ಶನಿವಾರವೂ ಪೆಟ್ರೋಲ್, ಡೀಸೆಲ್ ದರ ಏರಿಕೆ; ನಿಮ್ಮ ನಗರದಲ್ಲಿ ಎಷ್ಟಿದೆ ಇಂದಿನ ದರ?
ಶನಿವಾರವೂ ಪೆಟ್ರೋಲ್, ಡೀಸೆಲ್ ದರ ಏರಿಕೆ; ನಿಮ್ಮ ನಗರದಲ್ಲಿ ಎಷ್ಟಿದೆ ಇಂದಿನ ದರ?
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಪೆಟ್ರೋಲ್ ದರ 37 ಪೈಸೆ ಏರಿಕೆಯಾಗಿದ್ದು 112.79 ರೂ.ಗೆ ಹೆಚ್ಚಳವಾಗಿದೆ. ಡೀಸೆಲ್ ದರವೂ 37 ಪೈಸೆ ಹೆಚ್ಚಳವಾಗಿದ್ದು 103.72 ರೂ.ಗೆ ಏರಿಕೆಯಾಗಿದೆ.
ಬೆಂಗಳೂರು: ದೇಶದ ತೈಲ ಮಾರಾಟ ಕಂಪನಿಗಳು ಶನಿವಾರವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿವೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ತಲಾ 35 ಪೈಸೆ ತುಟ್ಟಿಯಾಗಿದ್ದು, ಲೀಟರ್ ಪೆಟ್ರೋಲ್ ದರ 108.99 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರ ಲೀಟರ್‌ಗೆ 97.72 ರೂ.ಗೆ ಹೆಚ್ಚಳವಾಗಿದೆ.ರಾಜ್ಯ ಸರಕಾರಗಳು ವಿಧಿಸುವ ವ್ಯಾಟ್‌ನಿಂದಾಗಿ ರಾಜ್ಯಗಳಿಂದ ರಾಜ್ಯಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಬದಲಾಗುತ್ತವೆ.ದೇಶದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 30, 2021ರಂದು ಲೀಟರ್ ಪೆಟ್ರೋಲ್, ಡೀಸೆಲ್ ದರಗಳು ಹೀಗಿವೆ,
ನಗರ
ಪೆಟ್ರೋಲ್ (ರೂ.ಗಳಲ್ಲಿ)
ಡೀಸೆಲ್ (ರೂ.ಗಳಲ್ಲಿ)
ಹೊಸದಿಲ್ಲಿ
108.99
97.72
ಮುಂಬಯಿ
114.81
105.86
ಚೆನ್ನೈ
105.74
101.92
ಕೊಲ್ಕೊತ್ತಾ
109.46
100.84
ಬೆಂಗಳೂರು
112.79
103.72
ಹೈದರಾಬಾದ್
113.36
106.60
ದೇಶದ ವಾಣಿಜ್ಯ ರಾಜಧಾನಿ ಮುಂಬಯಿನಲ್ಲಿ ಪೆಟ್ರೋಲ್ ದರ 34 ಪೈಸೆ ಹೆಚ್ಚಳವಾಗಿದ್ದು ಲೀಟರ್‌ಗೆ 114.81 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್ ದರವೂ 34 ಪೈಸೆ ಏರಿಕೆಯಾಗಿದ್ದು, ಲೀಟರ್ ದರ 105.86 ರೂ.ಗೆ ಹೆಚ್ಚಳವಾಗಿದೆ.ರಾಜ್ಯದಲ್ಲಿ ಎಷ್ಟಿದೆ ದರ?ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಪೆಟ್ರೋಲ್ ದರ 37 ಪೈಸೆ ಏರಿಕೆಯಾಗಿದ್ದು ಬರೋಬ್ಬರಿ 112.79 ರೂ.ಗೆ ಹೆಚ್ಚಳವಾಗಿದೆ. ಡೀಸೆಲ್ ದರವೂ 37 ಪೈಸೆ ಹೆಚ್ಚಳವಾಗಿದ್ದು 103.72 ರೂ.ಗೆ ಏರಿಕೆಯಾಗಿದೆ.ಕಡಲನಗರಿ ಮಂಗಳೂರುಪೆಟ್ರೋಲ್: 111.94 ರೂ., ಡೀಸೆಲ್: 102.90 ರೂ.ಅರಮನೆ ನಗರಿ ಮೈಸೂರುಪೆಟ್ರೋಲ್: 112.29 ರೂ., ಡೀಸೆಲ್: 103.26 ರೂ.ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ದರ ದಾಖಲೆಯ ಪ್ರಮಾಣದಲ್ಲಿದ್ದು, ಇಲ್ಲಿ ಪ್ರತಿ ಲೀಟರ್ ಪೆಟ್ರೋಲ್ 121.25 ರೂ.ಗೆ ಮಾರಾಟವಾಗುತ್ತಿದೆ. ಇಲ್ಲಿ ಡೀಸೆಲ್ ದರ ಪ್ರತಿ ಲೀಟರ್‌ಗೆ 112.15 ರೂ. ಇದೆ. ಮಧ್ಯ ಪ್ರದೇಶದ ಅನುಪ್ಪುರ್ ನಗರದಲ್ಲಿಯೂ ಪೆಟ್ರೋಲ್ ದರ ಲೀಟರ್‌ಗೆ 120 ರೂ. ಗಡಿ ದಾಟಿದೆ.