![](https://vijaykarnataka.com/photo/86635486/photo-86635486.jpg)
ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ದರ ಕಂಡು ಜನ ಸಾಮಾನ್ಯರು ನಿಗಿ ನಿಗಿ ಕೆಂಡವಾಗುತ್ತಿರುವಾಗಲೇ ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯಾಗಿದೆ. ದಿನ ನಿತ್ಯ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಾಣುತ್ತಿದ್ದು, ಇಂದು ಕೂಡ ಈ ದರದಲ್ಲಿ ಏರಿಕೆ ಆಗಿದೆ. ಸೆಪ್ಟೆಂಬರ್ ತಿಂಗಳ ಕೊನೆಯ ದಿನವಾದ ಇಂದು(ಗುರುವಾರ) ಕೂಡ ತೈಲ ದರ ಏರಿಕೆಯಾಗಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ಗೆ 26 ಪೈಸೆ ಏರಿದರೆ, ಪ್ರತೀ ಒಂದು ಲೀಟರ್ ಡೀಸೆಲ್ ದರದಲ್ಲಿ 32 ಪೈಸೆ ಏರಿಕೆ ಕಂಡಿದೆ.
ಇಂದು ಕೂಡ ಏರಿಕೆಯಾಗುವ ಮೂಲಕ ಕಳೆದ ಎರಡು ವಾರಗಳಿಂದ ಪ್ರತಿ ನಿತ್ಯ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಂಡಂತೆ ಆಗಿದೆ. ಇನ್ನು ಜನರ ಅತ್ಯವಶ್ಯಕ ವಸ್ತುವಾಗಿರುವ ಇಂಧನದ ದರ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರಗಳು ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಸುಂಕ ಕಡಿತಗೊಳಿಸುವುದಿಲ್ಲ ಎಂದು ಈಗಾಗಲೇ ಕೇಂದ್ರ ಸ್ಪಷ್ಟನೆ ನೀಡಿದೆ.
ಇನ್ನು ಇಂದು ತೈಲ ದರ 26 ಹಾಗೂ 32 ಪೈಸೆ ಹೆಚ್ಚಳವಾಗುವ ಮೂಲಕ ಸಾರ್ವಕಾಲಿಕವಾಗಿ ದಾಖಲೆಯತ್ತ ತೈಲದ ಬೆಲೆ ಏರಿದೆ. ಈಗಾಗಲೇ ಪೆಟ್ರೋಲ್ ಶತಕದ ಗಡಿ ದಾಟಿದ್ದು, ಶತಕದ ಅಂಚಿನಲ್ಲಿದೆ. ಇದರ ಪರಿಣಾಮ ವಾಹನ ಸವಾರರು ಅಂತೂ ಅತ್ತ ಉಗಿಯಲೂ ಆಗದೆ ಇತ್ತ ನುಂಗಲೂ ಆಗದಂತಹ ಪರಿಸ್ಥಿತಿಯಲ್ಲಿದ್ದಾರೆ.
ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಪ್ರಮುಖ ಮಹಾ ನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.
ಸಿಲಿಕಾನ್ ಸಿಟಿ ಬೆಂಗಳೂರುಪೆಟ್ರೋಲ್: ₹105.18, ಡೀಸೆಲ್: ₹95.38
ಕಡಲನಗರಿ ಮಂಗಳೂರುಪೆಟ್ರೋಲ್: ₹104.54, ಡೀಸೆಲ್: ₹94.76
ಅರಮನೆ ನಗರಿ ಮೈಸೂರುಪೆಟ್ರೋಲ್: ₹105.16, ಡೀಸೆಲ್: ₹95.36
ರಾಷ್ಟ್ರ ರಾಜಧಾನಿ ಹೊಸದಿಲ್ಲಿಪೆಟ್ರೋಲ್: ₹101.64, ಡೀಸೆಲ್: ₹89.87
ಮಹಾರಾಷ್ಟ್ರ ರಾಜಧಾನಿ ಮುಂಬಯಿಪೆಟ್ರೋಲ್ : ₹107.71, ಡೀಸೆಲ್ : ₹97.52
ತಮಿಳುನಾಡು ರಾಜಧಾನಿ ಚೆನ್ನೈಪೆಟ್ರೋಲ್ : ₹99.46, ಡೀಸೆಲ್ : ₹94.55
ಪಶ್ಚಿಮ ಬಂಗಾಳದ ಕೋಲ್ಕೊತ್ತಾ
ಪೆಟ್ರೋಲ್ : ₹102.17, ಡೀಸೆಲ್ : ₹92.97