ತೊಗರಿ ದರ ದಿಢೀರ್ ಏರಿಕೆ, ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಜಂಪ್

ತೊಗರಿ ಕಣಜ ಕಲಬುರಗಿಯಲ್ಲಿ ಕಳೆದ ವರ್ಷ ಪ್ರವಾಹ ಮತ್ತು ನೆಟೆ ರೋಗದಿಂದಾಗಿ ಇಳುವರಿ ಕಡಿಮೆಯಾಗಿದ್ದರಿಂದ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇಲ್ಲಿನ ಗಂಜ್ ಎಪಿಎಂಸಿಯಲ್ಲಿ ಕ್ವಿಂಟಾಲ್‌ಗೆ ಬುಧವಾರ ಗರಿಷ್ಠ 12,140 ರೂಪಾಯಿ ದರ ತಲುಪಿದ್ದು, ಈ ತಿಂಗಳ ಆರಂಭದಲ್ಲಿ 10 ಸಾವಿರ ರೂಪಾಯಿ ಇದ್ದ ದರ ಈಗ ದಿಢೀರ್‌ನೇ 12 ಸಾವಿರ ರೂ.ಗಳ ಗಡಿ ದಾಟಿದೆ.