಿ ನಿಷೇಧ ಕುರಿತು ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಆರ್‌ಬಿಐಗೆ ಆದೇಶಿಸಿತ್ತು. ಈ ಪ್ರಕರಣ ಬಹಳ ಸ್ವಾರಸ್ಯಕರವಾಗಿ ನಡೆಯಿತು. ಆದರೆ ಕೇಂದ್ರ ಸರ್ಕಾರವು ಕ್ರಿಪ್ಟೋಕರೆನ್ಸಿ ಕುರಿತಂತೆ ಮಸೂದೆ ತರಲು ಮುಂದಾಗಿದೆ. ಈ ಮಸೂದೆ ಕುರಿತಂತೆ ಬಹುನೀರೀಕ್ಷೆ ಇದೆ. ಸ್ಯಾಂಟಾಂಡರ್ ಬ್ಯಾಂಕ್ v/s ಮರ್ಕಾಡೊ ಬಿಟ್‌ಕಾಯಿನ್: ಸ್ಯಾಂಟಾಂಡರ್ ಬ್ಯಾಂಕ್‌ನಲ್ಲಿ ತೆರೆಯಲಾಗಿದ್ದ ಮರ್ಕಾಡೋ ಎಕ್ಸ್‌ಚೇಂಜ್‌ನ ಖಾತೆಯನ್ನು ಲಾಕ್ ಮಾಡಿ ಮತ್ತು ಮುಚ್ಚಲಾಗಿತ್ತು. ಇದರ ಪರಿಣಾಮ ಮರ್ಕಾಡೊ ಬಿಟ್‌ಕಾಯಿನ್‌, ಸ್ಯಾಂಟಾಂಡರ್ ಬ್ಯಾಂಕ್‌ ವಿರುದ್ಧ ಮೊಕದ್ದಮೆ ಹೂಡಿತು. ಸ್ಪ್ಯಾನಿಷ್ ಬ್ಯಾಂಕ್ ಪ್ರಾಥಮಿಕವಾಗಿ ನ್ಯಾಯಾಲಯದ ತೀರ್ಪಿಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿತ್ತು. ಆದರೆ, ನಂತರ ನ್ಯಾಯಾಲಯದ ಆದೇಶದಂತೆ ದಂಡ ಪಾವತಿಸಲು ಒಪ್ಪಿಕೊಂಡಿತು. ಯುಎಸ್ ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ) v/s ಬಿಟ್‌ಕಾಯಿನ್ ಫಂಡಿಂಗ್ ಟೀಮ್: ಅಮೆರಿಕದ ಎಫ್‌ಟಿಸಿ ನ್ಯಾಯಾಲಯದ ಆದೇಶದ ಮೂಲಕ ಬಿಟ್ ಕಾಯಿನ್ ಫಂಡಿಂಗ್ ಟೀಂನ ಖಾತೆಗಳನ್ನು ಮಾರ್ಚ್ 2018 ರಲ್ಲಿ ಫ್ರೀಜ್ ಮಾಡಿತ್ತು. ಇದು ಹೂಡಿಕೆದಾರರನ್ನು ದಾರಿ ತಪ್ಪಿಸುತ್ತಿದೆ ಎಂಬ ಆರೋಪದ ಮೇಲೆ ಈ ಕ್ರಮ ಕಯಗೊಂಡಿತ್ತು. ಆದರೆ, ಎಫ್‌ಟಿಸಿ ಸುಮಾರು 1 ಮಿಲಿಯನ್‌ ಡಾಲರ್‌ನಷ್ಟು ಶುಲ್ಕ ಪಾವತಿಸುವುದಾಗಿ ಘೋಷಿಸಿತ್ತು.