ನಟಿ ಸಮಂತಾ ಪರವಾಗಿ ತೀರ್ಪು ನೀಡಿದ ಹೈದರಾಬಾದ್ ನ್ಯಾಯಾಲಯ

ನಟಿ ಸಮಂತಾ ಅವರು ಕೆಲ ಯುಟ್ಯೂಬ್ ಚಾನೆಲ್‌ಗಳು ಇಲ್ಲಸಲ್ಲದ ಆರೋಪ, ಆಧಾರರಹಿತ ಸುಳ್ಳು ಹೇಳಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಆದೇಶ ನೀಡಿದ್ದು, ಆ ವಿಡಿಯೋಗಳನ್ನು ಡಿಲಿಟ್ ಮಾಡುವಂತೆ ಹೇಳಿದೆ.

ನಟಿ ಸಮಂತಾ ಪರವಾಗಿ ತೀರ್ಪು ನೀಡಿದ ಹೈದರಾಬಾದ್ ನ್ಯಾಯಾಲಯ
Linkup
ತನ್ನ ಬಗ್ಗೆ ಸುಳ್ಳು, ಇಲ್ಲಸಲ್ಲದ ಆರೋಪ ಮಾಡಿರುವ ವಿಡಿಯೋಗಳನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಆರೋಪಿಸಿ ನಟಿ ಹೈದರಾಬಾದ್ ಕೋರ್ಟ್ ಮೆಟ್ಟಿಲೇರಿದ್ದರು. ವೈದ್ಯ ಸಿಎಲ್ ವೆಂಕಟ್ ರಾವ್ ಎನ್ನುವವರು ಆಧಾರರಹಿತ, ಸುಳ್ಳು ವಿಡಿಯೋ ಮಾಡಿ ಸಮಂತಾರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಸಮಂತಾ ಅವರು ನಾಗ ಚೈತನ್ಯರಿಂದ ವಿಚ್ಛೇದನ ಪಡೆಯುತ್ತಿದ್ದಂತೆ ಸಾಕಷ್ಟು ವದಂತಿಗಳು, ಅಂತೆ-ಕಂತೆ ಪುರಾಣಗಳು ಹುಟ್ಟಿಕೊಂಡವು. ಅದಕ್ಕೂ ಮುನ್ನ ಸಮಂತಾ-ನಾಗ ಚೈತನ್ಯ ವಿಚ್ಛೇದನ ಪಡೆಯುತ್ತಿರುವುದು ಸತ್ಯವೋ-ಸುಳ್ಳೋ ಎಂಬ ಚರ್ಚೆಯೂ ನಡೆಯಿತು, ಅದಕ್ಕೆ ಕಾರಣಗಳನ್ನು ಕೂಡ ಕೆಲವರು ನೀಡಿದರು. ಈ ಎಲ್ಲ ಬೆಳವಣಿಗೆಗಳನ್ನು ನೋಡಿದ ನಂತರದಲ್ಲಿ ಸಮಂತಾರ ವ್ಯಕ್ತಿತ್ವಕ್ಕೆ ಧಕ್ಕೆ ತರುವ, ಸುಳ್ಳು ಹೇಳುವ ಕೆಲ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆಯಂತೆ. ಅದು ಇನ್ನಷ್ಟು ಸಮಂತಾರನ್ನು ಬೇಸರಕ್ಕೆ ತಳ್ಳಿತ್ತು. ಸಮಂತಾರ ಬಗ್ಗೆ ಆರೋಪ ಮಾಡಿರುವ, ಆಧಾರರಹಿತ ಕಂಟೆಂಟ್‌ ಹೊಂದಿರುವ ವಿಡಿಯೋಗಳನ್ನು ಸಂಪೂರ್ಣವಾಗಿ ಯುಟ್ಯೂಬ್‌ ಚಾನೆಲ್‌ನಿಂದ ಡಿಲಿಟ್ ಮಾಡುವಂತೆ ಹೈದರಾಬಾದ್ ಕೋರ್ಟ್ ಸಮಂತಾ ಪರ ತೀರ್ಪು ನೀಡಿದೆ. ಆಧಾರರಹಿತ ಆರೋಪಗಳನ್ನು ಮಾಡುವ ವಿಡಿಯೋ ಅಪ್‌ಲೋಡ್ ಮಾಡಬೇಡಿ ಎಂದು ಕೋರ್ಟ್ ಆದೇಶ ನೀಡಿದೆ. ಅದಕ್ಕೂ ಮೊದಲು ಕೋರ್ಟ್ ಸಮಂತಾ ಅರ್ಜಿ ವಿಚಾರಣೆ ನಡೆಸಿತ್ತು. ಸೆಲೆಬ್ರಿಟಿಗಳು ಅವರ ವೈಯಕ್ತಿಕ ಮಾಹಿತಿ ಹಂಚಿಕೊಂಡು ನಂತರ ಮಾನನಷ್ಟ ಮೊಕದ್ದಮೆ ಹೂಡುವುದು ಸರಿಯಲ್ಲ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಅದನ್ನು ಸ್ವೀಕರಿಸಲು ಸಿದ್ಧರಿಲ್ಲದ ಸಮಂತಾ ತನ್ನ ಪರ ವಕೀಲರ ಮೊರೆ ಹೋದರು. ಆ ವೇಳೆ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಶಿಲ್ಪಾ ಶೆಟ್ಟಿ ಕೂಡ ಮಾನನಷ್ಟ ಮೊಕದ್ದಮೆ ಹೂಡಿರುವ ಬಗ್ಗೆಯೂ ಸಮಂತಾ ವಕೀಲರು ಹೇಳಿದ್ದರು. ಕೆಲ ದಿನಗಳ ಹಿಂದೆ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ್ದರು. "ನನ್ನ ಬಗ್ಗೆ ಹಲವು ರೀತಿಯ ವದಂತಿ ಹಬ್ಬಿವೆ. ನನಗೆ ಬೇರೆಯವರೊಂದಿಗೆ ಸಂಬಂಧ ಇತ್ತು, ಮಕ್ಕಳು ಬೇಕಿರಲಿಲ್ಲ, ನಾನು ಅವಕಾಶವಾದಿ, ಗರ್ಭಪಾತ ಮಾಡಿಸಿಕೊಂಡಿದ್ದೇನೆ ಅಂತೆಲ್ಲ ಹೇಳುತ್ತಿದ್ದಾರೆ. ಆದರೆ ಈ ವದಂತಿ ನಿಜವಲ್ಲ, ವಿಚ್ಛೇದನವೇ ಬೇಸರ ಮೂಡಿಸುತ್ತದೆ. ಇದರಿಂದ ಹೊರಬರಲು ಸಮಯ ಕೊಡಿ. ವೈಯಕ್ತಿಕವಾಗಿ ಈ ರೀತಿ ಮಾಡುವುದರಿಂದ ಇನ್ನಷ್ಟು ಮನಸ್ಸಿಗೆ ನೋವುಂಟು ಮಾಡುತ್ತದೆ. ಆದರೆ ಈ ರೀತಿಯ ದಾಳಿಯಿಂದ ನನ್ನನ್ನು ಏನೂ ಮಾಡಲಾಗದು. ಇದಕ್ಕೆ ಅವಕಾಶ ಕೊಡೋದಿಲ್ಲ" ಎಂದು ಸಮಂತಾ ಹೇಳಿದ್ದರು. ಟ್ರಾವೆಲ್ ಮಾಡುತ್ತಿರುವ ಸಮಂತಾ ಅ.2 ರಂದು ತಾವು ದೂರಾಗುತ್ತಿರುವ ವಿಷಯವನ್ನು ನಟಿ ಸಮಂತಾ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಹೇಳಿದ್ದರು. ಇದರಿಂದ ಅವರ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಸಮಂತಾ ಹಾಗೂ ನಾಗ ಚೈತನ್ಯ ಅವರು ಸದ್ಯ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ, ಅದರಲ್ಲೂ ಸಮಂತಾ ಸಿಕ್ಕಾಪಟ್ಟೆ ಟ್ರಾವೆಲ್ ಮಾಡುತ್ತಿದ್ದಾರೆ. ನಾಗ ಚೈತನ್ಯ ಸದ್ಯ 'ಲವ್ ಸ್ಟೋರಿ' ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.